50 ಕೆ.ಜಿ ಗಾಂಜಾ ವಶ: ಇಬ್ಬರ ಬಂಧನ
Team Udayavani, Sep 15, 2020, 11:36 AM IST
ಬೆಂಗಳೂರು: ಆಂಧ್ರದವಿಶಾಖಪಟ್ಟಣಂನಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಕೋಣನಕುಂಟೆ ಪೊಲೀಸರು ಯಶಸ್ವಿಯಾಗಿದ್ದು,50ಕೆ.ಜಿ ಗಾಂಜಾ ವಶಪಡಿಸಿ ಕೊಂಡಿದ್ದಾರೆ.
ಕೊಳ್ಳೆಗಾಲ ಮೂಲದ ಎಂ ಸುರೇಶ, ವಿಶಾಖಪಟ್ಟಣದ ಬಂಟು ತಾತಾರಾಮ್ ಬಂಧಿತರು. ಸೆ.13ರಂದು ಕೊತ್ತನೊರಿನ ಬ್ರೂಕ್ಸ್ ಹೆವನ್ ಲೇಔಟ್‌ನಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿಆಧರಿಸಿ ಕಾರ್ಯಾಚರಣೆನಡೆಸಿಆರೋಪಿ ಸುರೇಶ್‌ನನ್ನು ಬಂಧಿಸಲಾಯಿತು. ಆತನ ಬಳಿಯಿದ್ದ 1,040 ಗ್ರಾಂ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿತ್ತು. ಆರೋಪಿ ಸುರೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡುವಿಚಾರಣೆನಡೆಸಿದಾಗ ಆತ ಸ್ನೇಹಿತ ಬಂಟು ತಾತಾರಾಮ್ ಬಗ್ಗೆ ಮಾಹಿತಿ ನೀಡಿದ. ಇದನ್ನು ಆಧರಿಸಿ ಇನ್ಸ್‌ಪೆಕ್ಟರ್ ಟಿ.ಎಂ ಧರ್ಮೇಂದ್ರ ನೇತೃತ್ವದ ತಂಡ, ಜೆ.ಪಿ ನಗರ ಎಂಟನೇ ಹಂತದ ಮಹೇಶ್ವರ ಲೇಔಟ್‌ನಲ್ಲಿಮನೆಯೊಂದರ ಮೂರನೇ ಮಹಡಿಯಲ್ಲಿ ಶೋಧ ನಡೆಸಲಾಯಿತು.ಈ ವೇಳೆ ಮನೆಯಲ್ಲಿದ್ದ ಬಂಟು ತಾತಾರಾಮ್ ಸಿಕ್ಕಿಬಿದ್ದ ಜತೆಗೆಆತ ಮನೆಯಲ್ಲಿ ಸಂಗ್ರಹಿಸಿದ್ದ 48 ಕೆ.ಜಿ 950 ಗ್ರಾಂಗಾಂಜಾ ವಶಪಡಿಸಿಕೊಳ್ಳಲಾಯಿತು. ಮೌಲ್ಯ ಸುಮಾರು 25 ಲಕ್ಷ ರೂ. ಮೌಲ್ಯ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ದಂಧೆಯಲ್ಲಿರುವ ಆರೋಪಿಗಳು, ಆಂಧ್ರದ ವಿಶಾಖಪಟ್ಟಂನಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿಕೊಂಡು ಬರುತ್ತಿದ್ದರು. ಇಲ್ಲಿನ ಮನೆಯಲ್ಲಿ ಅಷ್ಟೂ ಪ್ರಮಾಣದ ಗಾಂಜಾವನ್ನು ಸಬ್ ಪೆಡ್ಲರ್ ಗಳ ಮೂಲಕಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು ಎಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳ ಜತೆ ಇನ್ನೂ ಹಲವರು ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರೆತಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.