30 ವರ್ಷದ ಏಕಾಂಗಿ ಪರಿಶ್ರಮ: ಬೆಟ್ಟದ ನೀರು ಹಳ್ಳಿಗೆ ತಂದ ಭಗೀರಥ
ಬಿಹಾರದ ಹಳ್ಳಿಗ ಭುಇಯಾ ಎಂಬಾ ತನ 30 ವರ್ಷದ ಪರಿಶ್ರಮಕ್ಕೆ ಸಂದ ಫಲ
Team Udayavani, Sep 14, 2020, 12:20 PM IST
ಪಟ್ನಾ: ಬಿಹಾರದ ಗಯಾ ಜಿಲ್ಲೆಯ ಗೆಹ್ಲಾರ್ ಎಂಬ ಹಳ್ಳಿ ಯಲ್ಲಿ ಬೆಟ್ಟವೊಂದನ್ನು ಸುತ್ತಿಗೆ, ಹಾರೆಗಳಿಂದ ಏಕಾಂಗಿಯಾಗಿ ಕಡಿದು ನಡುವೆ ರಸ್ತೆ ಮಾಡಿದ ದಶರಥ್ ಮಾಂಝಿ ಎಂಬ ವ್ಯಕ್ತಿಯನ್ನು ಬಹುಶಃ ಯಾರೂ ಮರೆತಿರಲಾರರು. ಅವರಂತೆಯೇ, ಅದೇ ಗಯಾ ಜಿಲ್ಲೆಯ ಲಾಹುವಾ ಪ್ರಾಂತ್ಯದ ಕೋಥಿ ಲಾವಾ ಎಂಬ ಹಳ್ಳಿಯಲ್ಲಿ ಲೌಂಗಿ ಭುಇಯಾ ಎಂಬ ವ್ಯಕ್ತಿ ತಮ್ಮ ಹಳ್ಳಿಯ ಹತ್ತಿರದ ಬೆಟ್ಟಗಳ ಮೇಲೆ ಮಳೆಗಾಲದಲ್ಲಿ ಬೀಳುವ ಮಳೆ ನೀರನ್ನು ತನ್ನ ಹಳ್ಳಿಯ ಹೊಲಗಳಿಗೆ ಹಾಯಿಸಲು ಸುಮಾರು 3 ಕಿ.ಮೀ. ದೂರದವರೆಗೆ ಏಕಾಂಗಿಯಾಗಿ ಕಾಲುವೆ ತೋಡಿದ ಸಾಧನೆ ಮಾಡಿದ್ದಾರೆ.
ದಟ್ಟ ಕಾಡುಗಳಾಚೆ ಗಿನ ಬೆಟ್ಟದಿಂದ ತನ್ನ ಹಳ್ಳಿಯ ಕೆರೆಗೆ ಬೆಟ್ಟದ ನೀರು ತರಲು ಆತ ತೆಗೆದುಕೊಂಡದ್ದು ಬರೋಬ್ಬರಿ 30 ವರ್ಷ. ಪ್ರತಿ ದಿನವೂ ಗೋವುಗಳನ್ನು ಮೇಯಲು ಅರಣ್ಯದ ಕಡೆಗೆ ಕರೆದುಕೊಂಡು ಹೋಗುತ್ತಿದ್ದ ಅವರಿಗೆ ಮಳೆಗಾಲದಲ್ಲಿ ಬೆಟ್ಟಗಳ ಮೇಲಿನ ನೀರು ಒಂದೆಡೆ ಸಂಗ್ರಹವಾಗಿ, ಆನಂತರ ತೊರೆಯಾಗಿ ಹರಿದು ಹೋಗುತ್ತಿದ್ದುದು ಗಮನಕ್ಕೆ ಬಂದಿತ್ತು. ಅದನ್ನು ಹೇಗಾದರೂ ಮಾಡಿ ತನ್ನ ಹಳ್ಳಿಯ ಕಡೆಗೆ ಹರಿಸಬೇಕು ಎಂದು ಅವರು ಮನಸ್ಸು ಮಾಡಿದ್ದರು.
ಇದನ್ನು ಹಳ್ಳಿಯವರ ಬಳಿ ಹೇಳಿಕೊಂಡಾಗ ಯಾರೂ ಅವರ ಆಲೋಚನೆಗೆ ಓಗೊಡಲಿಲ್ಲ. ಆದರೂ, ವಿಮುಖರಾಗದ ಅವರು ಪ್ರತಿದಿನ ಗೋವುಗಳು ಮೇಯುವಷ್ಟರಲ್ಲಿ ತನ್ನ ಕೈಲಾದಷ್ಟು ನೆಲವನ್ನು ತೋಡಿ, ಹಂತ ಹಂತವಾಗಿ ತಮ್ಮ ಕನಸನ್ನು ಸಾಕಾರಗೊಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.