ರೈತರಿಗೆ ಅಗತ್ಯ ಯಂತ್ರ ನೀಡಿ: ರಾಜೇಗೌಡ


Team Udayavani, Sep 15, 2020, 5:02 PM IST

ರೈತರಿಗೆ ಅಗತ್ಯ ಯಂತ್ರ ನೀಡಿ: ರಾಜೇಗೌಡ

ಎನ್‌. ಆರ್‌. ಪುರ: ಕೃಷಿ ಯಂತ್ರಧಾರೆ ಬಾಡಿಗೆ ಆಧಾರಿತ ಸೇವಾ ಕೇಂದ್ರದಲ್ಲಿ ರೈತರಿಗೆ ಅವಶ್ಯಕವಾಗಿರುವ ಯಂತ್ರಗಳನ್ನು ಬಾಡಿಗೆಗೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.

ಇಲ್ಲಿನ ಕೃಷಿ ಇಲಾಖೆಯಲ್ಲಿ ಸೋಮವಾರ ನಡೆದ ಕೃಷಿ ಯಂತ್ರಧಾರೆ ಬಾಡಿಗೆ ಆಧಾರಿತ ಸೇವಾ ಕೇಂದ್ರ ಆರಂಭಿಸುವ ಬಗ್ಗೆ ನಡೆದ ಪೂರ್ವಭಾವಿಸಭೆಯಲ್ಲಿ ಅವರು ಮಾತನಾಡಿದರು.ಪ್ರತಿ ದಿನ ಬಾಡಿಗೆ ನೀಡುವಯಂತ್ರಗಳ ಬಗ್ಗೆ ದಾಖಲೆ ನಿರ್ವಹಿಸಬೇಕು. ಕೃಷಿ ಇಲಾಖೆಯವರು, ಕೃಷಿಕ ಸಮಾಜದವರು ಯಂತ್ರಗಳನ್ನುಬಾಡಿಗೆ ಪಡೆದವರು ಸಮರ್ಪಕವಾಗಿ ಬಳಸುತ್ತಿರುವ ಬಗ್ಗೆ ಸ್ಥಳ ಪರಿಶೀಲನೆನಡೆಸಬೇಕು. ಅಡಕೆ ಸಂಸ್ಕರಣೆಗೆ ಸಹಾಯಕವಾಗುವಂತಹ ಎಲ್ಲಾರೀತಿಯ ಯಂತ್ರಗಳು ರೈತರಿಗೆ ಬಾಡಿಗೆಗೆ ದೊರೆಯುವಂತೆ ನೋಡಿಕೊಳ್ಳಬೇಕು.ಬಾಡಿಗೆಯನ್ನು ಸ್ಥಳೀಯವಾಗಿಪಡೆಯುವ ಬಾಡಿಗೆ ದರಕ್ಕಿಂತ ಕಡಿಮೆ ಬಾಡಿಗೆ ಪಡೆಯಬೇಕೆಂದು ಸಲಹೆ ನೀಡಿದರು.

ತಾಲೂಕು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ಎಲ್‌. ಶೆಟ್ಟಿ ಮಾತನಾಡಿ, ಬಾಡಿಗೆ ಕೇಂದ್ರದಲ್ಲಿ ಐಎಸ್‌ ಐ ಮುದ್ರೆ ಇರುವ ಯಂತ್ರಗಳು ಖರೀದಿಸಲು ಸೂಚಿಸಬೇಕು. ರೈತರಿಗೆ ರಿಯಾಯಿತಿ ದರದಲ್ಲಿ ಬಾಡಿಗೆದೊರೆಯುವಂತೆ ಮಾಡಬೇಕು.ಪಟ್ಟಣದ ಹೃದಯ ಭಾಗದಲ್ಲಿ ಸೇವಾ ಕೇಂದ್ರ ಆರಂಭಿಸಬೇಕೆಂದರು.

ಸಹಾಯಕ ಕೃಷಿ ಅಧಿಕಾರಿ ಸುಭಾಷ್‌ ಮಾತನಾಡಿ, ಜಿಲ್ಲೆಗೆ 2019- 20ನೇ ಸಾಲಿನಲ್ಲಿ 16 ಕೃಷಿ ಯಂತ್ರಧಾರೆ ಸೇವಾ ಕೇಂದ್ರ ಮಂಜೂರಾಗಿದ್ದು ಬಾಳೆಹೊನ್ನೂರು ಭಾಗದಲ್ಲಿ ಈ ಹಿಂದೆಆರಂಭಿಸಲಾಗಿದೆ. ಪ್ರಸ್ತುತ ಕಸಬಾ ಹೋಬಳಿ ವ್ಯಾಪ್ತಿಗೆ ಮಂಜೂರಾಗಿದೆ. ಸರ್ಕಾರ ಶೇಕಡ 75 ಸಹಾಯಧನ ನೀಡಲಿದೆ. ಉಳಿದ ಶೇಕಡ 25ರಷ್ಟು ಅನುದಾನ ಸಂಬಂಧಿ ಸಿದ ಏಜೆಸ್ಸಿಯವರು ಭರಿಸಬೇಕು ಎಂದರು.

ಕೃಷಿಕ ಸಮಾಜದ ಅಧ್ಯಕ್ಷ ವಿ. ನಿಲೇಶ್‌ ಮಾತನಾಡಿ, ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಯಂತ್ರಧಾರೆ ಸೇವಾ ಕೇಂದ್ರ ಆರಂಭಿಸುವ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಪ್ರಸ್ತುತ ಮಂಜೂರಾಗಿದ್ದುಇದನ್ನು ಪಟ್ಟಣದ ವ್ಯಾಪ್ತಿಯಲ್ಲಿ ಆರಂಭಿಸಬೇಕೆಂದರು. ಸಮೃದ್ಧಿ ಕೃಷಿ ಸ್ವಸಹಾಯ ಸಂಘದರಾಜೇಂದ್ರಕುಮಾರ್‌ ಮಾತನಾಡಿ, ತಾಲೂಕು ಕೇಂದ್ರದಲ್ಲಿ ಕೃಷಿ ಇಲಾಖೆಗೆ ಹೊಂದಿಕೊಂಡತೆ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪಿಸಲು ಕ್ರಮಕೈಗೊಳ್ಳಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ತಾಪಂ ಅಧ್ಯಕ್ಷೆ ಪ್ರೇಮಾ, ಜಿಲ್ಲಾ ಕೃಷಿಕ ಸಮಾಜದ ನಿರ್ದೇಶಕ ಜಾನಕೀರಾಂ.ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಸುಬ್ಬಣ್ಣ. ನಿರ್ದೇಶಕ ಬಸವರಾಜಪ್ಪ, ರೈತಮುಖಂಡ ವಿನಾಯಕ್‌ ಮಾಳೂರು ದಿಣ್ಣೆ , ಗಣೇಶ್‌ ಇದ್ದರು

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkamagaluru: ಸಾವಿನಲ್ಲೂ ಸಾರ್ಥಕತೆ; ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Chikkamagaluru: ಸಾವಿನಲ್ಲೂ ಸಾರ್ಥಕತೆ… ರಸ್ತೆ ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

3-chikkamagaluru

Chikkamagaluru: ಟಾಟಾ ಏಸ್ ಆಟೋ ಪಲ್ಟಿ ; ಇಬ್ಬರು ಸ್ಥಳದಲ್ಲೇ ಸಾವು

4-chikkamagaluru

Chikkamagaluru: ಸ್ಕಿಡ್ ಆಗಿ 20 ಅಡಿ ಎತ್ತರಿಂದ ಕೆಳಗೆ ಬಿದ್ದ ಗೂಡ್ಸ್ ವಾಹನ

Kottigehara: ಕಸ ವಿಲೇವಾರಿ ವಾಹನ ಬಂದಿಲ್ಲವೆಂದು ಪಂಚಾಯತ್ ಬಾಗಿಲಿಗೆ ಕಸ ಸುರಿದ ಭೂಪ

Kottigehara: ಕಸ ವಿಲೇವಾರಿ ವಾಹನ ಬಂದಿಲ್ಲವೆಂದು ಪಂಚಾಯತ್ ಬಾಗಿಲಿಗೆ ಕಸ ಸುರಿದ ಭೂಪ

ಹದಗೆಟ್ಟ ಕೊಟ್ಟಿಗೆಹಾರ-ಗಂಗಾಮುಲ ರಸ್ತೆ, ಗ್ರಾಮಸ್ಥರಿಂದ ಪ್ರತಿಭಟನೆಗೆ ನಿರ್ಧಾರ

ಹದಗೆಟ್ಟ ಕೊಟ್ಟಿಗೆಹಾರ-ಗಂಗಾಮುಲ ರಸ್ತೆ, ಗ್ರಾಮಸ್ಥರಿಂದ ಪ್ರತಿಭಟನೆಗೆ ನಿರ್ಧಾರ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.