ನಗರದಲ್ಲಿ ನೀರು ಸೋರಿಕೆ ತಡೆಗೆ ಶೀಘ್ರವೇ ಸ್ಕಾಡಾ


Team Udayavani, Sep 11, 2020, 1:08 PM IST

ನಗರದಲ್ಲಿ ನೀರು ಸೋರಿಕೆ ತಡೆಗೆ ಶೀಘ್ರವೇ ಸ್ಕಾಡಾ

ಮೈಸೂರು: ನಗರಕ್ಕೆ ಪೂರೈಕೆಯಾಗುವ ಕುಡಿಯುವನೀರು ಎಲ್ಲಿ ಪೋಲಾಗುತ್ತಿದೆ, ಏನೇನು ಅವ್ಯವಹಾರ ನಡೆಯುತ್ತಿದೆ, ಲ್ಲಿ ಏನೇನು ಸಮಸ್ಯೆಗಳಿವೆ ಎಂಬು ದರ ಬಗ್ಗೆ ನಿಗಾ ಇಡಲು ಸ್ಕಾಡಾ(ಸೂಪವೈಸರಿ ಕಂಟ್ರೋಲ್‌ ಎಂಡ್‌ ಡೇಟಾ ಅನಾಲಿಟಿಕ್ಸ್ ಆಕ್ವಿಸಿಷನ್‌) ಎಂಬ ಹೊಸ ತಂತ್ರ ಜ್ಞಾನವೊಂದನ್ನು ಅಭಿವೃದ್ಧಿ ಪಡಿಸಲು ವಾಣಿ ವಿಲಾಸ ನೀರು ಸರಬರಾಜು ಮಂಡಳಿಯು ಮುಂದಾಗಿದೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಮೈಸೂರಿಗೆ ಅವಶ್ಯ ಕತೆ ಇರುವುದು 170 ಎಂಎಲ್‌ಡಿ ನೀರು. ಇಲ್ಲಿಗೆ 260ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಆದರೆ ನಗರದ ಎಷ್ಟೋ ಬಡಾವಣೆಗಳಲ್ಲಿ ನೀರಿನ ಜ್ವಲಂತ ಸಮಸ್ಯೆಇದೆ. ಇದನ್ನು ಬಗೆಹರಿಸಲು ಸ್ಕಾಡಾ ಎಂಬ ಈ ಹೊಸ ತಂತ್ರಜ್ಞಾನ ರೂಪಿಸಲಾಗುತ್ತದೆ ಎಂದರು. ವರ್ಷದೊಳಗೆ ಪೂರ್ಣ: ಐಎಲ್‌ ಎಂಡ್‌ ಎಫ್ಎಸ್‌ ಕಂಪನಿಗೆ ನೀಡಿರುವ ಗುತ್ತಿಗೆಯಲ್ಲಿ ಸ್ಕಾಡಾ ತಂತ್ರಜ್ಞಾನ ಅಳವಡಿಕೆ ಕೂಡ ಸೇರಿದೆ. ಇನ್ನು 24 ತಿಂಗಳೊಳಗೆಎಲ್ಲವೂ ಸಿದ್ಧವಾಗಲಿದೆ. ಈ ಮೂಲಕ ನೀರು ಸರಬ ರಾಜಿನಲ್ಲಿ ಆಗುತ್ತಿರುವ ಅವ್ಯವಹಾರಗಳು ನಿಯಂತ್ರಣಕ್ಕೆ ಬರಲಿವೆ. ಇಂತಹ ಯೋಜನೆಗಳು ಬೃಹತ್‌ ಮೈಸೂರು ಮಹಾನಗರಪಾಲಿಕೆ ರಚನೆಗೆ ಪೂರಕವಾಗಿರಲಿದೆ. ನಗರದ ಅಂಚಿನಲ್ಲಿರುವ ಗ್ರಾಮಗಳನ್ನು ಪಾಲಿಕೆವ್ಯಾಪ್ತಿಗೆ ಸೇರಿಸಿಕೊಂಡರೆ ನೀರು ಸರಬರಾಜು ಹೆಚ್ಚು ಬೇಕಾಗುತ್ತದೆ. ಈ ಪ್ರಕ್ರಿಯೆ ಸ್ಕಾಡಾ ಪೂರಕವಾಗಲಿದೆ ಎಂದು ಮಾಹಿತಿ ನೀಡಿದರು.

9 ಗ್ರಾಪಂ ಸೇರ್ಪಡೆ: ಬೃಹತ್‌ ಮೈಸೂರು ಮಹಾ ನಗರ ಪಾಲಿಕೆ ಮಾಡಲು ನಗರದ ಸುತ್ತಲಿನ 9 ಗ್ರಾಪಂಗಳನ್ನು ಸೇರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ಬಾರಿಯ ಗ್ರಾಪಂ ಚುನಾವಣೆ ನಡೆಯುವ ಮುನ್ನವೇ ಗ್ರಾಮಗಳನ್ನು ನಗರಪಾಲಿಕೆಗೆ ಸೇರಿಸುವ ಪ್ರಕ್ರಿಯೆ ಚುರುಕಾಗಬೇಕು. ಒಮ್ಮೆ ಚುನಾವಣೆ ಸುತ್ತೋಲೆ ಹೊರಡಿಸಿದರೆ ಮತ್ತೆ ಪ್ರಕ್ರಿಯೆ ಮುಂದೂಡಲ್ಪಡು ತ್ತದೆ.ಗ್ರಾಮಗಳನ್ನು ನಗರ ವ್ಯಾಪ್ತಿಗೆ ಸೇರಿಸಿ 15 ಲಕ್ಷಕ್ಕೂ ಹೆಚ್ಚುಜನಸಂಖ್ಯೆ ಆದರೆ ಮೊನೊ ರೈಲು, ಮೆಟ್ರೋ ರೈಲುಸೇರಿದಂತೆ ಸಾಕಷ್ಟು ಯೋಜನೆಗಳನ್ನು ತರಬಹುದು.ಆದ್ದರಿಂದ ಬೃಹತ್‌ ಮೈಸೂರು ಮಹಾನಗರಪಾಲಿಕೆರಚನೆ ಬಗ್ಗೆ ಸಾಕಷ್ಟು ಗಮನ ಹರಿಸಲಾಗುತ್ತಿದೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು.

ಸ್ಕಾಡಾ ತಂತ್ರಜ್ಞಾನ ಕಾರ್ಯವೈಖರಿ ಹೇಗೆ? : ಸ್ಕಾಡಾ ಕುರಿತು ಮಾಹಿತಿ ನೀಡಿದ ವಾಣಿವಿಲಾಸ ನೀರು ಸರಬರಾಜು ಮಂಡಳಿಯ ಎಇಇ ಆಸಿಫ್ “ವಾಣಿವಿಲಾಸ ನೀರು ಸರಬರಾಜು ಕೇಂದ್ರದಲ್ಲಿನಿಯಂತ್ರಣ ಕೊಠಡಿ ಸ್ಥಾಪಿಸಿ ಇಡೀ ನಗರದ ನೀರು ಸರಬರಾಜು ವ್ಯವಸ್ಥೆಯ ಮೇಲೆ ನಿಗಾ ಇಡಲಾಗು ತ್ತದೆ. ಸೋಲಾರ್‌ ಮತ್ತು ಎಲೆಕ್ಟ್ರಿಕಲ್‌ ಆ್ಯಕುcಯೇಟರ್‌ ಗಳು, ಪ್ರೋ ಮೀಟರ್‌, ಕ್ಯಾಮರಾ ಗಳು, ಸೆನ್ಸಾರ್‌ ಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವ ಹಿಸುತ್ತವೆ. ಎಲ್ಲಿಗೆ ಎಷ್ಟು ನೀರು ಸರಬರಾಜಾಗು ತ್ತಿದೆ, ಎಲ್ಲಿ ನೀರುಸೋರಿಕೆಯಾಗುತ್ತಿದೆ, ಎಲ್ಲಿ ಕಳ್ಳತನ ಆಗುತ್ತಿದೆ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಬಹುದು. ಈ ತಂತ್ರಜ್ಞಾನ ಬಳಸಿ ನೀರಿನಲ್ಲಿರುವ ಪಿಎಚ್‌, ಕ್ಲೋರಿನ್‌ ಮತ್ತಿತರ ಅಂಶಗಳ ಪ್ರಮಾಣವನ್ನು ತಿಳಿಯಬಹುದು. ಎಲ್ಲವೂ ಆನ್‌ಲೈನ್‌ ಮೂಲಕ ಆಗಲಿದೆ. ನೀರು ಸರಬರಾಜಿನ ಮೇಲ್ವಿಚರಾಣೆ, ನಿಯಂತ್ರಣ ಎರಡನ್ನೂ ಇದರಿಂದ ಮಾಡಬಹುದು. ಇಂತಹ ವ್ಯವಸ್ಥೆ ಬೆಂಗಳೂರಿನಲ್ಲಿದೆ. ಕೆಲವು ಸಣ್ಣ ಸಣ್ಣ ಊರುಗಳಲ್ಲಿ ನೀರು ಸರಬರಾಜಿನ ಮೇಲ್ವಿಚಾರಣೆ ಇದ್ದರೂ ನಿಯಂತ್ರಣ ವ್ಯವಸ್ಥೆ ಇಲ್ಲ. ಇದು ಸುಮಾರು 50 ಕೋಟಿ ರೂ. ವೆಚ್ಚದ ಯೋಜನೆ’ ಎಂದು ವಿವರಿಸಿದರು.

ಟಾಪ್ ನ್ಯೂಸ್

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

Kerala NCC Camp: ಸೇನಾಧಿಕಾರಿ ಮೇಲೆ ಹಲ್ಲೆ: ಕೇರಳದಲ್ಲಿ ಇಬ್ಬರ ಬಂಧನ

Kerala NCC Camp: ಸೇನಾಧಿಕಾರಿ ಮೇಲೆ ಹಲ್ಲೆ: ಕೇರಳದಲ್ಲಿ ಇಬ್ಬರ ಬಂಧನ

Consumer-Court

Mangaluru: ಖಾಸಗಿ ಬಸ್‌ನಲ್ಲಿ ತಿಗಣೆ ಕಡಿತ: ಮಹಿಳೆಗೆ 1.29 ಲಕ್ಷ ರೂ. ಪರಿಹಾರ ನೀಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dalilama

Visit: ಜ.5ಕ್ಕೆ ಬೈಲುಕುಪ್ಪಗೆ ದಲೈಲಾಮಾ ಭೇಟಿ

5-snehamayi

Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

drowned

Kasaragod: ಬೆಂಗಳೂರಿನ ವ್ಯಕ್ತಿ ನೀರುಪಾಲು

1-mm

State Olympics ಮಂಗಳೂರು, ಉಡುಪಿಯಲ್ಲಿ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

1-MRPL

MRPL: ನಾಲ್ಕು ಪ್ರತಿಷ್ಠಿತ ಪಿಆರ್‌ಎಸ್‌ಐ ಶ್ರೇಷ್ಠ ಪ್ರಶಸ್ತಿ

1-k-u

Karavali Utsav: ಶ್ವಾನ ಪ್ರದರ್ಶನ, ಚಲನಚಿತ್ರೋತ್ಸವ, ಯುವಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.