![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 14, 2020, 1:41 PM IST
ಬೆಂಗಳೂರು: ವಸತಿ ಯೋಜನೆಯನ್ನು ಹಳ್ಳ ಹಿಡಿಸಿದವರೇ ಸಚಿವ ವಿ.ಸೋಮಣ್ಣ. ಅವರು ಬಡ ಫಲಾನುಭವಿಗಳ ಕಣ್ಣಲ್ಲಿ ನೀರು ತರಿಸಿದ್ದಾರೆ. ಸೋಮಣ್ಣ ವಸತಿ ಇಲಾಖೆಯಿಂದ ತೊಲಗಿದರೆ ಮಾತ್ರ ಉದ್ಧಾರವಾಗುತ್ತದೆ. ಸೋಮಣ್ಣ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ವಿ.ಸೋಮಣ್ಣ ಅವರು ರಾಜ್ಯದ ಜನರಿಗೆ ಮನೆ ಕಟ್ಟಿಕೊಡದಿದ್ದರೆ ನೇಣು ಹಾಕಿಕೊಳ್ಳುತ್ತೇನೆ ಎಂದಿದ್ದಾರೆ. ಮತ್ತೊಂದು ಕಡೆ ಪಿಡಿಒಗಳ ಮೇಲೂ ಅಪಾದನೆ ಮಾಡಿದ್ದಾರೆ. ಜನರನ್ನ ಭಾವನಾತ್ಮಕವಾಗಿ ಕಟ್ಟಿಹಾಕ್ತಿದ್ದಾರೆ. ಆದರೆ ಅವರು ಹೇಳುವುದೆಲ್ಲಾ ಬರಿ ಸುಳ್ಳೇ ಎಂದು ಆರೋಪಿಸಿದರು.
ಈಗಾಗಲೇ 15 ಲಕ್ಷ ವಸತಿ ವಂಚಿತರಿಗೆ ಮನೆ ಕಟ್ಟಲಾಗಿದೆ.7 ಲಕ್ಷ 65 ಸಾವಿರ ಮನೆ ಪ್ರಗತಿಯಲ್ಲಿವೆ. ಆ ಮನೆಗಳಿಗೆ ಇನ್ನೂ ಬಾಕಿಯನ್ನೇ ಬಿಡುಗಡೆ ಮಾಡಿಲ್ಲ. 2.5 ಲಕ್ಷ ಮನೆಗಳ ಅನುದಾನ ರದ್ಧು ಮಾಡಿದ್ದಾರೆ. ಬಡವರ ಹೊಟ್ಟೆಯ ಮೇಲೆ ಹೊಡೆದಿದ್ದಾರೆ. 5.15 ಲಕ್ಷ ಮನೆಗಳ ಸರ್ವೆಗೆ ಮುಂದಾಗಿದ್ದಾರೆ. ಕಟ್ಟಿಕೊಳ್ಳುತ್ತಿರುವ ಮನೆಗಳಿಗೆ ಹಣ ರಿಲೀಸ್ ಮಾಡಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: ರೈತರಿಗೆ ತೊಂದರೆಯಾದರೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ: ಬಿ.ಸಿ ಪಾಟೀಲ
ಎರಡೂವರೆ ವರ್ಷದಿಂದ ಮನೆ ನಿರ್ಮಾಣ ಅರ್ಧಕ್ಕೆ ನಿಂತಿದೆ. ಮನೆ ಒಡೆದು ಮನೆ ಕಟ್ಟೋಕೆ ಅಡಿಪಾಯ ಹಾಕಿದ್ದರು. ಗುಡಿಸಲಿನಲ್ಲಿದ್ದುಕೊಂಡು ಹೊಸ ಮನೆಯ ಕನಸು ಕಾಣುತ್ತಿದ್ದರು. ಬಡಫಲಾನುಭವಿಗಳು ಇನ್ನೂ ಪರದಾಡ್ತಿದ್ದಾರೆ. ಇದರ ಬಗ್ಗೆ ವಸತಿ ಸಚಿವರಿಗೆ ಕರುಣೆಯೇ ಇಲ್ಲ. ಆದರೆ ಭಾವನಾತ್ಮಕವಾಗಿ ಹೇಳಿಕೆಗಳನ್ನ ಕೊಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟ ಅಧಿಕಾರಿ ಮಹದೇವ್ ಪ್ರಸಾದ್ ಮೇಲೆ ಆರೋಪಗಳಿವೆ. ಮತ್ತೆ ಆ ಅಧಿಕಾರಿಯನ್ನೇ ರಾಜೀವ್ ವಸತಿ ನಿಗಮಕ್ಕೆ ಕೂರಿಸಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಯಿಂದ ಇನ್ನೇನು ಮಾಡಲು ಸಾಧ್ಯ. ಇಂತಹ ಅಧಿಕಾರಿಗಳಿಂದಲೇ ಮನೆ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದೆ. ಸೂರಿಲ್ಲದವರಿಗೆ ಸೂರು ಕೊಡ್ತೇವೆ ಎನ್ನುತ್ತಾರೆ. ಆದರೆ ಒಂದು ಲಕ್ಷ ಮನೆ ಯೋಜನೆ ಏನಾಯಿತು ಎಂದು ಪ್ರಶ್ನಿಸಿದರು.
ಸಿ.ಟಿ.ರವಿಯವರಿಗೆ ನೈತಿಕತೆ ಬಗ್ಗೆ ಮಾತನಾಡುವ ಹಕ್ಕಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ಯಾಸಿನೋ ಆರಂಭ ಮಾಡಲು ಅವರು ಹೊರಟಿದ್ದರು. ರಾಜ್ಯದಲ್ಲಿ ಕ್ಯಾಸಿನೋ ಪ್ರಾರಂಭಿಸೋಕೆ ಹೊರಟಿದ್ದೇಕೆ? ಇಂತವರು ಇದರ ಬಗ್ಗೆ ಮಾತನಾಡೋಕೆ ಹಕ್ಕಿದೆಯಾ ಎಂದು ಪ್ರಶ್ನಿಸಿದರು.
ಸಿ.ಟಿ.ರವಿ ಹೇಳೋದೊಂದು ಮಾಡುವುದೊಂದು. ಅಕ್ರಮಗಳಿಗೆ ಪ್ರೋತ್ಸಾಹವನ್ನು ಕೊಡೋಕೆ ಪ್ರಯತ್ನ ಮಾಡ್ತಿದ್ದಾರೆ. ಜಮೀರ್ ಕ್ಯಾಸಿನೋ ಬಗ್ಗೆ ಮಾತನಾಡುವ ಹಕ್ಕು ಸಿ.ಟಿ.ರವಿಗಿಲ್ಲ ಎಂದರು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.