ಮಾಜಿ ಟಿಕ್ ಟಾಕ್ ಸ್ಟಾರ್ ಗಳಿಗೆ ಇದೀಗ ನಟನಾ ಕ್ಷೇತ್ರದಲ್ಲಿ ಭಾರೀ ಬೇಡಿಕೆ
Team Udayavani, Sep 14, 2020, 4:19 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ಬೆನ್ನಲ್ಲೇ ಚೀನಾ ಮೂಲದ ಟಿಕ್ ಟಾಕ್ ಸಹಿತ ಹಲವು ಆ್ಯಪ್ ಗಳನ್ನು ಭಾರತ ನಿಷೇಧಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.
ಅದರಲ್ಲೂ ನಮ್ಮ ದೇಶದಲ್ಲಿ ಟಿಕ್ ಟಾಕ್ ಬ್ಯಾನ್ ಆದ ನಂತರವಂತೂ ಟಿಕ್ ಟಾಕ್ ಸ್ಟಾರ್ ಗಳು ನಿರುದ್ಯೋಗಿಗಳಾಗಿಬಿಟ್ಟಿದ್ದಾರೆ.
ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದ್ದ ವೇದಿಕೆಯನ್ನು ಕಳೆದುಕೊಂಡು ಅವರೆಲ್ಲರೂ ಟೆನ್ಷನ್ ನಲ್ಲಿರುವಾಗಲೇ ಮನರಂಜನಾ ಕ್ಷೇತ್ರದಿಂದ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ.
ಅದೇನೆಂದರೆ, ಸದ್ಯಕ್ಕೆ ನಿರ್ಮಾಣಗೊಳ್ಳುತ್ತಿರುವ ಹಲವಾರು ವೆಬ್ ಸಿರೀಸ್ ಗಳಲ್ಲಿ, ಧಾರಾವಾಹಿಗಳಲ್ಲಿ ಮತ್ತು ಕೆಲವು ಕಡಿಮೆ ವೆಚ್ಚದ ಚಿತ್ರಗಳಲ್ಲಿ ಟಿಕ್ ಟಾಕ್ ಸ್ಟಾರ್ ಗಳ ನಟನೆಗೆ ಬೇಡಿಕೆ ಬರುತ್ತಿದೆ.
ಟಿಕ್ ಟಾಕ್ ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಫೈಝಲ್ ಶೇಕ್ ಮತ್ತು ರೂಹಿ ಸಿಂಗ್ ಎಂಬಿಬ್ಬರು ಟಿಕ್ ಟಾಕ್ ಸ್ಟಾರ್ ಗಳು ಆಲ್ಟ್ ಬಾಲಾಜಿ ನಿರ್ಮಾಣ ಮಾಡುತ್ತಿರುವ ‘ಬ್ಯಾಂಗ್ ಬ್ಯಾಂಗ್ -ದಿ ಸೌಂಡ್ ಆಫ್ ಕ್ರೈಮ್ಸ್’ನಲ್ಲಿ ನಟಿಸುತ್ತಿದ್ದಾರೆ.
ಇನ್ನು ಉತ್ತರಪ್ರದೇಶದ ಫೇಮಸ್ ಟಿಕ್ ಟಾಕ್ ಸ್ಟಾರ್ ಸಚಿನ್ ತಿವಾರಿ, ನಟ ಸುಶಾಂತ್ ಸಿಂಗ್ ಜೀವನದಿಂದ ಪ್ರೇರಿತ ‘ಸೂಸೈಡ್ ಆರ್ ಮರ್ಡರ್ : ಎ ಸ್ಟಾರ್ ವಾಸ್ ಲಾಸ್ಟ್’ ಎಂಬ ಚಿತ್ರವೊಂದರಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ವಿಶಾಲ್ ಪಾರೇಖ್ ಎಂಬ ಇನ್ನೊಬ್ಬ ಟಿಕ್ ಟಾಕ್ ಸ್ಟಾರ್ ಗುಜರಾತ್ ಭಾಷೆಯ ವೆಬ್ ಶೋ ‘ಪ್ರೇಮ್ ಪೂಜಾ’ದ ಮೂಲಕ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.
ಇದನ್ನೂ ಓದಿ: ಮೊಬೈಲ್ ಕದ್ದ ಕಳ್ಳರನ್ನು ಬೆನ್ನಟ್ಟಿ ಸೆರೆ ಹಿಡಿದ ಮಹಿಳಾ ಪತ್ರಕರ್ತೆ
ಕೋವಿಡ್ 19 ಕಾಲ ಘಟ್ಟದ ಬಳಿಕ ಕಂಟೆಂಟ್ ಕ್ರಿಯೇಟರ್ಸ್ ಇದೀಗ ಆನ್ ಲೈನ್ ಪ್ಲ್ಯಾಟ್ ಫಾರಂಗಳಲ್ಲಿ ಜನರಿಗೆ ಪರಿಚಯವಿರುವ ಮುಖಗಳನ್ನೇ ಮನರಂಜನಾ ಕ್ಷೇತ್ರದಲ್ಲಿ ಅವಕಾಶ ನೀಡಲು ಮನಸ್ಸು ಮಾಡುತ್ತಿರುವುದು ಈ ಟಿಕ್ ಟಾಕ್ ಸ್ಟಾರ್ ಗಳಿಗೆ ಬೇಡಿಕೆ ಕುದುರಲು ಕಾರಣವಾಗಿದೆ.
ಡಿಜಿಟಲ್ ಮೀಡಿಯಾ ಕ್ಷೇತ್ರವು ಶೀಘ್ರ ಜನಸ್ಪಂದನೆ ಬಯಸುವ ಕ್ಷೇತ್ರಗಳಲ್ಲಿ ಒಂದಾಗಿದೆ ಮತ್ತು ಇವುಗಳಲ್ಲಿ ಯಾವುದೇ ಒಂದು ವಿಷಯ ವಿಭಿನ್ನವಾಗಿದ್ದು ನೆಟ್ ಬಳಕೆದಾರರ ಗಮನ ಸೆಳೆಯುವಂತಿದ್ದಲ್ಲಿ ಅಂತಹ ವಿಷಯಗಳು ತಕ್ಷಣವೇ ವೈರಲ್ ಆಗಿಬಿಡುತ್ತವೆ.
ಹಾಗಾಗಿ, ಈಗಾಗಲೇ ನೆಟ್ ಲೋಕದಲ್ಲಿ ಒಂದು ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ ಟಿಕ್ ಟಾಕ್ ಸ್ಟಾರ್ ಗಳನ್ನೇ ಹಾಕಿಕೊಂಡು ಚಿತ್ರಗಳನ್ನು ಅಥವಾ ವೆಬ್ ಸಿರೀಸ್ ಗಳನ್ನು ನಿರ್ಮಾಣ ಮಾಡಿದಲ್ಲಿ ಅವರ ಅಭಿಮಾನಿ ವರ್ಗವನ್ನು ಸುಲಭವಾಗಿ ತಲುಪಬಹುದು ಎಂಬ ಲೆಕ್ಕಾಚಾರವೂ ಇದರ ಹಿಂದಿದೆ ಎನ್ನುತ್ತಾರೆ ಆಲ್ಟ್ ಬಾಲಾಜಿಯ ಸಿಇಒ ನಚಿಕೇತ್ ಪಂತ್ ವೈದ್ಯ.
ಇದನ್ನೂ ಓದಿ: ಕೋವಿಡ್ 19 ವಾರಿಯರ್ಸ್ ಗೆ ವಿಶೇಷ ಡೂಡಲ್ ಮೂಲಕ ಗೂಗಲ್ ಅಭಿನಂದನೆ
ಇನ್ನು, ಈ ಟಿಕ್ ಟಾಕ್ ಸ್ಟಾರ್ ಗಳನ್ನು ಜನ ಸುಲಭವಾಗಿ ಗುರುತಿಸುತ್ತಾರೆ ಮತ್ತು ಕೆಲವೊಮ್ಮೆ ಇವರ ಜನಪ್ರಿಯತೆ ಯೂಟ್ಯೂಬರ್ ಗಳಿಗಿಂತಲೂ ಹೆಚ್ಚಿನ ಮಟ್ಟದಲ್ಲಿರುತ್ತದೆ ಎನ್ನುತ್ತಾರೆ ಓರ್ ಮ್ಯಾಕ್ಸ್ ಮೀಡಿಯಾ ಕನ್ಸೆಲ್ಟಿಂಗ್ ಫರ್ಮ್ ನ ಸಿಇಒ ಶೈಲೇಶ್ ಕಪೂರ್ ಅವರು.
ಇವೆಲ್ಲ ಅಂಶಗಳಿಗಿಂತ ಹೆಚ್ಚಾಗಿ, ಸಂಭಾವನೆ ವಿಚಾರದಲ್ಲೂ ಈ ಟಿಕ್ ಟಾಕ್ ಸ್ಟಾರ್ ಗಳು ದುಬಾರಿಯೇನಲ್ಲ. ಈಗಾಗಲೇ ಒಂದು ಹಂತಕ್ಕೆ ಜನಪ್ರಿಯತೆಯನ್ನು ಹೊಂದಿರುವ ನಟ ನಟಿಯರು ಪ್ರತೀ ವೆಬ್ ಶೋ ಎಪಿಸೋಡ್ ಗೆ 25 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದಾರೆ. ಆದರೆ, ಟಿಕ್ ಟಾಕ್ ಸ್ಟಾರ್ ಗಳು 1-2 ಲಕ್ಷ ರೂಪಾಯಿಗಳ ರೇಂಜ್ ನಲ್ಲಿ ಲಭ್ಯರಾಗುವುದೂ ಸಹ ನಿರ್ಮಾಣ ಸಂಸ್ಥೆಗಳು ಟಿಕ್ ಟಾಕ್ ಸ್ಟಾರ್ ಗಳ ಕಡೆಗೆ ಒಲವು ತೋರಿಸಲು ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.