ಆಪರೇಷನ್ ಕುರಿ ಫಾರ್ಮ್…!ನೆಲ ಮಾಳಿಗೆಯಲ್ಲಿ ಕ್ವಿಂಟಲ್ ಗಟ್ಟಲೆ ಗಾಂಜಾ ಪತ್ತೆ
ಈ ವೇಳೆ ಕೋಟ್ಯಂತರ ರೂ. ಮೌಲ್ಯದ 1,300 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
Team Udayavani, Sep 11, 2020, 6:12 PM IST
ಬೆಂಗಳೂರು: ಬೆಂಗಳೂರಿನ ಇತಿಹಾಸದಲ್ಲೇ ಹಿಂದೆಂದೂ ಕೇಳರಿಯದಷ್ಟು ಪ್ರಮಾಣದ ಗಾಂಜಾ ಏಕಕಾಲದಲ್ಲಿ ಪತ್ತೆಯಾಗಿದೆ! ನಗರದಲ್ಲಿ ಬಂಧಿತನಾದ ಗಾಂಜಾ ದಂಧೆಕೋರ ನೀಡಿದ ಸಣ್ಣ ಸುಳಿವಿನ ಆಧಾರದ ಮೇರೆಗೆ ಶೇಷಾದ್ರಿಪುರಂ ಠಾಣೆ ಪೊಲೀಸರು 10 ದಿನಗಳ ಕಾಲ “ಆಪರೇಷನ್ ಕುರಿಫಾರ್ಮ್’ ನಡೆಸಿದ್ದಾರೆ.
ಈ ವೇಳೆ ಕೋಟ್ಯಂತರ ರೂ. ಮೌಲ್ಯದ 1,300 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆಯ ಲಚ್ಚುನಾಯಕ ತಾಂಡಾದ ಕುರಿ ಫಾರ್ಮ್ ಒಂದರಲ್ಲಿಭೂಗತವಾಗಿ ಅಡಗಿಸಿ ಇರಿಸಿದ್ದ ಈ ಭಾರೀ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಹೊರನೋಟಕ್ಕೆ ಕುರಿ ಶೆಡ್ ಇದ್ದು, ಒಳಗೆ ನೆಲಮಾಳಿಗೆಯಲ್ಲಿ ಕ್ವಿಂಟಲ್ ಗಟ್ಟಲೆ ಗಾಂಜಾ ಶೇಖರಿಸಿ ಇಡಲಾಗಿತ್ತು. ಈ ಬಗ್ಗೆ ಸ್ಥಳೀಯರಿಗೆ ಸಣ್ಣ ಅನುಮಾನವೂ ಬಾರದ ರೀತಿಯಲ್ಲಿ ಗಾಂಜಾ ದಾಸ್ತಾನು ಮಾಡಿ ಇಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣ ಸಂಬಂಧ ಅಂತಾರಾಜ್ಯ ಗಾಂಜಾ ದಂಧೆಕೋರರಾದ ಕಲಬುರಗಿಯ ಚಂದ್ರಕಾಂತ್, ಬೀದರ್‌ನ ನಾಗನಾಥ, ವಿಜಯಪುರದ ಸಿದ್ದುನಾಥ ಲಾವಟೆ, ಬೆಂಗಳೂರಿನ ಗಾಯತ್ರಿನಗರದ ಜ್ಞಾನಶೇಖರ್‌ನನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಕುತೂಹಲದ ವಿಷಯವೆಂದರೆ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ನಡೆಸಿದ ಕಾರ್ಯಾಚರಣೆ ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿದಿರಲಿಲ್ಲವಾಗಿತ್ತಂತೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.