ಶ್ರೀಲಂಕಾದಲ್ಲಿ ಕನ್ನಡಿಗರ ಒಡೆತನದ ಕ್ಯಾಸಿನೋ?
ದಕ್ಷಿಣ ಭಾರತದಿಂದ ವಿದೇಶಗಳಿಗೆ ಡ್ರಗ್ಸ್ ಪೂರೈಕೆ, ತನಿಖೆ ಚುರುಕು
Team Udayavani, Sep 14, 2020, 8:01 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ ತನಿಖೆ ವೇಳೆ ಕರ್ನಾಟಕ ಸಹಿತ ದಕ್ಷಿಣ ಭಾರತದ ರಾಜ್ಯಗಳಿಂದ ಶ್ರೀಲಂಕಾಕ್ಕೆ ಮಾದಕ ವಸ್ತುಗಳ ರಫ್ತು ವ್ಯವಹಾರ ನಡೆದಿರುವ ಸ್ಫೋಟಕ ಮಾಹಿತಿ ದೊರೆತಿದೆ.
ಜತೆಗೆ ಶ್ರೀಲಂಕಾದಲ್ಲಿ ಬೆಂಗಳೂರಿನವರ ಮಾಲಕತ್ವದ ಕ್ಯಾಸಿನೋಗಳೂ ಇವೆ ಎಂಬ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿವೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಗೃಹ ಇಲಾಖೆಯು ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಮತ್ತು ಗುಪ್ತಚರ ವಿಭಾಗದ ಅಧಿಕಾರಿಗಳಿಗೆ ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ಮಾದಕ ವಸ್ತುಗಳು ನೈಜೀರಿಯಾ, ಆಫ್ರಿಕಾ ಸಹಿತ ಕೆಲವು ನಿರ್ದಿಷ್ಟ ದೇಶಗಳಿಂದ ಭಾರತಕ್ಕೆ ಬರುತ್ತವೆ ಎಂದು ಹೇಳಲಾಗುತ್ತಿತ್ತು.
ಈಗ ಅಧಿಕಾರಿಗಳು ಹೇಳುವ ಪ್ರಕಾರ, ಹಿಂದಿನಿಂದಲೂ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಮಾದಕ ದ್ರವ್ಯಗಳು ಶ್ರೀಲಂಕಾ, ಇಂಡೋನೇಷ್ಯಾ, ಫಿಲಿಫೈನ್ಸ್, ಮಲೇಷಿಯಾ ಮತ್ತು ಆಗ್ನೇಯ ಭಾಗದ ದೇಶಗಳಿಗೆ ಹೋಗುತ್ತಿದ್ದವು.
ಶ್ರೀಲಂಕಾಕ್ಕೆ ಗಾಂಜಾ ಸಹಿತ ಹಲವು ಮಾದಕ ವಸ್ತುಗಳು ಇದೇ ರಾಜ್ಯಗಳಿಂದ ಹೋಗುತ್ತಿವೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ಇದು ಎಲ್ಲರಿಗೂ ಗೊತ್ತಿದ್ದರೂ ವ್ಯವಸ್ಥಿತವಾಗಿ ಬಹಿರಂಗವಾಗದಂತೆ ನೋಡಿಕೊಳ್ಳಲಾಗುತ್ತಿತ್ತು ಎಂದೂ ಮೂಲಗಳು ತಿಳಿಸಿವೆ.
ಆದರೆ, ಸ್ಯಾಂಡಲ್‌ವುಡ್ ಪ್ರಕರಣ ಬಯಲಾಗುತ್ತಿದ್ದಂತೆ ಬೇರೆ ಬೇರೆ ದೃಷ್ಟಿಕೋನಗಳಿಂದ ತನಿಖೆ ನಡೆಯಲು ಆರಂಭವಾಗಿವೆ. ಬೆಂಗಳೂರು ಪೊಲೀಸರು ಮಾತ್ರವಲ್ಲದೆ ಜಾರಿ ನಿರ್ದೇಶನಾಲಯ, ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆಗಳು, ಮಾದಕ ದ್ರವ್ಯ ನಿಯಂತ್ರಣ ಘಟಕ (ಎನ್‌ಸಿಬಿ) ಆಂತರಿಕ ಭದ್ರತಾ ವಿಭಾಗಗಳು (ಐಎಸ್‌ಡಿ) ಒಟ್ಟಾರೆ ತನಿಖೆಯಲ್ಲಿ ಪಾಲ್ಗೊಂಡಿವೆ.
ಪ್ರತಿ ಹಂತದಲ್ಲೂ ಬದಲಾವಣೆ!
ಡ್ರಗ್ಸ್ ಮಾಫಿಯಾ ಎಂಬುದು ಬಹುದೊಡ್ಡ ಜಾಲ. ಒಂದು ವ್ಯಕ್ತಿಯಿಂದ ಮತ್ತೂಬ್ಬ ವ್ಯಕ್ತಿಗೆ ಬದಲಾಗುತ್ತದೆ. ಆದರೆ, ಈ ವ್ಯಕ್ತಿಗಳ ಹಿಂದಿನ ಕೈ ಯಾವುದು ಎಂಬುದನ್ನು ಇದುವರೆಗೂ ಪತ್ತೆಹಚ್ಚಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಬೆಂಗಳೂರಿ ನಿಂದ ತಮಿಳುನಾಡು ಅಥವಾ ಆಂಧ್ರಪ್ರದೇಶ, ಕೇರಳಕ್ಕೆ ಡ್ರಗ್ಸ್ ಸರಬರಾಜು ಮಾಡಲು ಕನಿಷ್ಠ 6-8 ತಂಡಗಳು ಕಾರ್ಯ ನಿರ್ವಹಿಸುತ್ತವೆ. ಪ್ರತಿ ತಂಡಕ್ಕೂ ತನಗೆ ಮಾಲು ಕೊಟ್ಟ ವ್ಯಕ್ತಿಯ ಹಿನ್ನೆಲೆ ತಿಳಿದಿರುವುದಿಲ್ಲ. ಹೀಗಾಗಿ ದಂಧೆ ಬೃಹದಾಕಾರವಾಗಿ ಬೆಳೆದುಕೊಂಡಿದೆ ಎನ್ನುತ್ತವೆ ಮೂಲಗಳು.
ರಾಜ್ಯದವರ ಮೂರು ಕ್ಯಾಸಿನೋ!
ರಾಜ್ಯ ಪೊಲೀಸ್ ಮೂಲಗಳ ಪ್ರಕಾರ, ರಾಜಧಾನಿ ಬೆಂಗಳೂರಿನ ಶ್ರೀಮಂತ ವ್ಯಕ್ತಿಗಳ ಪಾಲುದಾರಿಕೆಯಲ್ಲಿ ಶ್ರೀಲಂಕಾದಲ್ಲಿ ಮೂರು ಕ್ಯಾಸಿನೋ ಸಂಸ್ಥೆಗಳು ನಡೆಯತ್ತಿವೆ. ಅಲ್ಲದೆ, ನಗರದ ಸಾಕಷ್ಟು ಮಂದಿ ಅದೇ ಕ್ಯಾಸಿನೋ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಅಡ್ಡೆಗಳಿಗೆ ದಕ್ಷಿಣ ಭಾರತದ ರಾಜ್ಯಗಳಿಂದ ಡ್ರಗ್ಸ್ ಪೂರೈಕೆಯಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.