ರೈತರಿಗೆ ಯೂರಿಯಾ ಸಮರ್ಪಕವಾಗಿ ವಿತರಣೆಯಾಗಲಿ: ಪ್ರಭಾಕರ


Team Udayavani, Sep 15, 2020, 4:56 PM IST

ರೈತರಿಗೆ ಯೂರಿಯಾ ಸಮರ್ಪಕವಾಗಿ ವಿತರಣೆಯಾಗಲಿ: ಪ್ರಭಾಕರ

ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ಯೂರಿಯಾ ಗೊಬ್ಬರ ಸಮಸ್ಯೆ ಹೆಚ್ಚಾಗಿದ್ದು ರೈತರು ಗೊಬ್ಬರಕ್ಕಾಗಿ ಪರದಾಡುವಂತಾಗಿದೆ ಎಂದು ತಾಪಂ.ಸದಸ್ಯ ಪ್ರಭಾಕರ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಯೂರಿಯ ಗೊಬ್ಬರ ಸಮರ್ಪಕವಾಗಿ ರೈತರಿಗೆ ಲಭ್ಯವಾಗುವಂತೆ ಸೂಕ್ತ ಕ್ರಮವಹಿಸಿ. ತಾಡಪಲ್ಲುಗಳಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಲಿ ಎಂದುತಿಳಿಸಿದರು. ತಾಡಪಲ್ಲು ಆಯ್ಕೆಗೆ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವಾಗ ಜನಪ್ರತಿನಿಧಿ  ಗಳನ್ನು ಕರೆದು ಆಯ್ಕೆ ಮಾಡಿ ಎಂದು ತಾಪಂ ಸದಸ್ಯ ಪಾಂಡುನಾಯ್ಕ ಆಗ್ರಹಿಸಿದರು. ಕೃಷಿ ಸಹಾಯಕ ನಿರ್ದೇಶಕ ಜೀವನ್‌ಸಾಬ್‌ ಪ್ರತಿಕ್ರಿಯಿಸಿ, ಯೂರಿಯಾಸಮರ್ಪಕ ವಿತರಣೆಗೆ ಈಗಾಗಲೇ ಕ್ರಮವಹಿಸಲಾಗಿದೆ. ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ತಾಪಂ ಸಿಬ್ಬಂದಿಗಳು ಆಫೀಸಲ್ಲಿ ಇರುವುದಿಲ್ಲ, ಯಾರ ಬಳಿ ಕೆಲಸ ಮಾಡಿಸಿಕೊಳ್ಳಬೇಕು ಎಂದು ತಾಪಂ ಸದಸ್ಯ ಮಾಳಿಗಿ ಗಿರೀಶ್‌ ಬೇಸರದಿಂದ ಹೇಳಿದರು. ತಾಪಂಇಒ ಸಿದ್ದೇಶ್‌ ಪ್ರತಿಕ್ರಿಯಿಸಿ ಕೆಲಸದ ಸಮಯದಲ್ಲಿ ಹಾಜರಿರದ ಸಿಬ್ಬಂದಿಗೆ ನೋಟಿಸ್‌ ನೀಡಲಾಗುವುದುಎಂದು ತಿಳಿಸಿದರು. ತಾಲೂಕು ಕಚೇರಿಯಲ್ಲಿ ಸರ್ವೇಇಲಾಖೆ ಅಧಿ ಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ತಾಪಂ ಸದಸ್ಯ ಅನಿಲ್‌ ಜಾಣ ತಹಶೀಲ್ದಾರ್‌ರಿಗೆ ತಿಳಿಸಿದರು. ಸರ್ವೇಯವರು ಫಿಲ್ಡ್‌ ವರ್ಕ್  ಗೆ ಹೋಗಿರುತ್ತಾರೆ, ನಿಮ್ಮ ಕೆಲಸ ಹೇಳಿ ಕೂಡಲೇ ಬಗೆಹರಿಸಲಾಗುವುದು ಎಂದು ತಹಶೀಲ್ದಾರ್‌ ಶಿವಕುಮಾರಗೌಡ ತಿಳಿಸಿದರು. ಓಬಳಾಪುರ ಗ್ರಾಮದ ಬಳಿ ಇರುವ ಕೋಳಿಫಾರಂನ ತ್ಯಾಜ್ಯ ವಿಲೇವಾರಿ ಮಾಡಿಲ್ಲ ಎಂದು ಸದಸ್ಯ ಅನಿಲ್‌ ಜಾಣ ಆರೋಪಿಸಿ, ಕೂಡಲೇ ಮಾಲಿಕರ ವಿರುದ್ಧ ಕ್ರಮಕೈಗೊಳ್ಳಿ ಎಂದು ದೂರಿದರು.

ಧ್ವನಿಗೂಡಿಸಿದ ತಾಲೂಕು ವೈದ್ಯಾಧಿಕಾರಿ ಡಾ| ಶಿವರಾಜ್‌ ಲಾರ್ವ ಸಿಂಪಡಣೆ ಮಾಡಲು ಹೋದಾಗ ಯಾರು ಬರದೆ ಫಾರಂನ ಬೀಗ ತೆಗೆಯದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತಿಳಿಸಿದರು. ಇವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಎಂದು ಸದಸ್ಯ ಅನಿಲ್‌ ಇಒರನ್ನು ಒತ್ತಾಯಿಸಿದರು. ಅರಣ್ಯ ಇಲಾಖೆವಲಯದ ಕಚೇರಿಯನ್ನು ತಾಲೂಕಿನಲ್ಲಿ ಸ್ಥಾಪಿಸಲು ಕ್ರಮಕೈಗೊಳ್ಳಿ ಎಂದು ಅರಣ್ಯ ಇಲಾಖೆಯ ಕರಿಬಸಪ್ಪ ತಾಪಂ ಸದಸ್ಯರನ್ನು ಒತ್ತಾಯಿಸಿದರು.

ತಾಲೂಕಿನ ತಂಬ್ರಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಉನ್ನತೀಕರಿಸಿದ ಪ್ರೌಢಶಾಲೆಯನ್ನು ಪ್ರಾರಂಭಿಸಿ ಎಂದು ಸದಸ್ಯ ಪಿ.ಕೊಟ್ರೇಶ ಒತ್ತಾಯಿಸಿದಾಗ ಬಿಇಒ ಶೇಖರಪ್ಪಮೂರು ಕಿಲೋಮೀಟರ್‌ ಒಳಗಡೆ ಪ್ರೌಢಶಾಲೆಇರುವುದರಿಂದ ಪ್ರೌಢಶಾಲೆ ಪ್ರಾರಂಭಿಸುವುದು ಕಷ್ಟಸಾಧ್ಯ ಎಂದು ಪ್ರತಿಕ್ರಿಯಿಸಿದರು. ತಾಲೂಕಿನಲ್ಲಿ ವಿದ್ಯಾಗಮ ಯಶಸ್ವಿಯಾಗಿದ್ದು ಶಿಕ್ಷಕರು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಸಮುದಾಯ ಭವನ,ದೇವಸ್ಥಾನ ಸೇರಿ ಒಟ್ಟು 750ಕಡೆ ವಿದ್ಯಾಗಮ ನಡೆಯುತ್ತಿದ್ದು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬೋರಯ್ಯ ತಿಳಿಸಿದರು.

ಪ್ರತಿ ಗ್ರಾ.ಪಂ.ನಲ್ಲಿ ಯಾವುದಾದರೂ ಹಣಕಾಸು ಯೋಜನೆಯಲ್ಲಿ ಪ್ರತಿ ಶಾಲೆಗೆ ಒಂದು ಟಿವಿಯನ್ನು ಕೊಡಿಸಿ ಮಕ್ಕಳ ಬೋರಯ್ಯ ಕೇಳಿದಾಗ, ಸದಸ್ಯ ಪಿ. ಕೊಟ್ರೇಶ ತಾ.ಪಂ.ಸದಸ್ಯರೆಲ್ಲ 14ಜನ ಆಯಾ ಪಂಚಾಯ್ತಿ ವ್ಯಾಪ್ತಿಯ ಒಂದು ಶಾಲೆಗೆ ಸ್ವಂತ ಅನುದಾನದಲ್ಲಿ ಟಿವಿಯನ್ನು ಕೊಡಿಸುತ್ತೇವೆ ಎಂದು ತಿಳಿಸಿದರು. ತಾಪಂ ಇಒ ಪ್ರತಿಕ್ರಿಯಿಸಿ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಕೊಡಿಸುವುದು ಕಷ್ಟ, ಪಂಚಾಯ್ತಿಯ ಒಂದು ಶಾಲೆಗೆ ಕೊಡಿಸಲು ಪಿಡಿಒಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು. ಶಿಕ್ಷಣದ ಕಾರ್ಯಕ್ರಮಗಳಿಗೆ ತಾಪಂ ಉಪಾಧ್ಯಕ್ಷರನ್ನು ಕರೆಯಿರಿ ಎಂದು ತಾಪಂ ಅಧ್ಯಕ್ಷೆ ನಾಗಮ್ಮ ಒತ್ತಾಯಿಸಿದರು.

ತಾಲೂಕಿನಲ್ಲಿ ಈರುಳ್ಳಿ ಬೆಳೆ ಸಂಪೂರ್ಣ ಕೊಳೆ ರೋಗದಿಂದ ನಷ್ಟಕ್ಕೆ ಒಳಗಾಗಿದ್ದು ಪರಿಹಾರಕ್ಕೆಕ್ರಮಕೈಗೊಳ್ಳಿ ಎಂದು ಸದಸ್ಯ ಪಾಂಡುನಾಯ್ಕ ಒತ್ತಾಯಿಸಿದರು. ನಷ್ಟ ಪರಿಹಾರದಲ್ಲಿ ತಾರತಮ್ಯಬೇಡ ನಷ್ಟವಾದ ಫಲಾನುಭವಿಗೆ ಪರಿಹಾರ ದೊರಕಲಿ ಎಂದರು. ತೋಟಗಾರಿಕೆ ಸಹಾಯಕ ನಿರ್ದೇಶಕಡಾ| ಪರಮೇಶ್ವರಪ್ಪ ಪ್ರತಿಕ್ರಿಯಿಸಿ ಬೆಳೆನಷ್ಟದ ಅರ್ಜಿ ಸಲ್ಲಿಸಿದವರಿಗೆ ಪರಿಹಾರ ದೊರಕುತ್ತದೆ ಯಾವುದೇತಾರತಮ್ಯ ಮಾಡುವುದಿಲ್ಲ. ಬೆಳೆಸಮೀಕ್ಷೆ ಅಪ್‌ನಲ್ಲಿ ಬೆಳೆ ದಾಖಲಾಗಿರುವುದು ಪರಿಹಾರ ವಿತರಣೆಗೆ ಸುಲಭವಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಬಿಕ್ಯಾ ಮುನ್ನಿಬಾಯಿ, ಸದಸ್ಯರಾದ ತಿಪ್ಪೇರುದ್ರಮುನಿ, ಚೌಟಿ ಗೀತಾ, ರಮೀಜಾ, ಶ್ಯಾಮಲಾ, ಜೆಸ್ಕಾಂ ಎಇಇ ತೇಜನಾಯ್ಕ, ಪಶು ಸಹಾಯಕ ನಿರ್ದೇಶಕ ಡಾ| ದೇವಗಿರಿ, ಕುಡಿಯುವ ನೀರು ಸರಬರಾಜು ಇಲಾಖೆ ಎಇಇಸುರೇಶ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯೋಜನಾಧಿಕಾರಿ ಉಮೇಶಗೌಡ, ವ್ಯವಸ್ಥಾಪಕ ಮಲ್ಲನಗೌಡ, ಕುಮಾರಸ್ವಾಮಿ ನಿರ್ವಹಿಸಿದರು.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Valmiki Jayanti: ಕಾರ್ಯಕ್ರಮ ವೇದಿಕೆಯಲ್ಲಿ ಅತ್ತ ಶಾಸಕ ನಾಗೇಂದ್ರ

Valmiki Jayanti: ಕಾರ್ಯಕ್ರಮ ವೇದಿಕೆಯಲ್ಲಿ ಅತ್ತ ಶಾಸಕ ನಾಗೇಂದ್ರ

B Nagendra reacts to Janardhana Reddy’s statement

Bellary: ರೆಡ್ಡಿ ಸಂಡೂರಲ್ಲಿ ಅರಮನೆ ಕಟ್ಟಿದರೂ ಗೆಲುವು ಕಾಂಗ್ರೆಸ್ ಪಕ್ಷದ್ದೇ: ನಾಗೇಂದ್ರ

Bellary; B Nagendra dance at Valmiki Jayanti event

Bellary; ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ನಾಗೇಂದ್ರ ಭರ್ಜರಿ ಡ್ಯಾನ್ಸ್

Bellary: ವಾಲ್ಮೀಕಿ ನಿಗಮದ ಹಣವನ್ನು ಕಾಂಗ್ರೆಸ್ ಸರ್ಕಾರ ದೋಚಿದೆ: ಜನಾರ್ದನ ರೆಡ್ಡಿ

Bellary: ವಾಲ್ಮೀಕಿ ನಿಗಮದ ಹಣವನ್ನು ಕಾಂಗ್ರೆಸ್ ಸರ್ಕಾರ ದೋಚಿದೆ: ಜನಾರ್ದನ ರೆಡ್ಡಿ

Janardhana Reddy: ಮುಡಾ ದಾಖಲೆ ಬಹಿರಂಗ ಮಾಡಿದ್ದು ಡಿಕೆಶಿ

Janardhana Reddy: ಮುಡಾ ದಾಖಲೆ ಬಹಿರಂಗ ಮಾಡಿದ್ದು ಡಿಕೆಶಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.