ಬೀದರ: 12 ಲಕ್ಷ ಮೌಲ್ಯದ ಶ್ರೀಗಂಧದ ಕಟ್ಟಿಗೆ ಜಪ್ತಿ; ನಾಲ್ವರ ಬಂಧನ
Team Udayavani, Sep 10, 2020, 7:30 PM IST
ಬೀದರ: ಔರಾದ ಪಟ್ಟಣದ ಚನ್ನಬಸವೇಶ್ವರ ಬಡಾವಣೆಯ ಮನೆಯೊಂದರ ಮೇಲೆ ಪೊಲೀಸ ಅಧಿಕಾರಿಗಳ ತಂಡ ದಾಳಿ ನಡೆಸಿ ಸುಮಾರು 12.50 ಲಕ್ಷ ರೂ. ಮೌಲ್ಯದ 2 ಕ್ವಿಂಟಾಲ್ ಶ್ರೀಗಂಧದ ಮರದ ಕಟ್ಟಿಗೆಯನ್ನು ಜಪ್ತಿ ಮಾಡಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.
ಮನೆಯಲ್ಲಿ ಶ್ರೀಗಂಧದ ಕಟ್ಟಿಗೆಗಳನ್ನು ಸಂಗ್ರಹಿಸಿ ಮಾರಾಟ ಮಾಡಲು ಇಡಲಾಗಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ, ಔರಾದ ಠಾಣೆಯ ಪೊಲೀಸರು ನ್ಯಾಯಾಲಯದಿಂದ ಮನೆ ಶೋಧನಾ ವಾರಂಟ್ ಪಡೆದು ದಾಳಿ ನಡೆಸಿದ್ದಾರೆ. ಈ ವೇಳೆ 12 ಲಕ್ಷ ಮೌಲ್ಯದ 2 ಕ್ವಿಂ. ಶ್ರೀಗಂಧ ಮರದ ಕಟ್ಟಿಗೆ, 50 ಸಾವಿರ ವೌಲ್ಯದ ಎರಡು ಬೈಕ್‌ಗಳನ್ನು ಜಪ್ತಿ ಮಾಡಿ, ಸಂತೋಷ ವಿಶ್ವನಾಥ ಡ್ಯಾಡಂಗಲೆ, ನರಸಿಂಗ್ ತುಳಸಿರಾಮ್ ಮಾನೆ, ಶಿವಕುಮಾರ ಲಕ್ಷ್ಮಣ ದ್ಯಾಡಂಗಲೆ, ಅಶೋಕ ರಾಜಪ್ಪ ಹೆಳವಾ ಅವರನ್ನು ಬಂಧಿಸಿದ್ದಾರೆ. ಔರಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಎಸ್ಪಿ ದೇವರಾಜು ಬಿ., ಸಿಪಿಐ ಟಿ.ಆರ್. ರಾಘವೇಂದ್ರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಪಿಎಸ್‌ಐ ಸುವರ್ಣ, ಎಎಸ್‌ಐ ರಮೇಶ, ಸಿಬ್ಬಂದಿಗಳಾದ ಸುನೀಲ ಕೋರಿ, ರಾಜಕುಮಾರ, ಮಲ್ಲಮ್ಮ, ಶರಣಪ್ಪ, ರಾಜಕುಮಾರ ಪಂಚಾಳ, ನರಸರೆಡ್ಡಿ, ಶ್ರೀನಿವಾಸ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್
Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ
Mulki: ರೈಲಿನಲ್ಲಿ ಕೊಲೆ: ಓರ್ವ ಸೆರೆ
Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ
BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.