ಕುಂಭಕೋಣಂಗೆ ರೈಲಿನಲ್ಲಿ ಅಡಿಕೆ
Team Udayavani, Sep 16, 2020, 6:36 AM IST
ಮಂಗಳೂರು: ನಗರದ ಸೆಂಟ್ರಲ್ ನಿಲ್ದಾಣದಿಂದ ರೈಲಿನ ಮೂಲಕ ಕುಂಭಕೋಣಂಗೆ 23 ಟನ್ ಅಡಿಕೆಯನ್ನು ಮಂಗಳವಾರ ಕಳುಹಿಸಲಾಯಿತು. ಲಾಕ್‌ಡೌನ್ ಆದ ಬಳಿಕ ಕಳೆದ ಆರು ತಿಂಗಳುಗಳಲ್ಲಿ ರೈಲಿನ ಮೂಲಕ ಕುಂಭಕೋಣಂಗೆ ಎರಡನೇ ಬಾರಿಗೆ ಅಡಿಕೆ ಸಾಗಿಸಲಾಗುತ್ತಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸೆಂಟ್ರಲ್ ನಿಲ್ದಾಣದಿಂದ ವಿಶೇಷ ರೈಲು ಹೊರತು ಇತರ ರೈಲುಗಳ ಸಂಚಾರ ಇಲ್ಲದಿರುವ ಹಿನ್ನೆಲೆಯಲ್ಲಿ ಮಂಗಳೂರು ಜಂಕ್ಷನ್‌ಗೆ ಬೋಗಿಯನ್ನು ತಂದು ಅಲ್ಲಿಂದ ಸಂಜೆ ಕುಂಭಕೋಣಂಗೆ ಕಳುಹಿಸಲಾಯಿತು. ಶೋರ್ನೂರು, ಈರೋಡ್ ಮೂಲಕ ಈ ಅಡಿಕೆ ಕುಂಭಕೋಣಂಗೆ ತಲುಪಲಿದೆ. ಮೊದಲಿಗೆ ಎ. 28ರಂದು ಕುಂಭಕೋಣಂಗೆ ಅಡಿಕೆಯನ್ನು ರೈಲಿನಲ್ಲಿ ಸಾಗಿಸಲಾಗಿತ್ತು.
ಕೊಂಕಣ ರೈಲ್ವೇಯಲ್ಲೂ ಸಿದ್ಧತೆ
ಕೊಂಕಣ ರೈಲ್ವೇ ಮೂಲಕ ಗುಜರಾತ್ ಸೇರಿದಂತೆ ವಿವಿಧೆಡೆ ಅಡಿಕೆಯನ್ನು ಸಾಗಿಸುವ ಕುರಿತ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಕುರಿತು ಇತ್ತೀಚೆಗೆ ಪುತ್ತೂರು ಎಪಿಎಂಸಿಯಲ್ಲಿ ಶಾಸಕರು, ವರ್ತಕರು ಹಾಗೂ ಜನಪ್ರತಿನಿಧಿಗಳು ಹಾಗೂ ಕೊಂಕಣ ರೈಲ್ವೇಯ ಅಧಿಕಾರಿಗಳನ್ನು ಒಳಗೊಂಡ ಸಭೆ ಜರಗಿದೆ. ರೈಲಿನಲ್ಲಿ ಸಾಗಿಸಿದರೆ 3 ದಿನಗಳೊಳಗೆ ಗುಜರಾತ್ ತಲುಪಲು ಸಾಧ್ಯ. ಪ್ರಸ್ತುತ ಗೋವಾ ಬಳಿ ಸುರಂಗ ಮಾರ್ಗ ದುರಸ್ತಿ ಕಾರ್ಯ ನಡೆಯುತ್ತಿದ್ದು ಮುಕ್ತಾಯಗೊಂಡ ಬಳಿಕ ರೈಲಿನಲ್ಲಿ ಅಡಿಕೆ ಸಾಗಾಟ ಆರಂಭಗೊಳ್ಳುವ ನಿರೀಕ್ಷೆ ಇದೆ.
ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಗೂಡ್ಸ್ ರೈಲು ಬೋಗಿಗೆ ಅಡಿಕೆ ಚೀಲಗಳ ಲೋಡಿಂಗ್ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
MUST WATCH
ಹೊಸ ಸೇರ್ಪಡೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.