ಗುಣಮುಖರಾದ ಸ್ಟೀವ್ ಸ್ಮಿತ್ ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲು ರೆಡಿ
Team Udayavani, Sep 13, 2020, 12:41 PM IST
ಮ್ಯಾಂಚೆಸ್ಟರ್: ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಎರಡನೇ ಪಂದ್ಯವಾಡಲು ಸಿದ್ದರಾಗಿದ್ದಾರೆ. ಅಭ್ಯಾಸ ವೇಳೆ ತಲೆಗೆ ಚೆಂಡು ಬಡಿದ ಕಾರಣ ಸ್ಟೀವ್ ಸ್ಮಿತ್ ಗಾಯಗೊಂಡಿದ್ದರು. ಇದೇ ಕಾರಣದಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು.
ಶುಕ್ರವಾರ ನಡೆದ ಮೊದಲ ಪಂದ್ಯಕ್ಕೂ ಮೊದಲು ಅಭ್ಯಾಸ ನಡೆಸುತ್ತಿದ್ದಾಗ ಸ್ಮಿತ್ ಗಾಯಗೊಂಡಿದ್ದರು. ಸಿಬ್ಬಂದಿಯೊಬ್ಬರು ಥ್ರೋ ಡೌನ್ ಮಾಡುತ್ತಿದ್ದ ವೇಳೆ ಸ್ಮಿತ್ ಅವರ ತಲೆಗೆ ಚೆಂಡು ಬಡಿದಿತ್ತು. ಹೀಗಾಗಿ ಅಂತಿಮ ವೇಳೆಯಲ್ಲಿ ಅವರು ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದರು.
ಸದ್ಯ ಸ್ಮಿತ್ ಗುಣಮುಖರಾಗಿದ್ದು, ಎರಡನೇ ಪಂದ್ಯಕ್ಕೆ ಫಿಟ್ ಆಗಿದ್ದಾರೆ. ಮೊದಲ ಪಂದ್ಯದಲ್ಲಿ ಉಪಯುಕ್ತ ಅರ್ಧಶತಕ ಬಾರಿಸಿದ್ದ ಮಿಚೆಲ್ ಮಾರ್ಶ್ ತೊಡೆ ಸಂದು ನೋವಿಗೆ ಒಳಗಾಗಿದ್ದಾರೆ. ಹೀಗಾಗಿ ಅವರು ಎರಡನೇ ಪಂದ್ಯ ಆಡುವುದು ಅನುಮಾನ ಎನ್ನಲಾಗದೆ.
ಇದನ್ನೂ ಓದಿ: ಅದ್ಭುತ ಕಮ್ ಬ್ಯಾಕ್: ಅಜರೆಂಕಾ ವಿರುದ್ಧ ಗೆದ್ದ ಒಸಾಕಾಗೆ ಯುಎಸ್ ಓಪನ್ ಕಿರೀಟ
ಎರಡನೇ ಪಂದ್ಯ ಇಂದು (ಭಾನುವಾರ) ನಡೆಯಲಿದೆ. ಮೊದಲ ಪಂದ್ಯ ಗೆದ್ದಿರುವ ಆಸೀಸ್ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.