ಇನ್ನೆಷ್ಟು ಧ್ವನಿಗಳನ್ನು ಹತ್ತಿಕ್ಕುವಿರಿ ನೀವು?: CM ಠಾಕ್ರೆಗೆ ನಟಿ ಕಂಗನಾ‌ ಪ್ರಶ್ನೆ

Team Udayavani, Sep 11, 2020, 6:22 AM IST

ಇನ್ನೆಷ್ಟು ಧ್ವನಿಗಳನ್ನು ಹತ್ತಿಕ್ಕುವಿರಿ ನೀವು?:  CM ಠಾಕ್ರೆಗೆ ನಟಿ ಕಂಗನಾ‌ ಪ್ರಶ್ನೆ

ಮುಂಬೈ: ಬಾಲಿವುಡ್‌ ನಟಿ ಕಂಗನಾ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ಜಟಾಪಟಿ ಗುರುವಾರವೂ ಮುಂದುವರಿದಿದೆ. ಬಿಎಂಸಿ ಬುಧವಾರ ತೆರವುಗೊಳಿಸಲು ಯತ್ನಿಸಿದ ತಮ್ಮ ಬಂಗಲೆಗೆ ಕಂಗನಾ ಗುರುವಾರ ಭೇಟಿ ನೀಡಿ, ಹಾನಿ ಕುರಿತು ಪರಿಶೀಲಿಸಿದ್ದಾರೆ.

ಜತೆಗೆ, ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ಮುಂದುವರಿಸಿದ್ದು, “ನೀವು ನನ್ನ ಬಾಯಿ ಮುಚ್ಚಿಸಬಹುದು. ಆದರೆ ನನ್ನ ಧ್ವನಿಯು ಕೋಟ್ಯಂತರ ಮಂದಿಯಲ್ಲಿ ಅನುರಣಿಸುತ್ತಿದೆ. ನೀವೆಷ್ಟು ಬಾಯಿಗಳನ್ನು ಮುಚ್ಚಿಸಲು ಸಾಧ್ಯ, ಎಷ್ಟು ಧ್ವನಿಗಳನ್ನು ಹತ್ತಿಕ್ಕಲು ಸಾಧ್ಯ? ನೀವು ಒಬ್ಬ ನಿರಂಕುಶ ಆಡಳಿತಗಾರ’ ಎಂದು ಸಿಎಂ ಉದ್ಧವ್‌ರನ್ನು ಉದ್ದೇಶಿಸಿ ಕಂಗನಾ ಕಿಡಿಕಾರಿದ್ದಾರೆ.

“ಬಾಳಾಸಾಹೇಬ್‌ ಠಾಕ್ರೆಯವರು ಯಾವ ಸಿದ್ಧಾಂತ ಇಟ್ಟುಕೊಂಡು ಶಿವಸೇನೆಯನ್ನು ಕಟ್ಟಿ­ದರೋ, ಆ ಸಿದ್ಧಾಂತವನ್ನು ಇಂದು ಶಿವಸೇನೆ ನಾಯಕರು ಅಧಿಕಾರಕ್ಕಾಗಿ ಮಾರಾಟ ಮಾಡಿ­ಕೊಂಡಿ­­ದ್ದಾರೆ. ಶಿವಸೇನೆಯು ಈಗ ಸೋನಿಯಾ ­ಸೇನೆ ಆಗಿದೆ. ನನ್ನ ಮನೆ ಕೆಡವಲು ಬಂದ ಗೂಂಡಾಗಳನ್ನು ಪಾಲಿಕೆ ಸಿಬ್ಬಂದಿ ಎನ್ನಬೇಡಿ’ ಎಂದೂ ಹೇಳಿದ್ದಾರೆ.

ಐಎಂಪಿಪಿಎ ಖಂಡನೆ: ಇದೇ ವೇಳೆ, ಕಂಗನಾ ಬಂಗಲೆ ಕೆಡವಲು ಬಿಎಂಸಿ ನಡೆಸಿದ ಯತ್ನವನ್ನು ಇಂಡಿಯನ್‌ ಮೋಷನ್‌ ಪಿಕ್ಚರ್ಸ್‌ ಪ್ರೊಡ್ನೂಸರ್ಸ್‌ ಅಸೋಸಿಯೇಷನ್‌(ಐಎಂಪಿಪಿಎ) ಖಂಡಿಸಿದೆ. ರಾಜ್ಯ ಸರ್ಕಾರವು ರಣೌತ್‌ ಪ್ರಕರಣವನ್ನು ನಿಭಾಯಿ­ಸಿದ ರೀತಿಗೆ ರಾಜ್ಯಪಾಲ ಬಿ.ಎಸ್‌. ಕೋಶಿಯಾರಿ ಅವರೂ ಅಸಮಾಧಾನ ವ್ಯಕ್ತಪಡಿಸಿ­ದ್ದಾರೆ. ಈ ನಡುವೆ, ಸೆ. 22ರವರೆಗೂ ಬಂಗಲೆ ತೆರವು ಕಾರ್ಯ ಕೈಗೊಳ್ಳುವಂತಿಲ್ಲ ಎಂದು ಬಾಂಬೆ ಹೈಕೋರ್ಟ್‌ ಗುರುವಾರ ಆದೇಶಿಸಿದೆ. ಖಾರ್‌ನ ಕಂಗನಾ ಮನೆಗೆ ಹಾಗೂ ಬಾಂದ್ರಾದ ಬಂಗಲೆಗೆ ಮುಂಬೈ ಪೊಲೀಸ್‌ ಭದ್ರತೆ ನೀಡಿದೆ.

ಕಂಗನಾ ವಿರುದ್ಧ ದೂರು: ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಕಂಗನಾ ವಿರುದ್ಧ ವಿಕ್ರೊಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನಗರದ ವಕೀಲ ನಿತಿನ್‌ ಮಾನೆ ಎಂಬವರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದು, ಇನ್ನೂ ಎಫ್ಐರ್‌ ದಾಖಲಿಸಿಲ್ಲ ಎಂದಿದ್ದಾರೆ.

ಕಂಗನಾ ಅವರೇ, ನಿಮ್ಮ ದಿಟ್ಟತನಕ್ಕೆ ಹ್ಯಾಟ್ಸ್‌ಆಫ್. ನಿಮಗೆ ಸಂಬಂಧವೇ ಇರದ ವಿಷಯವಾಗಿದ್ದರೂ, ಅದರ ಬಗ್ಗೆ ಧ್ವನಿಯೆತ್ತಿ ಸರ್ಕಾರವನ್ನು ಎದುರುಹಾಕಿಕೊಳ್ಳುವುದು ಸವಾಲೇ ಸರಿ. ನಿಮ್ಮ ನಡೆಯು ನನಗೆ ಭಗತ್‌ಸಿಂಗ್‌ರನ್ನು ನೆನಪಿಸಿದೆ.
ವಿಶಾಲ್‌, ತಮಿಳು ನಟ

ಟಾಪ್ ನ್ಯೂಸ್

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.