ಅಧಿಕಾರಿಗಳ ಕೈ ಬಿಸಿಯಾದರೆ ವೇತನ
ಬಿಎಂಟಿಸಿಯ ಹಲವು ಘಟಕಗಳಲ್ಲಿ ಮೇಲಧಿಕಾರಿಗಳ ಅಲಿಖೀತ ನಿಯಮ | ಚಾಲನಾ ಸಿಬ್ಬಂದಿಗೆ ತಲೆನೋವು
Team Udayavani, Sep 14, 2020, 12:13 PM IST
ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲೂ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡಿ ಸಾರಿಗೆ ನಿಗಮಗಳಿಗೆ ವೇತನ ಬಿಡುಗಡೆ ಮಾಡುತ್ತಿದೆ. ಆದರೆ ಆ ವೇತನಕ್ಕೆ ಯಾವುದೇ ಕತ್ತರಿ ಇಲ್ಲದೆ ನೌಕರರ ಖಾತೆಗೆ ಯಥಾವತ್ತಾಗಿ ಬಂದು ಬೀಳಬೇಕಾದರೆ, ಅಧಿಕಾರಿಗಳ ಕೈ “ಬಿಸಿ’ ಮಾಡುವುದು ಅನಿವಾರ್ಯ!
– ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಹಲವು ಘಟಕ ಗಳಲ್ಲಿ ಕೆಲ ಅಧಿಕಾರಿಗಳು ಇಂತಹದ್ದೊಂದು ಅಲಿಖೀತ ನಿಯಮ ಮಾಡಿಕೊಂಡಿದ್ದಾರೆ. ಇದು ನೌಕರರಿಗೆ ಅದರಲ್ಲೂ ವಿಶೇಷವಾಗಿ ಚಾಲನಾ ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಯಾವೊಬ್ಬ ನೌಕರನಿಗೆ ಸಂಪೂರ್ಣ ವೇತನ ಪಾವತಿ ಆಗಬೇಕಾದರೆ, ಇಡೀ ತಿಂಗಳಲ್ಲಿ ಯಾವುದೇ ಗೈರುಹಾಜರಿ ಇರ ಬಾರದು. ಒಂದು ವೇಳೆ ಇದ್ದರೆ, ಆ ದಿನದ ವೇತನಕ್ಕೆ ಕತ್ತರಿ ಬೀಳುತ್ತದೆ. ಹಾಗಂತ ನೌಕರರು ಅನಿವಾರ್ಯ ಸಂದರ್ಭಗಳಲ್ಲಿ ಮೇಲಧಿಕಾರಿಗಳಲ್ಲಿ ರಜೆಗೆ ಮನವಿ ಮಾಡಿದರೂ ಮಂಜೂರಾಗುವುದಿಲ್ಲ. ಇದಕ್ಕಾಗಿ ದಿನಕ್ಕೆ ಇಂತಿಷ್ಟು “ಕಮೀಷನ್’ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಸೆಳೆದರೂ ಪ್ರಯೋಜನ ಆಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿವೆ. ಈ ಹಿಂದೆಯೂ ರಜೆ ಮಂಜೂರಾತಿಗಾಗಿ ಅಧಿಕಾರಿಗಳು, ನೌಕರರಿಗೆ ಕಿರುಕುಳ ನೀಡುವ ಬಗ್ಗೆ ದೂರುಗಳು ಕೇಳಬರುತ್ತಿದ್ದವು. ಕೆಲವು ಸಲ ಆತ್ಮಹತ್ಯೆಗೆ ಯತ್ನ, ಪ್ರತಿಭಟನೆಗಳು ನಡೆದ ಘಟನೆಗಳೂ ವರದಿಯಾಗಿವೆ.
ಆದರೆ, ಕೋವಿಡ್ ಹಾವಳಿ ಸಂದರ್ಭದಲ್ಲಿ ರಜೆ ತೆಗೆದುಕೊಳ್ಳುವವರ ಪ್ರಮಾಣ ಹೆಚ್ಚಿದೆ. ಮತ್ತೂಂದೆಡೆ ಲಾಕ್‌ಡೌನ್ ಸಂದರ್ಭದಲ್ಲಿ ಬಹುತೇಕ ಸಿಬ್ಬಂದಿಯ ರಜೆಗಳು ಖಾಲಿ ಆಗಿವೆ. ಇದು ಘಟಕ ವ್ಯವಸ್ಥಾಪಕರು, ಸಹಾಯಕ ಸಂಚಾರ ನಿರೀಕ್ಷಕರಂತಹ ಅಧಿಕಾರಿಗಳಿಗೆ ಅಸ್ತ್ರವಾಗಿದೆ. ಆನ್‌ಲೈನ್ ಪೇಮೆಂಟ್: “ಅನಾರೋಗ್ಯ, ಕಂಟೈನ್ ಮೆಂಟ್ ವಲಯ, 55 ವರ್ಷ ಮೇಲ್ಪಟ್ಟವರಿಗೆ ರಜೆ ಅಥವಾ ಲಘು ಕರ್ತವ್ಯಗಳನ್ನು ನೀಡುವುದು ಸೇರಿದಂತೆ ಹಲವು ಕಾರಣಗಳಿಗಾಗಿ ರಜೆ ಮಂಜೂರು ಮಾಡಲು ಒಂದು ದಿನಕ್ಕೆ 200-300 ರೂ. ವಸೂಲು ಮಾಡಲಾಗುತ್ತಿದೆ. ಈ ಮೊತ್ತವು ಪೇಟಿಎಂ, ಗೂಗಲ್ ಪೇಯಂತಹ ಆನ್‌ಲೈನ್ ಪೇಮೆಂಟ್‌ಗಳ ರೂಪದಲ್ಲಿ ವರ್ಗಾವಣೆ ಆಗುತ್ತಿದೆ. 8-10 ದಿನಗಟ್ಟಲೆ ರಜೆ ಇದ್ದವರಿಗೂ ಪೂರ್ಣ ವೇತನ ಪಾವತಿಯಾಗಿದೆ. ಯಾಕೆಂದರೆ, ಅವರಿಗೆ ರಜೆ ಮಂಜೂರು ಆಗಿರುತ್ತದೆ. ಇನ್ನೊಂದೆಡೆ ಎರಡು-ಮೂರು ದಿನ ರಜೆ ಹಾಕಿದ್ದರೂ, ವೇತನಕ್ಕೆ ಕತ್ತರಿ ಬೀಳುತ್ತದೆ. ಯಾಕೆಂದರೆ, ರಜೆ ಮಂಜೂರು ಮಾಡಿರುವುದಿಲ್ಲ’ ಎಂದು ಹೆಸರು ಹೇಳಲಿ ಚ್ಛಿಸದ ಯಶವಂತಪುರ ಘಟಕ 8ರ ನೌಕರರೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.
ಲಾಕ್‌ಡೌನ್ ಅವಧಿಯಿಂದ ಈ ವಸೂಲಿ ದಂಧೆ ಶುರುವಾಗಿದೆ. ಬಹುತೇಕ ನೌಕರರು ತಮ್ಮ ಊರುಗಳಲ್ಲೇ ಸಿಲುಕಿದರು. ವಾಪಸ್ ಬರಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ 15 ದಿನ ರಜೆ ನೀಡಿದರು. ಆದರೆ, ಉಳಿದ ದಿನಗಳಲ್ಲಿ ನಮ್ಮ ಹಕ್ಕಿನ ರಜೆಗಳಲ್ಲಿ ಕಡಿತಗೊಳಿಸಲಾಯಿತು. ವಾಪಸ್ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಮತ್ತೆ ಹಾಜರಾದಾಗ, ನಿರೀಕ್ಷಿತ ಪ್ರಮಾಣದಲ್ಲಿ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿರಲಿಲ್ಲ (ಈಗಲೂ ಪೂರ್ಣಪ್ರಮಾಣದಲ್ಲಿಲ್ಲ). ಆಗ ಹಣ ನೀಡಿದವರಿಗೆ, ಡ್ನೂಟಿ ಅಥವಾ ರಜೆ ಮಂಜೂರು ಮಾಡುವ ಪ್ರವೃತ್ತಿ ಶುರುವಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಹಾಜರಾತಿಗೆ ಆನ್‌ಲೈನ್ ವ್ಯವಸ್ಥೆ? : ನೌಕರರಿಗೆ ರಜೆ ಮಂಜೂರು ಅಥವಾ 55 ವರ್ಷ ಮೇಲ್ಪಟ್ಟ ನೌಕರರಿಗೆ ಲಘು ಕರ್ತವ್ಯ ನೀಡುವ ವಿಚಾರದಲ್ಲಿ ಪಾರದರ್ಶಕತೆ ತರಲು ಬಿಎಂಟಿಸಿಯು ಆನ್ ಲೈನ್ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ. ಪ್ರಸ್ತುತ ಮ್ಯಾನುವಲ್ ಆಗಿ ಹಾಜರಾತಿ ಅಪ್‌ಡೇಟ್ ಮಾಡಲಾಗುತ್ತಿದೆ. ಇದರಲ್ಲಿ ಅಕ್ರಮ ಎಸಗಲು ಅವಕಾಶ ಇದ್ದು, ಕೆಲವೊಮ್ಮೆ ಕರ್ತವ್ಯಕ್ಕೆ ಹಾಜರಾದ ಐದಾರು ದಿನಗಳ ನಂತರವೂ ಅಪ್‌ಡೇಟ್ ಆಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಿ, ಪಾರದರ್ಶಕತೆ ತರಲಾಗುತ್ತಿದೆ ಎಂದು ಬಿಎಂಟಿಸಿ ಐಟಿ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.
ಆನ್‌ಲೈನ್ ಡ್ಯೂಟಿ : ಕೆಲ ಘಟಕಗಳ ವ್ಯಾಪ್ತಿಯಲ್ಲಿ ಅನಧಿಕೃತ “ಆನ್‌ಲೈನ್ ಡ್ಯೂಟಿ’ ಪದ್ಧತಿ ಜಾರಿ ಇದೆ. ಹಲವು ಘಟಕಗಳಲ್ಲಿ ಬಸ್ ಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿಲ್ಲ. ಆದರೆ, ಸಿಬ್ಬಂದಿ ಹಾಜರಾತಿ ಭರ್ತಿಯಾಗಿದೆ. ಡ್ಯೂಟಿಗಾಗಿ “ಕ್ಯೂ’ ನಿಲ್ಲಬೇಕಾಗಿದೆ. ಮತ್ತೂಂದೆಡೆ ಎಲ್ಲರಿಗೂ ಡ್ಯೂಟಿ ನೀಡುವುದೂ ಸವಾಲಾಗುತ್ತಿದೆ. ಇದನ್ನು ಆದಾಯ ಮಾರ್ಗವಾಗಿ ಪರಿವರ್ತಿಸಿಕೊಂಡ ಕೆಲ ಅಧಿಕಾರಿಗಳು, ಆನ್‌ಲೈನ್ ಡ್ಯೂಟಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಮೊದಲೇ ಅಧಿಕಾರಿಗೆ ಕರೆ ಮಾಡಿ ಡ್ನೂಟಿ ನೀಡುವಂತೆ ಕೋರಲಾಗುತ್ತದೆ. ಇದಕ್ಕೆ ಹಣವನ್ನೂ ನೀಡಲಾಗುತ್ತದೆ. ಪ್ರತಿಯಾಗಿ ಆತ ಕರ್ತವ್ಯಕ್ಕೆ ಆಗಮಿಸುತ್ತಿದ್ದಂತೆ ಮಾರ್ಗಪತ್ರ (ಡ್ಯೂಟಿ ಶೀಟ್) ನೀಡಿ ಕಳುಹಿಸಲಾಗುತ್ತದೆ. ಉಳಿದವರಿಗೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾದರೂ ಡ್ನೂಟಿ ಸಿಗುವುದಿಲ್ಲ ಎಂದು ಉತ್ತರ ವಿಭಾಗದ ನಿರ್ವಾಹಕರೊಬ್ಬರು ಅಲವತ್ತುಕೊಂಡರು.
ನಿರ್ದಾಕ್ಷಿಣ್ಯ ಕ್ರಮ; ಎಂಡಿ ಎಚ್ಚರಿಕೆ : “ಈ ವಿಚಾರದಲ್ಲಿ ಆರಂಭದಲ್ಲಿ ನೌಕರರೂ ತುಸು ಎಡವಿದ್ದಾರೆ. ಕೆಲವರು ಅಧಿಕಾರಿಗಳಿಗೆ ಹಣ ನೀಡಿ ರಜೆ ಮಂಜೂರು ಅಥವಾ ಡ್ನೂಟಿ ಹಾಕಿಸಿಕೊಂಡಿದ್ದಾರೆ. ಇದನ್ನೇ ಎಲ್ಲರಿಗೂ ಅನುಸರಿಸಿ, ಕೆಲವರು ಪರಿಸ್ಥಿತಿಯ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. “ಅದೇನೇ ಇರಲಿ, ಈ ರೀತಿ ರಜೆ ಮಂಜೂರು ಮಾಡಲು ಹಣ ಪಡೆಯುವುದು ಮತ್ತು ಕೊಡುವುದು ತಪ್ಪು. ಈಗಾಗಲೇ ಎಲ್ಲ ವಿಭಾಗಗಳ ಪರಿಶೀಲನೆ ಪೂರ್ಣಗೊಳಿಸಿದ್ದು, ಎಲ್ಲಿಯೂ ಇಂತಹ ದೂರುಗಳು ಕೇಳಿಬಂದಿಲ್ಲ. ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ಬಂದರೆ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಇದನ್ನು ಸಹಿಸುವುದಿಲ್ಲ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಸಿ. ಶಿಖಾ ಸ್ಪಷ್ಟಪಡಿಸಿದ್ದಾರೆ.
ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.