ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳ ಆರಾಧನೆ
Team Udayavani, Sep 16, 2020, 7:04 AM IST
ಎಡನೀರು ಮಠಾಧೀಶರಾಗಿದ್ದ ಶ್ರೀ ಕೇಶವಾನಂದ ಭಾರತೀ ಶ್ರೀಗಳ ಪ್ರಥಮ ಆರಾಧನೆಯಂಗವಾಗಿ ಮಂಗಳವಾರ ವೈದಿಕ ವಿಧಿಗಳು ನಡೆದವು.
ಕಾಸರಗೋಡು: ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಗಳ ಪ್ರಥಮ ಆರಾಧನೆ ಮಂಗಳವಾರ ಮಠದ ಆವರಣದಲ್ಲಿ ನಡೆಯಿತು. ಮಠದ ಮುಂದಿನ ಪೀಠಾಧಿಪತಿ ಯಾಗಲಿರುವ ಸಚ್ಚಿದಾನಂದ ಭಾರತೀ ಶ್ರೀಗಳು ನೇತೃತ್ವ ವಹಿಸಿದ್ದರು. ಬೆಳಗ್ಗೆ ಸಂಕರ್ಷಣಾದಿ ಹವನ, ಪುರುಷ ಸೂಕ್ತ ಹವನ, ರುದ್ರ ಹವನ ಸಹಿತ ವಿಧಿವಿಧಾನಗಳು ನಡೆದವು. ಅಪರಾಹ್ನ ಶ್ರೀಗಳ ಸ್ಮರಣಾರ್ಥ ಯಕ್ಷ ಗಾನಾರ್ಚನೆ ಸಮರ್ಪಣೆಗೊಂಡಿತು.
ಬುಧವಾರ ಬೆಳಗ್ಗೆ ಆರಾಧನೆ, ಯತಿಪೂಜೆ, ಮಂತ್ರಾಕ್ಷತೆಗಳು ನಡೆಯ ಲಿವೆ. ಅಪರಾಹ್ನ ಶ್ರೀಗಳ ಸ್ಮರಣಾರ್ಥ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸೋಮವಾರ ಚತುರ್ವೇದ, ಭಾಗವತ, ಬ್ರಹ್ಮಸೂತ್ರಗಳ ಪಾರಾಯಣ ನೆರವೇರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
Champions Trophy: ನ್ಯೂಜಿಲ್ಯಾಂಡ್ ತಂಡ ಪ್ರಕಟ; ತಂಡಕ್ಕೆ ಮರಳಿದ ಮೂವರು ಘಟಾನುಘಟಿಗಳು
Bengaluru Crime: ಪ್ರಿಯಕರ ಆತ್ಮಹತ್ಯೆ: ಪ್ರೇಯಸಿಯೂ ನೇಣಿಗೆ ಶರಣು
Shivamogga: ಖ್ಯಾತ ಫೋಟೋ ಜರ್ನಲಿಸ್ಟ್ ಗೆ ಹೃದಯಾಘಾತ, ನಿಧನ
ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.