ಪಕ್ಷಿ ಲೋಕದ ಅಚ್ಚರಿ: ರೆಕ್ಕೆ ಬಡಿಯದೆ 100 ಮೈಲು ಕ್ರಮಿಸುವ ಆ್ಯಂಡಿಯಾನ್ ಕೊಂಡೊರ್
Team Udayavani, Sep 13, 2020, 6:09 PM IST
ಹಕ್ಕಿ ಮಾನವನಿಗೆ ಯಾವತ್ತೂ ಕುತೂಹಲದ ಕೇಂದ್ರ ಬಿಂದು. ಅದರ ಜೀವನ ಶೈಲಿ, ಆಹಾರ ಪದ್ಧತಿ, ವಲಸೆ ರೀತಿ ಅಧ್ಯಯನ ಮಾಡಿದಷ್ಟೂ ಕುತೂಹಲ ಉಳಿಕೊಳ್ಳುತ್ತದೆ. ಅದರಲ್ಲೂ ಮುಖ್ಯವಾಗಿ ಹಾರಾಡುವ ಸಾಮರ್ಥ್ಯವನ್ನು ಮಾನವ ಅಂದಿಗೂ ಇಂದಿಗೂ ಅಚ್ಚರಿಯ ಕಣ್ಣುಗಳಿಂದ ನೋಡುತ್ತಾನೆ. ಪ್ರತಿಯೊಬ್ಬನೂ ಒಮ್ಮೆಯಾದರೂ ಹಕ್ಕಿಯಂತೆ ಹಾರಾಡಬೇಕು ಎನ್ನುವ ಕನಸು ಕಂಡೇ ಇರುತ್ತಾನೆ. ರೆಕ್ಕೆಯನ್ನು ಬಡಿಯುತ್ತಾ ಆಕಾಶದಲ್ಲಿ ತೇಲಿ ಹೋಗುವ ಕಲ್ಪನೆಯೇ ಹಲವರಿಗೆ ರೋಮಾಂಚನಕಾರಿ ಅನುಭವ ನೀಡುತ್ತದೆ. ಅಂತಹ ಕುತೂಹಲಕಾರಿ ಲೋಕದ ಅಚ್ಚರಿಯೊಂದನ್ನು ಇಲ್ಲಿ ಹೇಳುತ್ತಿದ್ದೇವೆ. ಅದುವೇ ರೆಕ್ಕೆಯನ್ನು ಕಡಿಮೆ ಬಡಿಯುವ ಮೂಲಕ ಪಕ್ಷಿ ತಜ್ಞರನ್ನೇ ಅಚ್ಚರಿಗೆ ದೂಡಿದ ಆ್ಯಂಡಿಯಾನ್ ಕೊಂಡೊರ್ ಬಗ್ಗೆ.
ಜಗತ್ತಿನಲ್ಲೇ ಅತೀ ಎತ್ತರದಲ್ಲಿ ಹಾರಾಡುವ ಪಕ್ಷಿಗಳಲ್ಲಿ ಆ್ಯಂಡಿಯಾನ್ ಕೊಂಡೊರ್ ಕೂಡಾ ಒಂದು. ಸುಮಾರು 10 ಅಡಿ ಎತ್ತರ ಬೆಳೆಯುವ ಇವುಗಳ ರೆಕ್ಕೆ 33 ಪೌಂಡ್‌ವರೆಗೆ ತೂಕ ಹೊಂದಿರುತ್ತವೆ. ಇಷ್ಟೆಲ್ಲ ವಿಶೇಷತೆಗಳ ನಡುವೆ ಇತ್ತೀಚೆಗೆ ಇನ್ನೊಂದು ಕುತೂಹಲಕಾರಿ ಸಂಗತಿಯೊಂದು ಬಹಿರಂಗಗೊಂಡಿದೆ. ಆ್ಯಂಡಿಯಾನ್ ಕೊಂಡೊರ್ ರೆಕ್ಕೆ ಬಡಿಯದೆ ಗಂಟೆಗಟ್ಟಲೆ ಹಾರಾಡುವ ಸಾಮರ್ಥ್ಯ ಅಧ್ಯಯನದಿಂದ ತಿಳಿದು ಬಂದಿದ್ದು, ವಿಜ್ಞಾನಿಗಳು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಅದರಲ್ಲೂ ಒಂದು ಹಕ್ಕಿಯಂತೂ ಸುಮಾರು 5 ಗಂಟೆಯ ಹಾರಾಟದಲ್ಲಿ ರೆಕ್ಕೆ ಬಡಿದದ್ದು ಒಮ್ಮೆ ಮಾತ್ರ ಎನ್ನುವುದು ಅದರ ಶಕ್ತಿಗೆ ಸ್ಪಷ್ಟ ಉದಾಹರಣೆ.
ಇದನ್ನೂ ಓದಿ:ನೇಪಾಳ ಭೂ ಕುಸಿತಕ್ಕೆ 3 ಗ್ರಾಮಗಳ 11 ಮನೆಗಳು ನೆಲಸಮ: 9 ಮಂದಿ ಸಾವು, ಹಲವು ಮಂದಿ ನಾಪತ್ತೆ
ಅಧ್ಯಯನ
ಆ್ಯಂಡಿಯಾನ್ ಕೊಂಡೊರ್ ಬಗ್ಗೆ ಅಧ್ಯಯನ ನಿರತ ತಜ್ಞರು ಅವುಗಳ ಪ್ರತಿ ಚಲನವಲನಗಳನ್ನು ರೆಕಾರ್ಡ್ ಮಾಡಲು ನಿರ್ಧರಿಸಿದರು. ಅದರಂತೆ 8 ಹಕ್ಕಿಗಳ ರೆಕ್ಕೆಗಳ ಕೆಳಗೆ ರೆಕಾರ್ಡ್ ಯಂತ್ರಗಳನ್ನು ಅಳವಡಿಸಿದರು. ಇದರಿಂದ ರೆಕ್ಕೆ ಬಡಿತ ಅಧ್ಯಯನ ನಿರತರಿಗೆ ಅಚ್ಚರಿಯ ವಿಷಯಗಳನ್ನು ಗೊತ್ತಾಗತೊಡಗಿದವು. ಹಾರಾಡುವ ಸಮಯದ ಶೇಕಡಾ ಒಂದರಷ್ಟು ಮಾತ್ರ ಅವು ರೆಕ್ಕೆ ಬಡಿಯಲು ಉಪಯೋಗಿಸುತ್ತವೆ. ಅದರಲ್ಲೂ 5 ಗಂಟೆಗಳ ಕಾಲ ಸುಮಾರು 160 ಕಿ.ಮೀ. ಹಾರಾಡಿದ ಹಕ್ಕಿಯೊಂದು ಒಮ್ಮೆ ಮಾತ್ರ ರೆಕ್ಕೆ ಬಡಿದಿತ್ತು. “ಆ್ಯಂಡಿಯಾನ್ ಕೊಂಡೊರ್‌ಗಳು ಬಹಳ ಬಲಿಷ್ಟ ಎಂದು ಗೊತ್ತಿತ್ತು. ಆದರೆ ಇಷ್ಟೊಂದು ಶಕ್ತಿಶಾಲಿ ಎನ್ನುವುದು ಗೊತ್ತಿರಲಿಲ್ಲ’ ಎಂದು ಆಶ್ಚರ್ಯ ವ್ಯಕ್ತ ಪಡಿಸುತ್ತಾರೆ ಇಂಗ್ಲೆಂಡ್ ವೇಲ್ಸ್‌ನ ಸ್ವಾನ್‌ಸಿ ವಿಶ್ವವಿದ್ಯಾನಿಲಯದ ಸಂಶೋಧಕರಾದ ಎಮಿಲಿ ಷೆಪಾರ್ಡ್.
“ಆಕಾಶ ಕೇವಲ ಶೂನ್ಯ ಎಂದುಕೊಳ್ಳುತ್ತೇವೆ. ಪಕ್ಷಿಗಳಿಗೆ ಅದು ಬೇರೆಯದೇ ಲೋಕ. ಗಾಳಿಯ ಏರಿಳಿತ, ಉಷ್ಣ, ಶೀತ ಗಾಳಿಯ ಬೀಸುವಿಕೆ ಮುಂತಾದವುಗಳೆಲ್ಲ ಹಕ್ಕಿಗಳ ಹಾರಾಟಕ್ಕೆ ಎದುರಾಗುವ ಸವಾಲುಗಳು. ಈ ವಾತಾವರಣದಲ್ಲಿ ರೆಕ್ಕೆ ಬಡಿಯದೆ ಬಹಳ ದೂರ ಕ್ರಮಿಸಲು ಹಕ್ಕಿಗಳಿಗೆ ಸಾಧ್ಯವಾಗುತ್ತದೆ’ ಎನ್ನುತ್ತಾರೆ ಪಕ್ಷಿ ತಜ್ಞ ಡೇವಿಡ್ ಲೆಂಟಿಕ್.
ಇದನ್ನೂ ಓದಿ:ಮದುವೆಯಾದ 15ದಿನಕ್ಕೆ ಪತಿ ಆತ್ಮಹತ್ಯೆ: ಜ್ಯೂಸ್ ತರುವ ನೆಪದಲ್ಲಿ ಮಾಲ್ ನಿಂದ ಜಿಗಿದಳು ಪತ್ನಿ
“ರೆಕ್ಕೆ ಬಡಿಯದೆ ಇರುವುದು ಆ್ಯಂಡಿಯಾನ್ ಕೊಂಡೊರ್‌ನ ಜೀವನ ಶೈಲಿಗೆ ಅನಿವಾರ್ಯ. ಆಹಾರಕ್ಕಾಗಿ ಉನ್ನತ ಪರ್ವತ ಶ್ರೇಣಿಗಳ ಮಧ್ಯೆ ಹಾರಾಡಲು ಇದು ಅವುಗಳಿಗೆ ನೆರವಾಗುತ್ತದೆ’ ಎನ್ನುತ್ತಾರೆ ಸಂಶೋಧಕ ಸೆರ್ಜಿಯೋ ಲ್ಯಾಂಬೆರ್‌ಟುಸ್ಸಿ.
– ರಮೇಶ್ ಬಿ. ಕಾಸರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.