ಕಟ್ಟಡ ಕಟ್ಟಿಸಲು ಎನ್‌ಒಸಿ ಪಡೆಯುವುದು ಅಗತ್ಯ: ಶಾಸಕ ನಡಹಳ್ಳಿ


Team Udayavani, Sep 15, 2020, 4:28 PM IST

ಕಟ್ಟಡ ಕಟ್ಟಿಸಲು ಎನ್‌ಒಸಿ ಪಡೆಯುವುದು ಅಗತ್ಯ: ಶಾಸಕ ನಡಹಳ್ಳಿ

ಮುದ್ದೇಬಿಹಾಳ: ತಾಳಿಕೋಟೆ, ನಾಲತವಾಡ,ಮುದ್ದೇಬಿಹಾಳ ಪಟ್ಟಣಗಳಲ್ಲಿ ಪಿಡಬ್ಲೂಡಿ ರಸ್ತೆ ಅಕ್ಕಪಕ್ಕ ಕಟ್ಟಡ ಕಟ್ಟಲು ಪುರಸಭೆ, ಪಟ್ಟಣ ಪಂಚಾಯಿತಿಯವರು ಇನ್ನು ಮುಂದೆ ಕಡ್ಡಾಯವಾಗಿ ಪಿಡಬ್ಲೂಡಿ ಎನ್‌ಒಸಿ ಪಡೆದುಕೊಂಡೇ ಅನುಮತಿ ಕೊಡಬೇಕು. ಹೆಸ್ಕಾಂನವರು ವಿದ್ಯುತ್‌ ಸಂಪರ್ಕ ಕೊಡಲು ಸಹಿತ ಇದೇ ಪದ್ಧತಿ ಪಾಲಿಸಬೇಕು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಸೂಚಿಸಿದ್ದಾರೆ.

ಇಲ್ಲಿನ ತಮ್ಮ ಗೃಹಕಚೇರಿ ದಾಸೋಹ ನಿಲಯದಲ್ಲಿ ಸೋಮವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಅನೇಕರುಪಿಡಬ್ಲೂಡಿ ರಸ್ತೆ ಅತಿಕ್ರಮಿಸಿ ಕಟ್ಟಡ ಕಟ್ಟಿಕೊಂಡಿದ್ದಾರೆ.ಇದರಿಂದ ರಸ್ತೆಗಳ ಅಭಿವೃದ್ಧಿಗೆ ತೊಡಕಾಗುತ್ತಲಿದೆ. ಇಂಥವರಿಗೆ ನೋಟಿಸ್‌ ಕೊಡಬೇಕು. ಇನ್ನು ಮುಂದೆ ಪುರಸಭೆ, ಪಟ್ಟಣ ಪಂಚಾಯತ್‌, ಹೆಸ್ಕಾಂನವರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.

ಮುದ್ದೇಬಿಹಾಳ ಪಟ್ಟಣದಲ್ಲಿ ಬಸವೇಶ್ವರವೃತ್ತದಿಂದ ಆಲಮಟ್ಟಿ ರಸ್ತೆ ಎರಡೂ ಕಡೆ ಕಟ್ಟಡಗಳು ತಲೆ ಎತ್ತಿವೆ. ಪಿಡಬ್ಲೂಡಿ ಎನ್‌ಒಸಿ ಇಲ್ಲದೆ ಇಂಥವರಿಗೆ ಹೇಗೆ ಎನ್‌ಒಸಿ, ವಿದ್ಯುತ್‌ ಕನೆಕ್ಷನ್‌ ಕೊಟ್ರಿ ಎಂದು ಪುರಸಭೆ ಕಂದಾಯ ಅ ಧಿಕಾರಿ ಭಾರತಿ ಮಾಡಗಿ, ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ರಸ್ತೆ ಬದಿ ಕಟ್ಟಡಗಳಿಗೆ ಪಿಡಬ್ಲೂಡಿ ಎನ್‌ಒಸಿ ಅಗತ್ಯ ಎನ್ನುವ ಪರಿಜ್ಞಾನ ಇಲ್ಲವೇ. ಆಲಮಟ್ಟಿ ರಸ್ತೆ ಪರಿಸ್ಥಿತಿ ಹೇಗಿದೆ ಗೊತ್ತಾ. ನಾನು ಬಂದು ವಾಚಮನ್‌ ಕೆಲಸ ಮಾಡಬೇಕಾ. ನಾವಿಲ್ಲಿ ಮೀಟಿಂಗ್‌ ಮಾಡಿ ಟೈಟ್‌ ಮಾಡಿದರೆ ನೀವಲ್ಲಿ ಬೇಕಾಬಿಟ್ಟಿ ನಡೆದುಕೊಳ್ಳೋದಾ. ಎರಡು ವರ್ಷದಿಂದ ಹೇಳ್ತಿದ್ದೇನೆ. ಇನ್ನು ಮುಂದೆ ಸಹಿಸೊಲ್ಲ. ಹಣ ಕೊಟ್ರೆ ಎನ್‌ಒಸಿ ಕೊಡ್ತೀರಿ. ಪದ್ಧತಿ ಅನ್ನೋದೆ ಇಲ್ಲವಾಗಿದೆ. ಅದ್ಹೇಗೆ ಎನ್‌ಒಸಿ ಕೊಡದೆ ಕಟ್ಟಡ ಕಟ್ಟಿದ್ದಾರೆ. ಯಾರ್ಯಾರು ಎನ್‌ಒಸಿಗೆ ಸಹಿ ಮಾಡಿರ್ತಿರಿ ಅವರೆಲ್ಲ ಮನೆಗೆ ಹೋಗ್ತಿàರಿ. ಪಟ್ಟಣ ವ್ಯಾಪ್ತಿ ಹೊಂದಿರುವ ಹೆಸ್ಕಾಂನ ಸೆಕ್ಷನ್‌ ಅ ಧಿಕಾರಿಗೆ ನೋಟಿಸ್‌ ಕೊಡಿ ಎಂದು ಖಾರವಾಗಿ ಹೇಳಿದರು.

ಪೆನ್ಶನ್‌, ರೇಷನ್‌ ಕೊಡಿ: 60 ವರ್ಷ ಮೇಲ್ಪಟ್ಟವರಿಗೆ ಆಧಾರ್‌ ಕಾರ್ಡ್‌ ಆಧಾರದ ಮೇಲೆ ಪೆನ್ಶನ್‌ ಮಂಜೂರು ಮಾಡಬೇಕು, ಬಡವರಿಗೆ ಪಡಿತರ ಕಾರ್ಡ್‌ ಇಲ್ಲದಿದ್ದರೂ ಅವರ ಆಧಾರ್‌ ಕಾರ್ಡ್‌ ಮೇಲೆ ರೇಷನ್‌ ಕೊಡಬೇಕು ಎಂದು ಮುದ್ದೇಬಿಹಾಳ ಪ್ರಭಾರ ಹೊಂದಿರುವ ತಾಳಿಕೋಟೆ ತಹಶೀಲ್ದಾರ್‌ ಅನಿಲಕುಮಾರ ಢವಳಗಿಗೆ ಶಾಸಕರು ಸೂಚಿಸಿದರು.

ನೈಜ ಸಮೀಕ್ಷೆ ಮಾಡಿ: ಮಳೆಯಿಂದ ಬೆಳೆ ಹಾನಿ ಆಗಿದ್ದರೆ, ಮನೆ ಬಿದ್ದಿದ್ದರೆ ಅಂಥವುಗಳ ನೈಜ ಸಮೀಕ್ಷೆ ನಡೆಸಬೇಕು. ಕೃಷಿ, ತೋಟಗಾರಿಕೆ, ಪುರಸಭೆ ಅಧಿಕಾರಿಗಳು, ಪಿಡಿಒ, ಗ್ರಾಮ ಲೆಕ್ಕಿಗರು ಕಚೇರಿಯಲ್ಲಿ ಕುಳಿತು ವರದಿ ತಯಾರಿಸಬಾರದು.ಸ್ಥಳಕ್ಕೆ ಹೋಗಿ ಪರಿಶೀಲಿಸಿರುವ ಆಯಾ ಊರಿನ ಜಮೀನು, ಸರ್ವೇ ನಂಬರ್‌, ಜಮೀನು ಮಾಲೀಕನ ಹೆಸರು, ಹಾನಿಯಾದ ಬೆಳೆ, ಮನೆಯ ಬಳಿ ರೈತನ, ಮಾಲೀಕನ ಫೋಟೊ ಸಮೇತ ವರದಿ ತಯಾರಿಸಿ ನನಗೆ ಕೊಡಬೇಕು ಎಂದು ಶಾಸಕರು ಸೂಚಿಸಿದರು.

ವಿಮೆ ಜಾಗೃತಿ ಮೂಡಿಸಿ: ಮಳೆಯಿಂದಾಗಿ ಸೂರ್ಯಕಾಂತಿ, ಈರುಳ್ಳಿ ಬೆಳೆಗೆ ಸಮಸ್ಯೆ ಆಗಿದೆ. ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆ ಅಡಿ ಈರುಳ್ಳಿ ಸೇರ್ಪಡೆ ಬಗ್ಗೆ ರೈತರಿಗೆ ತಿಳಿ ಹೇಳಿ ವಿಮೆ ಮಾಡಿಸುವಂತೆ ಮನವೊಲಿಸಬೇಕು. ತೋಟಗಾರಿಕೆ ಬೆಳೆಗಾರರ ಮಾಹಿತಿ, ಮೊಬೈಲ್‌ ನಂಬರ್‌

ಸಂಗ್ರಹಿಸಿ ಇಟ್ಟುಕೊಂಡು ಕಾಲಕಾಲಕ್ಕೆ ಮಾಹಿತಿ ಕೊಡುತ್ತಿರಬೇಕು ಎಂದು ಶಾಸಕರು ಹೇಳಿದಾಗ ಮಾತನಾಡಿದ ತೋಟಗಾರಿಕೆ ಅಧಿಕಾರಿ ಢವಳಗಿ, ರೂಢಗಿ ಭಾಗದಲ್ಲಿ ಹೆಚ್ಚು ಈರುಳ್ಳಿಗೆ ಹಾನಿಯಾಗಿದೆ. ದ್ರಾಕ್ಷಿ ಬೆಳೆಯೂ ಸಮಸ್ಯೆಗೀಡಾಗಿದೆ. 63 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆದಿದ್ದು 23 ರೈತರು ಇದಕ್ಕಾಗಿ ವಿಮೆ ಕಟ್ಟಿದ್ದಾರೆ ಎಂದರು.

ಇದೇ ವೇಳೆ ಶಾಸಕರು ವಿವಿಧ ಪ್ರಮುಖ ಇಲಾಖೆಗಳ ಅಧಿಕಾರಿಗಳಿಗೆ ಮಳೆಹಾನಿ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿ ಕಡ್ಡಾಯವಾಗಿಪಾಲಿಸುವಂತೆ ತಿಳಿ ಹೇಳಿದರು. ತಾಪಂ ಇಒ ಶಶಿಕಾಂತ ಶಿವಪುರೆ ಸೇರಿದಂತೆ ಹಲವು ಅಧಿಕಾರಿಗಳು, ಪ್ರತಿನಿಧಿ  ಗಳು ಪಾಲ್ಗೊಂಡಿದ್ದರು.

ಮುದ್ದೇಬಿಹಾಳದ ಅಂಬೇಡ್ಕರ್‌ ಸರ್ಕಲ್‌ನಿಂದ ಬಿದರಕುಂದಿ ಕ್ರಾಸ್‌ವರೆಗೆ ವಿಜಯಪುರ ರಸ್ತೆಯನ್ನು 44 ಮೀ. ಅಗಲದ ಡಬಲ್‌ ರೋಡ್‌ ಮಾಡಲಾಗುತ್ತದೆ. ರಸ್ತೆಯ ಎರಡೂ ಬದಿಯ ಅತಿಕ್ರಮಣದಾರರಿಗೆ ನೋಟಿಸ್‌ ಕೊಟ್ಟು ತೆರವುಗೊಳಿಸಬೇಕು. ವಿದ್ಯುತ್‌ ಕಂಬ ಇರಬಾರದು. ಮಂಗಳವಾರದಿಂದಲೇ ಸರ್ವೇ ಪ್ರಾರಂಭಿಸಬೇಕು. ಎ.ಎಸ್‌. ಪಾಟೀಲ ನಡಹಳ್ಳಿ, ಶಾಸಕರು

ಹೊಸ ಡಿಸಿ ಸಿಕ್ಕಾಪಟ್ಟೆ ಸ್ಟ್ರಿಕ್ಟು  : ಹೊಸ ಡಿಸಿ ಸುನೀಲಕುಮಾರ ಅಭಿವೃದ್ಧಿ ವಿಷಯದಲ್ಲಿ ಸಿಕ್ಕಾಪಟ್ಟೆ ಸ್ಟ್ರಿಕುr. ನನ್ನದೂ ಸೇರಿ ಯಾರ ಮಾತನ್ನೂ ಕೇಳೊಲ್ಲ. ಅತಿಕ್ರಮಣ ನಿರ್ದಾಕ್ಷಿಣ್ಯವಾಗಿ ಒಡೆದು ಹಾಕ್ತಾರೆ. ಅಭಿವೃದ್ಧಿ ವಿಷಯದಲ್ಲಿ ಅಡ್ಡ ಬರಬೇಡಿ ಎಂದು ಮೊನ್ನೆಯೇ ನನಗೆ ಹೇಳಿದ್ದಾರೆ. ಅತಿಕ್ರಮಣ ವಿಷಯದಲ್ಲಿ ನಾನು ಅಡ್ಡಬರೊಲ್ಲ. ನಿಯಮ ಪಾಲಿಸಿದವರಿಗೆ ಅಧಿಕಾರಿಗಳು ಸಹಕರಿಸಬೇಕು. ನಿಯಮಪಾಲಿಸದವರಿಗೆ ನಿಯಮಗಳ ಬಗ್ಗೆ ತಿಳಿ ಹೇಳಬೇಕು. ಪಟ್ಟಣದಲ್ಲಿರುವ ಎಲ್ಲಲೇಔಟ್‌ಗಳ ಮಾಹಿತಿ ಕೊಡುವಂತೆ ಟೌನ್‌ಪ್ಲಾನಿಂಗ್‌ನವರಿಗೆ ಸೂಚಿಸಿದ್ದೇನೆ ಎಂದು ಶಾಸಕರು ಹೇಳಿದರು.

ಟಾಪ್ ನ್ಯೂಸ್

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

22-

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

Government will not turn a blind eye if public is inconvenienced: CM Siddaramaiah

Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.