ಉದಯವಾಣಿ ಯಶೋದಾ ಕೃಷ್ಣ ಫೋಟೋ ಸ್ಪರ್ಧೆಗೆ ಆಹ್ವಾನ
Team Udayavani, Sep 11, 2020, 6:00 AM IST
ಸಾಂದರ್ಭಿಕ ಚಿತ್ರ
ಮಣಿಪಾಲ: ಉದಯವಾಣಿಯು ಮಣಿಪಾಲ ಆವೃತ್ತಿಯ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಓದುಗರಿಗಾಗಿ ಈ ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ “ಯಶೋದಾ ಕೃಷ್ಣ’ ಫೋಟೋ ಸ್ಪರ್ಧೆಯನ್ನು ಏರ್ಪಡಿಸಿದೆ. ಸಾಮಾನ್ಯವಾಗಿ ಮುದ್ದು ಕೃಷ್ಣ ಎನ್ನುವುದು ಇದ್ದದ್ದೇ. ಆದರೆ ತಾಯಿ ಮತ್ತು ಮಗುವಿನ ಪ್ರೀತಿಯನ್ನು ಎತ್ತಿ ತೋರುವುದು ವಿಶಿಷ್ಟ. ಹಾಗಾಗಿ ಯಶೋದಾ ಕೃಷ್ಣ ಫೋಟೋ ಸ್ಪರ್ಧೆ.
ನಿಯಮಗಳು: ಫೋಟೋಗಳು ಸ್ವಾಭಾವಿಕವಾಗಿರಬೇಕು. ಕೃಷ್ಣ 7 ವರ್ಷ ವಯಸ್ಸಿನೊಳಗಿನವರಾಗಿರಬೇಕು, ಯಶೋದೆಗೆ ವಯಸ್ಸಿನ ನಿರ್ಬಂಧವಿಲ್ಲ. ಇಮೇಲ್‌ನಲ್ಲಿ ಕಳುಹಿಸುವುದಾದರೆ ಕನಿಷ್ಠ 1 ಎಂಬಿ ಗಾತ್ರದಲ್ಲಿರಬೇಕು. ವ್ಯಾಟ್ಸ್‌ಆ್ಯಪ್‌ನಲ್ಲಿ ಕಳುಹಿಸುವವರು ಡಾಕ್ಯುಮೆಂಟ್ ಫಾರ್ಮ್ಯಾಟ್‌ನಲ್ಲಿ ಕಳುಹಿಸಬೇಕು. ಒಬ್ಬರು ಎರಡು ಭಂಗಿಯ ಚಿತ್ರಗಳನ್ನು ಕಳುಹಿಸಬಹುದು. ಗುಣಮಟ್ಟದ ಛಾಯಾಚಿತ್ರಗಳನ್ನು ಮಾತ್ರ ಪರಿಗಣಿಸಲಾಗುವುದು. ತೀರ್ಪುಗಾರರ ಮೆಚ್ಚುಗೆ ಪಡೆದ ಚಿತ್ರಗಳನ್ನೂ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
ಪ್ರಥಮ, ದ್ವಿತೀಯ (3), ತೃತೀಯ (6) ಹಾಗೂ 12 ಪ್ರೋತ್ಸಾಹಕರ ಬಹುಮಾನಗಳಿರಲಿವೆ. ಪ್ರಥಮಕ್ಕೆ 10 ಸಾವಿರ, ದ್ವಿತೀಯಕ್ಕೆ 5 ಸಾವಿರ, ತೃತೀಯಕ್ಕೆ 3,500 ಸಾವಿರ ಹಾಗೂ ಪ್ರೋತ್ಸಾಹಕರ ವಿಭಾಗಕ್ಕೆ 2,000 ರೂ. ಮೌಲ್ಯದ ಬಹುಮಾನ ನೀಡಲಾಗುವುದು.
ಸೆಪ್ಟಂಬರ್ 13, 2020 ಫೋಟೋಗಳನ್ನು ಕಳುಹಿಸಲು ಕಡೇ ದಿನ. ಅಂದು ಸಂಜೆ 6ರ ಅನಂತರ ತಲುಪುವ ಚಿತ್ರಗಳು ಸ್ಪರ್ಧೆಗೆ ಪರಿಗಣಿತವಾಗುವುದಿಲ್ಲ. ಯಶೋದಾ ಕೃಷ್ಣರ ಹೆಸರು, ಊರು, ಸಂಪರ್ಕ ಸಂಖ್ಯೆ ನಮೂದಿಸದ ಫೊಟೋಗಳನ್ನು ಪರಿಗಣಿಸಲಾಗುವುದಿಲ್ಲ.
ನಮ್ಮ ಇಮೇಲ್ ವಿಳಾಸ [email protected], ವಾಟ್ಸ್ ಆ್ಯಪ್ ನಂಬರ್ 9148594259. ಅಂಚೆ ಮೂಲಕ ಕಳುಹಿಸುವವರು (ಛಾಯಾಚಿತ್ರ ಗಾತ್ರ ಕನಿಷ್ಠ 16 ಸೆಂ.ಮೀ. x 12 ಸೆಂ.ಮೀ.) ಯಶೋದಾ ಕೃಷ್ಣಾ ಸ್ಪರ್ಧೆ ವಿಭಾಗ, ಉದಯವಾಣಿ ಕಟ್ಟಡ, ಮಣಿಪಾಲ-576104 ಇಲ್ಲಿಗೆ ಕಳುಹಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಕಾರು ಢಿಕ್ಕಿ; ಸ್ಕೂಟರ್ ಸವಾರನಿಗೆ ಗಾಯ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.