ಹೂಡಿಕೆಗೆ 8ದಾರಿಗಳು!

ಅಂಚೆ ಇಲಾಖೆಯಲ್ಲಿ ಹಣ ಇಟ್ಟವನೇ ಜಾಣ

Team Udayavani, Sep 14, 2020, 7:16 PM IST

ಹೂಡಿಕೆಗೆ 8ದಾರಿಗಳು!

ಕೋವಿಡ್ ಬಹಳಷ್ಟು ಜನರ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದೆ. ಪ್ರಪಂಚದ ಎಲ್ಲ ದೇಶಗಳ ಆರ್ಥಿಕ ವ್ಯವಸ್ಥೆಯನ್ನು ಹಿಮ್ಮುಖವಾಗಿ ಚಲಿಸುವಂತೆ ಮಾಡಿದೆ. ಹೂಡಿಕೆ, ಸಂಪಾದನೆ ಕುರಿತು ಈವರೆಗೂ ಇದ್ದ ಎಲ್ಲಾ ಲೆಕ್ಕಾಚಾರಗಳೂ ತಲೆಕೆಳಕಾಗಿವೆ. ವಿವಿಧ ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದವರು ಈಗ ಯಾವ ಕ್ಷೇತ್ರದಲ್ಲಿ ಹಣ ಹೂಡಬೇಕು ಎಂಬ ಗೊಂದಲದಲ್ಲಿದ್ದಾರೆ. ಚಿನ್ನ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಹೂಡಿಕೆ ಮಾಡಿದರೆ ಯಾವತ್ತಿಗೂ ಸೇಫ್ ಅನ್ನುತ್ತಿದ್ದವರೇ ಈಗ ಆ ಮಾತುಗಳನ್ನಾಡಲು ಹಿಂಜರಿಯುತ್ತಿರೆ. ಇಂಥ ಸಂದರ್ಭದಲ್ಲಿ, ಅಂಚೆ ಇಲಾಖೆಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿದರೆ, ಹಣಕ್ಕೆ ಭದ್ರತೆ ಮಾತ್ರವಲ್ಲ, ಹೆಚ್ಚು ಬಡ್ಡಿಯನ್ನೂ ಪಡೆಯಲು ಸಾಧ್ಯವಿದೆ. ಅಂಚೆ ಇಲಾಖೆಯಲ್ಲಿ ಯಾವ ಯಾವ ಖಾತೆಗಳಲ್ಲಿ ಹೂಡಿಕೆ ಮಾಡಬಹುದು? ಬ್ಯಾಂಕ್‌ನ ಯೋಜನೆಗಳಿಗಿಂತ ಅವು ಹೇಗೆ ಹೆಚ್ಚು ಲಾಭಕರ ಎಂಬುದರ ಕುರಿತ ವಿವರ ಮಾಹಿತಿ ಇಲ್ಲಿದೆ.

1. ಉಳಿತಾಯ ಖಾತೆ: ಈ ಖಾತೆಯು ಬ್ಯಾಂಕಿನ ಉಳಿತಾಯ ಖಾತೆಗಿಂತ ಹೆಚ್ಚಿನ ಬಡ್ಡಿ ದರ ಹೊಂದಿದೆ. ಪ್ರಸ್ತುತ ಅಂಚೆ ಇಲಾಖೆಯ ಉಳಿತಾಯ ಖಾತೆಯಲ್ಲಿ ಹಣ ಹೂಡಿದರೆ ಶೇ.4 ರಷ್ಟು ಬಡ್ಡಿ ಸಿಗುತ್ತದೆ. ಬ್ಯಾಂಕುಗಳಲ್ಲಿ ಶೇ. 2.75 ಬಡ್ಡಿ ಸಿಗುತ್ತದೆ. ಜೊತೆಗೆ, ಉಚಿತ ಡೆಬಿಟ್‌ ಕಾರ್ಡ್‌ , ಮೊಬೈಲ್‌ ಬ್ಯಾಂಕಿಂಗ್‌, ಇಂಟರ್ನೆಟ್‌ ಬ್ಯಾಂಕಿಂಗ್‌ ಸೌಲಭ್ಯವೂ ದೊರಕುತ್ತದೆ.

2. ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌: ಅಂಚೆ ಇಲಾಖೆಯಲ್ಲಿನ ಉಳಿತಾಯ ಖಾತೆ ಜೊತೆಗೆ ಐಪಿಪಿಬಿ ಡಿಜಿಟಲ್‌ ಖಾತೆ ತೆರೆದರೆ ಆನ್‌ಲೈನ್‌ ವ್ಯಾಲೆಟ್‌ ಸೌಲಭ್ಯ ಪಡೆಯಬಹುದು. ಅಂಚೆ ಉಳಿತಾಯ ಖಾತೆಯಿಂದ ಐಪಿಪಿಬಿ ಖಾತೆಗೆ ಅನಿಯಮಿತ ಸ್ವೀಪ್‌ ಇನ್‌ ಹಾಗ್‌ ಸ್ವೀಪ್‌ ಔಟ್‌ ಮಾಡಬಹುದು. ಜೊತೆಗೆ ಯಾವುದೇ ಬ್ಯಾಂಕಿಗೆ NEFT, IMPS ಹಾಗು RTGS ಆನ್ನು ಮೊಬೈಲ್‌ ನಿಂದಲೇ ಮಾಡಬಹುದು. ಮೊಬೈಲ್ ರೀಚಾರ್ಜ್‌, ಗ್ಯಾಸ್‌ ಹಾಗೂ ಎಲೆಕ್ಟ್ರಿಕ್‌ ಬಿಲ್‌ ಅನ್ನು ಪಾವತಿಸಬಹುದು.

3. ದಿ ಸಾವರಿನ್‌ ಗೋಲ್ಡ್ ಬಾಂಡ್‌: ಚಿನ್ನದ ಶೇಖರಣೆ ಹೆಚ್ಚಾದಂತೆ ಅದನ್ನು ಭದ್ರವಾಗಿ ಇಟ್ಟುಕೊಳ್ಳುವುದು ಸವಾಲಿನ ಕೆಲಸ. ಚಿನ್ನ ಕಳುವಾಗದಂತೆ ಇಡಬೇಕಾದರೆ ಬ್ಯಾಂಕ್‌ ಲಾಕರ್‌ ನಲ್ಲಿ ಇಡಬೇಕು. ಲಾಕರ್‌ ಸೌಲಭ್ಯ ಪಡೆಯಲು ಬ್ಯಾಂಕಿಗೆ ಹಣ ಪಾವತಿ ಮಾಡಬೇಕು. ಸಾವರಿನ್‌ ಗೋ ಬಾಂಡ್‌ ಯೋಜನೆಯಲ್ಲಿ ಹಣ ಹೂಡಿದರೆ, ಪ್ರಸ್ತುತ ಚಿನ್ನದ ದರದಲ್ಲಿ ಬಾಂಡ್‌ ನೀಡಲಾಗುತ್ತದೆ. ಈ ಬಾಂಡಿನ ಅವಧಿ 8 ವರ್ಷಗಳು. 8 ವರ್ಷದ ತರುವಾಯ ಅಂದಿನ ಚಿನ್ನದ ದರಕ್ಕೆ ಮೆಚ್ಯುರಿಟಿ ಸಿಗುತ್ತದೆ. ಇದರ ಜೊತೆಗೆ ಸರ್ಕಾರ ಪ್ರತಿ ವರ್ಷ 2.5% ಬಡ್ಡಿಯನ್ನು ನೀಡುತ್ತದೆ. ಹೂಡಿಕೆ ಸಲುವಾಗಿ ಚಿನ್ನ ಖರೀದಿಸುವವರು ಚಿನ್ನದ ಬದಲಾಗಿ ಚಿನ್ನದ ಬಾಂಡ್‌ ಮೇಲೆ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ.

4. ಹಿರಿಯ ನಾಗರೀಕರ ಉಳಿತಾಯ ಯೋಜನೆ (SCSS): ಈ ಯೋಜನೆಯಲ್ಲಿ 60 ವರ್ಷ ದಾಟಿದವರು1000 ದಿಂದ 15 ಲಕ್ಷದವರೆಗೆ ಹಣ ಹೂಡಿಕೆ ಮಾಡಬಹುದು. ಪ್ರಸ್ತುತ ಇದರ ಬಡ್ಡಿಯ ದರ 7.4%. ಸದ್ಯಕ್ಕೆ ಯಾವ ಬ್ಯಾಂಕಿನಲ್ಲೂ ಈ ಪ್ರಮಾಣದ ಬಡ್ಡಿ ದರ ಸಿಗುವುದಿಲ್ಲ. ಈ ಯೋಜನೆಯಲ್ಲಿ ಬಡ್ಡಿಯು ಪ್ರತಿ ಮೂರು ತಿಂಗಳಿಗೊಮ್ಮೆ ದೊರಕುತ್ತದೆ. ನಿಮಗೆ ಬಡ್ಡಿಯ ಅವಶ್ಯಕತೆ ಇರದಿದ್ದರೆ, ಈ ಹಣವನ್ನು ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಸ್ವಯಂಚಾಲಿತ ವರ್ಗಾವಣೆ ಮಾಡಿಸಿ, ಅಲ್ಲಿಂದ ಬಡ್ಡಿಯ ಹಣಕ್ಕೆ ಸರಿ ಹೊಂದುವಂತೆ ಒಂದು ಆರ್.ಡಿ ಖಾತೆ ತೆರದಲ್ಲಿ, ಬಡ್ಡಿಗೆ ಮತ್ತೆ ಬಡ್ಡಿ ಗಳಿಸಬಹುದು. ಈ ಎರಡು ಖಾತೆಗಳ ಮುಕ್ತಾಯದ ಅವಧಿ 5 ವರ್ಷಗಳು.

5 .ಮಾಸಿಕ ಉಳಿತಾಯ ಯೋಜನೆ (MIS).: ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿ 4.5 ಲಕ್ಷ ಹಾಗೂ ಜಂಟಿಯಾಗಿ 9 ಲಕ್ಷದವರೆಗೆ ಹಣ ಹೂಡಿಕೆ ಮಾಡಬಹುದು. ಪ್ರತಿ ತಿಂಗಳು ಬಡ್ಡಿ ದೊರಕುತ್ತದೆ. ಪ್ರಸ್ತುತ ಇದರ ಬಡ್ಡಿ ದರ 6.6%. ಈ ಯೋಜನೆಯಲ್ಲೂ ಬಡ್ಡಿಯ ಅವಶ್ಯಕತೆ ಇರದಿದ್ದರೆ ಈ ಹಣವನ್ನು ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಸ್ವಯಂಚಾಲಿತ ವರ್ಗಾವಣೆ ಮಾಡಿಸಿ ಅಲ್ಲಿಂದ ಬಡ್ಡಿಯ ಹಣಕ್ಕೆ ಸರಿ ಹೊಂದುವಂತೆ ಒಂದು ಆರ್‌.ಡಿ ಖಾತೆ ತೆರೆದಲ್ಲಿ ಬಡ್ಡಿಗೆ ಮತ್ತೆ ಬಡ್ಡಿ ಗಳಿಸಬಹುದು. ಈ ಎರಡು ಖಾತೆಯ ಮುಕ್ತಾಯದ ಅವಧಿ 5 ವರ್ಷಗಳು.

6. ಸ್ಥಿರ ಠೇವಣಿ (TD): ಈ ಯೋಜನೆಯಲ್ಲಿ 1, 2, 3 ಹಾಗೂ 5 ವರ್ಷದವರೆಗೆ ಹಣವನ್ನು ಫಿಕ್ಸೆಡ್‌ ಇಡಬಹುದು. ಪ್ರಸ್ತುತ 1,2 ಮತ್ತು 3 ವರ್ಷದ ಸ್ಥಿರ ಠೇವಣಿಗೆ 5.5% ಬಡ್ಡಿ ದರವಿದೆ. 5 ವರ್ಷದ ಸ್ಥಿರ ಠೇವಣಿಗೆ 6.7% ಬಡ್ಡಿ ದರವಿದೆ. 5 ವರ್ಷದ ಸ್ಕೀಮ್‌ ನಲ್ಲಿ ಹೂಡಿಕೆ ಮಾಡಿದಲ್ಲಿ ಆದಾಯ ತೆರಿಗೆಯ ವಿನಾಯಿತಿಯನ್ನು ಪಡೆಯಬಹುದು

7. ಕಿಸಾನ್‌ ವಿಕಾಸ್‌ ಪತ್ರ (KVP) : ಕೆವಿಪಿಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ನಿಮ್ಮ ಹಣ ದ್ವಿಗುಣಗೊಳ್ಳುತ್ತದೆ. ಈ ಯೋಜನೆಯಲ್ಲಿ ಎಷ್ಟು ಮೊತ್ತವನ್ನಾದರೂ ಹೂಡಿಕೆ ಮಾಡಬಹುದು. 10 ವರ್ಷ 4 ತಿಂಗಳಿಗೆ ಹಣ ಡಬಲ್‌ ಆಗುತ್ತದೆ. ಮಧ್ಯದಲ್ಲಿ ಹಣದ ಅವಶ್ಯಕತೆ ಕಂಡು ಬಂದರೆ 2.5 ವರ್ಷಗಳ ಬಳಿಕ ಖಾತೆ ಕ್ಲೋಸ್‌ ಮಾಡಬಹುದು. ಆಗ ನಿಮಗೆ ಖಾತೆ ಮಾಡಿಸುವಾಗ ಇದ್ದ ಬಡ್ಡಿ ದರದ ಆಧಾರದ ಮೇಲೆ ಬಡ್ಡಿ ನೀಡುವರು. ಪ್ರಸ್ತುತ ಇದರ ಬಡ್ಡಿ ದರ 6.9%.

8. ಅಂಚೆ ಜೀವ ವಿಮೆ: ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಜೀವ ವಿಮೆಯನ್ನು ಪಡೆದಲ್ಲಿ ಇತರೆ ಜೀವ ವಿಮೆಗಳಿಗಿಂತ ಹೆಚ್ಚಿನ ಬೋನಸ್‌ ಪಡೆಯಬಹುದು. ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯಲ್ಲಿ 6 ವಿವಿಧ ರೀತಿಯ ಪಾಲಿಸಿಯನ್ನು ಮಾಡಿಸಬಹುದು, ಈ ಎಲ್ಲಾ ವಿಮೆಯಲ್ಲಿನ ಹಣದ ಹೂಡಿಕೆಗೆ ಆದಾಯ ತೆರಿಗೆಯ ವಿನಾಯಿತಿ ದೊರಕುತ್ತದೆ. ಹೆಚ್ಚಿನ ಮಾಹಿತಿಗೆ www.indiapost.gov.in ಗೆ ಭೇಟಿ ನೀಡಿ.

ರಂಗನಾಥ್‌ ಹಾರೋಗೊಪ್ಪ

ಟಾಪ್ ನ್ಯೂಸ್

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

Police Raid: ಮಾದಕವಸ್ತು, ಅಕ್ರಮ ಮದ್ಯಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

IPL Mega Auction: Here’s what all 10 teams look like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

Police Raid: ಮಾದಕವಸ್ತು, ಅಕ್ರಮ ಮದ್ಯಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

IPL Mega Auction: Here’s what all 10 teams look like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.