ಟಿ.ವಿ.ಯನ್ನು ಸ್ಮಾರ್ಟ್‌ ಮಾಡುವ ಸ್ಟಿಕ್‌ ಎಂಬ ಮಂತ್ರದಂಡ!


Team Udayavani, Nov 14, 2020, 3:35 PM IST

ಟಿ.ವಿ.ಯನ್ನು ಸ್ಮಾರ್ಟ್‌ ಮಾಡುವ ಸ್ಟಿಕ್‌ ಎಂಬ ಮಂತ್ರದಂಡ!

ಈಗ ಮಾರುಕಟ್ಟೆಗೆ ಬರುತ್ತಿರುವ ಸ್ಮಾರ್ಟ್‌ ಟಿ.ವಿಗಳಲ್ಲಿ ಬಹುತೇಕ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆ ಇರುತ್ತದೆ. ನಿಮ್ಮ ಫೋನ್‌ನಲ್ಲಿ ಹೇಗೆ ಗೂಗಲ್‌ ಪ್ಲೇ ಸ್ಟೋರ್‌ ಇರುತ್ತದೋ, ಹಾಗೆಯೇ ಟಿ.ವಿಯಲ್ಲೂ ಪ್ಲೇ ಸ್ಟೋರ್‌ ಇರುತ್ತದೆ. ದೃಶ್ಯಗಳ ಸಂಬಂಧ ಇರುವ ಅಪ್ಲಿಕೇಷನ್‌ಗಳನ್ನು ಟಿವಿಯ ಪ್ಲೇ ಸ್ಟೋರ್‌ನಲ್ಲಿ ಇನ್‌ ಸ್ಟಾಲ್‌ ಮಾಡಿಕೊಂಡು ನೋಡಬಹುದಾಗಿದೆ. ಪ್ಲೇ ಸ್ಟೋರ್‌ನಿಂದಾಗಿ ನೋಡುಗನಿಗೆ ಸಾವಿರಾರು ಆಯ್ಕೆಗಳ ಸ್ವಾತಂತ್ರ್ಯವಿದೆ. ಇದು ಆಂಡ್ರಾಯ್ಡ್ ಟಿ.ವಿಯ ವೈಶಿಷ್ಟ್ಯ.

ಸ್ಮಾರ್ಟ್‌ ಟಿವಿ ಎಂದಾಕ್ಷಣ ಎಲ್ಲದರಲ್ಲೂ ಅಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆ ಇರುವುದಿಲ್ಲ. ಎರಡು ಮೂರು ವರ್ಷಗಳ ಹಿಂದೆ ಕೊಂಡಿರುವ ಅನೇಕ ಸ್ಮಾರ್ಟ್‌ ಟಿ.ವಿ.ಗಳಲ್ಲಿ ಅಂಡ್ರಾಯ್ಡ್ ವ್ಯವಸ್ಥೆ ಇರುವುದಿಲ್ಲ. ಇನ್ನು ಕೆಲವರದು ಕೇವಲ ಎಲ್ ಇಡಿ ಪರದೆ ಹೊಂದಿರುವ ಟಿ.ವಿ.ಗಳು ಆಗಿರುತ್ತವೆ. ಇವು ಸ್ಮಾರ್ಟ್‌ ಟಿವಿ ಕೂಡ ಅಲ್ಲ. ಬೇಕೆಂದ ಅಪ್ಲಿಕೇಷನ್‌ಗಳ ಮೂಲಕ ಟಿ.ವಿ ನೋಡಲು ಸಾಧ್ಯವಾಗುವುದಿಲ್ಲ. ಇಂಥ ಟಿ.ವಿ. ಉಳ್ಳವರು ಏನು ಮಾಡಬೇಕು? 30 ಸಾವಿರಕ್ಕೂ ಅಧಿಕ ಬೆಲೆ ಕೊಟ್ಟು ಕೊಂಡಿರುವ ಟಿ.ವಿ.ಯನ್ನು ತೆಗೆದಿಟ್ಟು ಹೊಸ ಟಿ.ವಿ. ಕೊಳ್ಳಲಾಗುವುದಿಲ್ಲ.

ಸ್ಟಿಕ್‌ ನೆರವಿನಿಂದ ಸ್ಮಾರ್ಟ್‌! :  ಇಂಥವರಿಗಾಗಿಯೇ ಅಮೆಜಾನ್‌ ಫೈರ್‌ ಟಿ.ವಿ. ಸ್ಟಿಕ್‌ ಇದೆ. ಗೂಗಲ್‌ ಕಾರ್ಯಾಚರಣೆ ವ್ಯವಸ್ಥೆ ಬೇಕೆಂದರೆ ಶಿಯೋಮಿ ಕಂಪ ನಿ ಯ ಮಿ ಟಿ.ವಿ ಸ್ಟಿಕ್‌ ಇದೆ. ಈ ಸ್ಟಿಕ್‌ಗಳು ಸುಮಾರು ಎರಡು ಇಂಚು ಅಗಲ, ನಾಲ್ಕು ಇಂಚು ಉದ್ದ ಇರುತ್ತವೆ. ಇವಕ್ಕೆ ಎಚ್‌ಡಿಎಂಐ ಪೋರ್ಟ್‌ ಇರುತ್ತದೆ. ನಿಮ್ಮ ಸ್ಮಾರ್ಟ್‌ ಟಿ.ವಿ.ಯ ಎಚ್‌ಡಿಎಂಐ ಪೋರ್ಟ್‌ಗೆ ಪ್ಲಗ್‌ ಮಾಡಿದರೆ ಸಾಕು. ಇವುಗಳಲ್ಲಿ ನೀವು ಅಮೆಜಾನ್‌ ಪ್ರೈಮ್, ನೆಟ್‌ ಫ್ಲಿಕ್ಸ್‌ , ಹಾಟ್‌ಸ್ಟಾ ರ್‌, ಯೂಟ್ಯೂಬ್, ವೂಟ್‌ ಸೇರಿದಂತೆ ಹಲವಾರು ಅಪ್ಲಿಕೇಷನ್‌ಗಳ ಮೂಲಕ ಸಿನಿಮಾ, ಟಿವಿ ಧಾರಾವಾಹಿ, ವೆಬ್‌ ಸರಣಿಗಳು, ಕಂಟೆಂಟ್‌ಗಳು, ಟಿ. ವಿ ಚಾನೆಲ್‌ಗ‌ ಳನ್ನು ವೀಕ್ಷಿಸಬಹುದು. ಇವೆರಡರಲ್ಲಿ ಯಾವುದು ಚೆನ್ನಾಗಿದೆ ಎಂಬ ಕುತೂಹಲ ಹಲವರಲ್ಲಿ ಇದ್ದೇ ಇರುತ್ತದೆ. ಇವೆರಡರ ಹೋಲಿಕೆ ನೋಡೋಣ. ಅಮೆಜಾನ್‌ ಫೈರ್‌ ಟಿ.ವಿ. ಸ್ಟಿಕ್‌ ದರ 4000 ರು. ಆಗಾಗ ವಿಶೇಷ ಸಂದರ್ಭಗಳಲ್ಲಿ ರಿಯಾಯಿತಿ ಬಂದರೆ ಈ ದರ ಕಡಿಮೆಯೂ ಆಗುತ್ತದೆ. ಮಿ ಟಿ. ವಿ ಸ್ಟಿಕ್‌ ದರ 2800 ರೂ. ಎರಡರ ಜೊತೆಯಲ್ಲೂ ರಿಮೋಟ್‌ ನೀಡಲಾಗಿದೆ.

ಅಮೆಜಾನ್‌ ಫೈರ್‌ ಸ್ಟಿಕ್‌ ನಾಲ್ಕು ಕೋರ್‌ ಗಳ, 1.3 ಗಿಗಾ ಹರ್ಟ್ಸ್ ಎಆರ್‌ಎಂ ಪ್ರೊಸೆಸರ್‌ ಹೊಂದಿದೆ. ಮಿ ಸ್ಟಿಕ್‌ ನಾಲ್ಕು ಕೋರ್‌ಗಳ ಕೋರ್ಟೆಕ್ಸ್‌ ಎ 53, 2 ಗಿಗಾ ಹರ್ಟ್ಸ್ ಪ್ರೊಸೆಸರ್‌ ಹೊಂದಿದೆ. ಎರಡೂ ಸಹ 1 ಜಿಬಿ ರ್ಯಾಮ್‌ ಮತ್ತು 8 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿವೆ. ಫೈರ್‌ ಸ್ಟಿಕ್‌ ಬ್ಲೂಟೂತ್‌ 4.1, ಮಿ ಸ್ಟಿಕ್‌ ಬ್ಲೂಟೂತ್‌ 4.2 ಒಳಗೊಂಡಿದೆ. ಎರಡರಲ್ಲೂ ವಿಡಿಯೋವನ್ನು ಫ‌ುಲ್ ಎಚ್‌ಡಿಯಲ್ಲಿ ವೀಕ್ಷಿಸಬಹುದು. (ಅಮೆಜಾನ್‌ ಫೈರ್‌ ಟಿ.ವಿ. ಸ್ಟಿಕ್‌ 4ಕೆ ರೆಸ್ಯೂಲೇಷನ್‌ ಕೂಡ ಇದೆ. ಅದರ ದರ 6000 ರೂ.) ಎರಡರಲ್ಲೂ ನಿಮ್ಮ ಮೊಬೈಲ್‌ ಫೋನ್‌, ಲ್ಯಾಪಾrಪ್‌ ಇತ್ಯಾದಿಗಳನ್ನು ಕ್ರೋಂಕಾಸ್ಟ್‌ ಮೂಲಕ ಕಾಸ್ಟಿಂಗ್‌ ಮಾಡಿಕೊಳ್ಳಬಹುದು.

ಪ್ಲಸ್‌ ಮತ್ತು ಮೈನಸ್‌ :  ಫೈರ್‌ ಟಿವಿ ಸ್ಟಿಕ್‌ನ ತಯಾರಿಕಾ ಗುಣಮಟ್ಟ ಚೆನ್ನಾಗಿದೆ. ಬಟನ್‌ಗಳು ಮೃದುವಾಗಿ ಕೆಲಸ ಮಾಡುತ್ತವೆ. ಆದರೆ ಮಿ ಟಿ. ವಿ ಸ್ಟಿಕ್ಸ್‌ ತಯಾರಿಕಾ ಗುಣಮಟ್ಟ ಫೈರ್‌ ಸ್ಟಿಕ್‌ ಹೋಲಿಸಿದರೆ ಕಡಿಮೆ. ಬಟನ್‌ಗಳನ್ನು ಒತ್ತಿದಾಗ ಟಕಟಕ ಶಬ್ದ ಬರುತ್ತದೆ. ಮಿ ಸ್ಟಿಕ್ಸ್‌ ಇಂಟರ್‌ ಸ್ಪೇಸ್‌ ಆ್ಯಂಡ್ರಾಯx… ಇದ್ದರೂ ಕೆಲಸದ ವೇಗ ಸ್ವಲ್ಪ ಕಡಿಮೆ. ಫೈರ್‌ ಸ್ಟಿಕ್‌ ನ ಲ್ಲಿ ಅಪ್ಲಿಕೇಷನ್‌ಗಳು ಬೇಗನೆ ರನ್‌ ಆಗುತ್ತವೆ. ಮಿ ಸ್ಟಿಕ್‌ ಆ್ಯಂಡ್ರಾಯ್ಡ್ 9 ಕಾರ್ಯಾಚರಣಾ ವ್ಯವಸ್ಥೆ ಹೊಂದಿದೆ. ಅಂದರೆ ಆಂತರಿಕವಾಗಿ ಆ್ಯಂಡ್ರಾಯ್ಡ್ ಓಎಸ್‌ ಹೊಂದಿರುವ ಟಿ.ವಿ. ಯಾವ ರೀತಿ ಡಿಸ್‌ ಪ್ಲೇ ಹೊಂದಿರುತ್ತದೋ ಅದೇ ರೀತಿ ಇದರಲ್ಲೂ ಇದೆ. ಫೈರ್‌ ಸ್ಟಿಕ್‌ ತನ್ನದೇ ಆದ ಫೈರ್‌ ಓಎಸ್‌ ಹೊಂದಿದೆ. ಆದರೆ, ಮಿ ಸ್ಟಿಕ್‌ನಲ್ಲಿ ಆ್ಯಂಡ್ರಾ ಯ್ಡ ಸ್ವಲ್ಪ ಲ್ಯಾಗ್‌ ಎನಿಸುತ್ತದೆ. ಧ್ವನಿ ಮೂಲಕ ಹುಡುಕುವ ವ್ಯವಸ್ಥೆ ಫೈರ್‌ ಸ್ಟಿಕ್ಸ್‌ ನಲ್ಲಿ ಅಲೆಕ್ಸಾ ಇದ್ದರೆ, ಮಿ ಸ್ಟಿಕ್‌ನ ಲ್ಲಿ ಗೂಗಲ್‌ ಅಸಿಸ್ಟೆಂಟ್‌ ಇದೆ.

-ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

WhatsApp ಚಾಟ್‌ ಡಿಲೀಟ್‌ ಆಗಿದ್ಯಾ? ಚಾಟ್‌ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

WhatsApp ಚಾಟ್‌ ಡಿಲೀಟ್‌ ಆಗಿದ್ಯಾ? ಚಾಟ್‌ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.