ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿ “ಮಿಸೆಸ್ ಕೊರೊನಾ’ಗೆ ಸಮಸ್ಯೆ!
Team Udayavani, Sep 13, 2020, 6:05 AM IST
ಕೊಟ್ಟಾಯಂ: ಕೇರಳದ ಕೊಟ್ಟಾಯಂನ ಮಹಿಳೆಯೊಬ್ಬರು ಈಗ ತಮ್ಮ ಹೆಸರು ಹೇಳಲು ಮುಜುಗರ ಪಡುವಂತಾಗಿದೆ. ಏಕೆಂದರೆ, ಇವರ ಹೆಸರೇ ಕೊರೊನಾ! ಹಾಗೆಂದು, ಈಗ ಬಂದಿರುವ ಕೊರೊನಾವನ್ನು ನೋಡಿ ಅವರು ಹೆಸರು ಬದಲಿಸಿಕೊಂಡಿಲ್ಲ. ಕೊರೊನಾಕ್ಕಿಂತಲೂ ಮುಂಚೆಯೇ ಅವರು ಕೊರೊನಾ ಆಗಿದ್ದವರು!
“ನನ್ನ ಹೆಸರಿನ ಸಾಂಕ್ರಾಮಿಕವೊಂದು ಹರಡುತ್ತದೆ ಎಂದು ಕನಸು ಮನಸಲ್ಲೂ ಭಾವಿಸಿರಲಿಲ್ಲ. ಬಾಲ್ಯದಲ್ಲಿ ನನ್ನ ಅಪ್ಪ-ಅಮ್ಮ ಬ್ಯಾಪ್ಟಿಸಂ ಮಾಡಿಸಲು ಸ್ಥಳೀಯ ಚರ್ಚ್ಗೆ ಕರೆದೊಯ್ದಾಗ ಅಲ್ಲಿನ ಫಾದರ್ ನನಗೆ “ಕೊರೊನಾ’ ಎಂದು ನಾಮಕರಣ ಮಾಡಿದ್ದರು. ಕೊರೊನಾ ಅಂದರೆ “ಕಿರೀಟ’ ಅಂತ ಫಾದರ್ ಜೇಮ್ಸ್ ನನ್ನ ಪೋಷಕರಿಗೆ ಹೇಳಿದ್ದರು’ ಎನ್ನುತ್ತಾರೆ ಮಿಸೆಸ್ ಎಸ್. ಕೊರೊನಾ.
34 ವರ್ಷದ ಕೊರೊನಾಗೆ ಇಬ್ಬರು ಪುತ್ರರಿದ್ದಾರೆ. ಕೊರೊನಾ ಸೋಂಕು ಬಂದ ಮೇಲೆ ನನ್ನ ಹೆಸರನ್ನು ಉಲ್ಲೇಖೀಸಿ ಅನೇಕರು ವ್ಯಂಗ್ಯವಾಡಿದ್ದೂ ಇದೆ. ಕೆಲವರು ನನ್ನನ್ನು ನೋಡಿ “ಗೋ ಕೊರೊನಾ ಗೋ’ ಎನ್ನುತ್ತಾರೆ. ನನ್ನ ಮಕ್ಕಳೇ ನನ್ನನ್ನು “ವೈರಸ್ ಅಮ್ಮಾ’, “ಕೊರೊನಮ್ಮಾ’ ಎಂದೆಲ್ಲ ಕರೆಯುತ್ತಾರೆ. ಆದರೆ ನಾನು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಜನರು ನನ್ನಂಥ ಬಡ ಕೊರೊನಾಳನ್ನು ಬಿಟ್ಟು, ನೈಜ ಕೊರೊನಾದಿಂದ ತಮ್ಮನ್ನು ತಾವು ರಕ್ಷಿಸಿಕೊಂಡರೆ ಅಷ್ಟೇ ಸಾಕು ಎನ್ನುತ್ತಾರೆ ಶ್ರೀಮತಿ ಕೊರೊನಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.