ಕುಕ್ಕುಂದೂರು ಮುಕ್ತಿಧಾಮಕ್ಕೆ ಕಾಯಕಲ್ಪದ ನಿರೀಕ್ಷೆ

ಮುಕ್ತಿಧಾಮ ಅಭಿವೃದ್ಧಿಗೆ ಸ್ಥಳೀಯರ ನಿರ್ಧಾರ, ಸೇವಾ ಸಮಿತಿ ಅಸ್ತಿತ್ವಕ್ಕೆ

Team Udayavani, Sep 16, 2020, 7:37 AM IST

Udayavani Kannada Newspaper

ಕಾರ್ಕಳ: ತಾಲೂಕಿನ ಕುಕ್ಕುಂದೂರು ಗ್ರಾಮದ ಜಯಂತಿ ನಗರದಲ್ಲಿ ನಿರ್ವಹಣೆಯಿಲ್ಲದೆ ಸೊರಗಿದ್ದ ಸಾರ್ವಜನಿಕ ಹಿಂದೂ ರುದ್ರಭೂಮಿಗೆ ಸ್ಥಳೀಯ ನಾಗರಿಕರು ಮುಕ್ತಿಧಾಮ ಅಭಿವೃದ್ಧಿ ಸೇವಾ ಸಮಿತಿ ರಚಿಸಿ, ಕಾಯಕಲ್ಪ ನೀಡುವ ಕಾರ್ಯಕ್ಕೆ ಪಣತೊಟ್ಟಿದ್ದಾರೆ.

ಶ್ಮಶಾನ ಸುತ್ತಮುತ್ತಲ ಹತ್ತೂರಿನ ಗ್ರಾಮಗಳ ಜನತೆಗೆ ಶವ ಸಂಸ್ಕಾರಕ್ಕೆ ಬಹಳ ಉಪಯುಕ್ತವಾಗಿತ್ತು. ಅನಂತರದಲ್ಲಿ ನಿರ್ವಹಣೆಯಿಲ್ಲದೆ ಸೊರಗಿತ್ತು. ಪಾಳು ಬಿದ್ದ ಶ್ಮಶಾನವನ್ನು ಸುಸ್ಥಿತಿಗೆ ತರಲು ಕುಕ್ಕುಂದೂರು ಸ್ಥಳೀಯಾಡಳಿತ ಅನು ದಾನ ಮೀಸಲಿರಿಸಿದ್ದರೂ, ಅನುದಾನ ಸಾಕಾಗದೆ ಶೆಡ್‌ ಸಹಿತ ಕೆಲವು ಕೆಲಸಗಳು ಮಾತ್ರ ಆಗಿದ್ದವು. ಕಳೆದ ಕೆಲವು ಸಮಯಗಳಿಂದ ಶ್ಮಶಾನ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರಲಿಲ್ಲ. ಮೂಲ ಸೌಕರ್ಯವಿಲ್ಲದೆ. ಶವವನ್ನು ಶ್ಮಶಾನ ತನಕ ತಂದು ವಾಪಸ್‌ ಕೊಂಡು ಹೋಗುವಂತಹ ಪ್ರಸಂಗ ಕೂಡ ಎದುರಾಗುತ್ತಿತ್ತು. ಶ್ಮಶಾನ ಕೊರತೆ ವಿಚಾರವಾಗಿ ಗ್ರಾ.ಪಂ. ಸಭೆ, ಸಾಮಾನ್ಯ ಸಭೆಗಳಲ್ಲಿ ಈ ಕುರಿತು ಪ್ರಶ್ನೆ, ಚರ್ಚೆಗಳು ನಡೆಯುತ್ತಿದ್ದರೂ ಅನುದಾನ ಹರಿದು ಬಾರದೇ ಇರುವುದರಿಂದ ಚರ್ಚೆ, ಮಾತುಕತೆಗೆ ಸೀಮಿತವಾಗಿತ್ತು.

ಇದೀಗ ಸ್ಥಳೀಯರು ಸುಸಜ್ಜಿತ ರುದ್ರಭೂಮಿ ನಿರ್ಮಿಸಲು ತೀರ್ಮಾನಿ ಸಿದ್ದು, ಅದಕ್ಕೆಂದೇ ಮುಕ್ತಿಧಾಮ ಅಭಿವೃದ್ಧಿ ಸೇವಾ ಸಮಿತಿ ರಚಿಸಿದ್ದಾರೆ. ಸಮಿತಿ ಅಧ್ಯಕ್ಷ ರಾಜೇಶ್‌ ರಾವ್‌ ನೇತೃತ್ವದಲ್ಲಿ ಕಾರ್ಯದರ್ಶಿ ಪ್ರತಾಪ್‌ ಮಾಬಿಯಾನ್‌, ಕೋಶಾಧಿ ಕಾರಿ ಆನಂದ ಬಂಡಿಮಠ, ಕಾನೂನು ಸಲಹೆಗಾರರಾಗಿ ಹಿರಿಯ ನ್ಯಾಯವಾದಿ ಸುನಿಲ್‌ಕುಮಾರ್‌ ಶೆಟ್ಟಿ ನೇತೃತ್ವದ 35 ಮಂದಿ ಸದಸ್ಯರನ್ನೊಳಗೊಂಡ ಸಮಿತಿ ಕಾರ್ಯಾರಂಭಿಸಿದೆ. ಸುಮಾರು 15 ಲಕ್ಷ ರೂ. ವೆಚ್ಚದ ಗುರಿ ಇರಿಸಿ ಶ್ಮಶಾನ ಅಭಿವೃದ್ಧಿಪಡಿಸಲು ನಿರ್ಧರಿಸಿ ದ್ದಾರೆ. ದಾನಿಗಳ, ಇಲಾಖೆಗಳ, ಜನಪ್ರತಿನಿಧಿಗಳ ನೆರವಿನ ನಿರೀಕ್ಷೆಯನ್ನು ಇರಿಸಿಕೊಂಡಿದ್ದಾರೆ.

ಸಮಿತಿ ರಚನೆ: ಕೆಲಸಕ್ಕೆ ವೇಗ
ಸೆ. 21ರಿಂದ ಸಾರ್ವಜನಿಕ ಬಳಕೆಗೆ ಮುಕ್ತವಾಗಿಸುವ ಗುರಿ ಇಟ್ಟುಕೊಂಡು ರುದ್ರಭೂಮಿಯನ್ನು ಸುಸಜ್ಜಿತ ಗೊಳಿಸುವ ಕಾರ್ಯ ನಡೆಯುತ್ತಿದೆ. ಸುಮಾರು 50 ಸಾವಿರ ರೂ. ವೆಚ್ಚದ ಕೆಲಸಗಳು ಈಗಾಗಲೇ ನಡೆದಿವೆ. ಇನ್ನು ಮೇಲ್ಛಾವಣಿ, ಇಂಟರ್‌ಲಾಕ್‌, ಉಳಿದ ಭಾಗಕ್ಕೆ ಕಾಂಪೌಂಡ್‌, ಗಾರ್ಡನ್‌, ನೀರು ಸಹಿತ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸುತ್ತಿದ್ದಾರೆ.

ಸುದಿನ ವರದಿಯಿಂದ ಎಚ್ಚರ
ತಾಲೂಕಿನ ಅತೀ ದೊಡ್ಡ ಗ್ರಾ.ಪಂ. ಹಾಗೂ ಹೆಚ್ಚು ಸದಸ್ಯ ಸ್ಥಾನಗಳನ್ನು ಹೊಂದಿರುವ ನಗರಕ್ಕೆ ಹತ್ತಿರವಾಗಿರುವ ಕುಕ್ಕುಂದೂರು ಗ್ರಾಮ ಪಂಚಾಯತ್‌ವ್ಯಾಪ್ತಿಯಲ್ಲಿ ಶವಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆಯಿಲ್ಲದೆ ಶ್ಮಶಾನ ಮುಚ್ಚಿರುವ ಬಗ್ಗೆ ಇತ್ತೀಚೆಗೆ ಉದಯವಾಣಿ ಸುದಿನದಲ್ಲಿ ವರದಿ ಪ್ರಕಟಗೊಂಡಿತ್ತು. ಬಳಿಕ ಈ ವಿಚಾರ ತಾ.ಪಂ. ಸಾಮಾನ್ಯ ಸಭೆಯಲ್ಲಿ ತಾ.ಪಂ. ಸದಸ್ಯ ಅಶೋಕ್‌ ಶೆಟ್ಟಿ ಪ್ರಸ್ತಾವಿಸಿದ್ದರು.

ಸ್ವಚ್ಛತೆಗೆ ಆದ್ಯತೆ
ಕುಕ್ಕುಂದೂರಿನಲ್ಲಿ ಶ್ಮಶಾನವನ್ನು ಸುಸಜ್ಜಿತಗೊಳಿಸುವ ಬಗ್ಗೆ ಚರ್ಚೆ ನಡೆಸಿ, ಸಮಿತಿ ರಚಿಸಿಕೊಂಡಿದ್ದೇವೆ. ದಾನಿಗಳು, ಇಲಾಖೆ, ಜನಪ್ರತಿನಿಧಿಗಳ ಎಲ್ಲರ ಸಹಕಾರ ಪಡೆದು ಸುಸಜ್ಜಿತವಾಗಿ ಪೂರ್ಣಗೊಳಿಸುತ್ತೇವೆ. ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಿ ನಿರ್ವಹಣೆ ಮಾಡುತ್ತೇವೆ.
-ರಾಜೇಶ್‌ ರಾವ್‌, ಮುಕ್ತಿಧಾಮ ಅಭಿವೃದ್ಧಿ ಸೇವಾ ಸಮಿತಿ

ಟಾಪ್ ನ್ಯೂಸ್

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-vtu

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

NIkhil KUMMI

Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ

1-madaraa

CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

2

Udupi: ಯುವತಿ ನಾಪತ್ತೆ; ದೂರು ದಾಖಲು

Devadurga

Karkala: ಅಕ್ರಮ ಮದ್ಯ ದಾಸ್ತಾನು; ಆರೋಪಿ ಸೆರೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-vtu

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.