ಬದುಕಿನ ಆಟಕ್ಕೆ ವಿದಾಯ ಹೇಳಿದ ಭೇನು : ಧ್ಯಾನ್‌ಚಂದ್‌ರಿಂದ ಮೆಚ್ಚುಗೆ ಗಳಿಸಿದ್ದ ಹಾಕಿ ಆಟಗಾರ
Team Udayavani, Sep 17, 2020, 6:17 PM IST
ಗದಗ: ಆರವತ್ತರ ದಶಕದಲ್ಲಿ ಇಡೀ ದೇಶದ ಹಾಕಿ ವಲಯ ದಕ್ಷಿಣ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದ ಖ್ಯಾತ ಹಾಕಿ ಪಟು ಭೇನು ಬಾಳು ಭಾಟ್ ಉರ್ಫ್ ಗಾಗಡೆ(85) ಅವರು ಬದುಕಿನ ಆಟ ಮುಗಿಸಿದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿದ್ದ ಭಾಟ್, ಗದಗಿನ ಕೀರ್ತಿ ಪತಾಕೆ ಹಾರಿಸಿದ್ದರು. ಮೂರು ತಲೆಮಾರಿನೊಂದಿಗೆ ಹಾಕಿ ಸ್ಟಿಕ್ ಹಿಡಿದು, ಓಡಾಡಿದ್ದ ಹಿರಿಯ ಪಟು ಇದೀಗ ಬದುಕಿನ ಆಟಕ್ಕೆ ವಿದಾಯ ಹೇಳಿದ್ದಾರೆ.
ಹೌದು, ಬೆಟಗೇರಿಯ ಗಾಂಧಿ ನಗರದ ನಿವಾಸಿಯಾಗಿದ್ದ ಭೇನು ಭಾಟ್ ಅವರು ಹಾಕಿಯಲ್ಲಿ ಲೆಫ್ಟ್ ಔಟ್ ಸ್ಥಾನದಲ್ಲಿ ಮಿಂಚಿದ್ದರು. ಆ ಕಾಲದಲ್ಲಿ ಭಾಟ್ ಅವರಷ್ಟು ವೇಗದ ಓಟಗಾರ ಮತ್ತೂಬ್ಬರಿಲಿಲ್ಲ. ರೈಲ್ವೇ ನೌಕರನಾಗಿದ್ದ ಭಾಟ್, ಸದರನ್ ರೈಲ್ವೇ(ಚೆನ್ನೈ) ತಂಡವನ್ನು ಪ್ರತಿನಿಧಿ ಸುತ್ತಿದ್ದರು. ಬಳಿಕ ಇಂಡಿಯನ್ ರೈಲ್ವೇ ಹಾಗೂ ಭಾರತ ಹಾಕಿ ತಂಡದಲ್ಲೂ ಸ್ಥಾನ ಪಡೆದಿದ್ದರು. ಅಲ್ಲದೇ, ಭಾಟ್ ಮಿಂಚಿನ ಓಟದ ಮೂಲಕ ಎಲ್ಲರ ಹುಬ್ಬೇರಿಸುವಂತೆ ಆಡುತ್ತಿದ್ದರು. ಇಂಡಿಯನ್ ಎಲೆವೆನ್ ತಂಡದಿಂದ ಬೆಂಗಳೂರಿನಲ್ಲಿ ನಡೆದಿದ್ದ ಶ್ರೀಲಂಕಾ-ಭಾರತ, ವಿಜಯವಾಡದಲ್ಲಿ ಪೋಲೆಂಡ್- ಇಂಡಿಯಾ ತಂಡಗಳ ಸೆಣಸಾಟವನ್ನು ವೀಕ್ಷಿಸಿದ್ದ ಧ್ಯಾನಚಂದ್ ಹಾಗೂ ಮತ್ತಿತರರೆ ಹಿರಿಯ ಕ್ರೀಡಾಪಟುಗಳು ಮೆಚ್ಚುಗೆ ಸೂಚಿಸಿದ್ದರು. ಅದೇ ಸಂದರ್ಭದಲ್ಲಿ ಧ್ಯಾನ್‌ಚಂದ್, ಭಾಟ್ ಅವರನ್ನು “ದಿ ಸ್ಪೀಡ್’ ಎಂದು ಪ್ರೀತಿಯಿಂದ ಕರೆದಿದ್ದರಂತೆ ಎಂದು ಸ್ಮರಿಸುತ್ತಾರೆ ಸ್ಥಳೀಯ ಹಾಕಿ ಪಟು ಶಿವಪ್ಪ ಕೋರಸ್.
ಹಣವಿಲ್ಲದೇ ಒಲೆಂಪಿಕ್‌ನಿಂದ ದೂರ: ದೇಶದಲ್ಲಿ ನಡೆದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದ ಭಾಟ್ ಅವರಿಗೆ 1964ರಲ್ಲಿ ಒಲಿಂಪಿಕ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಒಲಿದು ಬಂದಿತ್ತು. ಜಪಾನ್‌ನ ಟೊಕಿಯೋದಲ್ಲಿ ನಡೆಯಲಿದ್ದ ಪಂದ್ಯಕ್ಕೆ ಪ್ರಯಾಣಿಸಲು ಹಣಕಾಸಿನ ಅಡಚಣೆಯಿಂದಾಗಿ ಪಂದ್ಯದಿಂದ ವಂಚಿತರಾದರು.
ಇದನ್ನೂ ಓದಿ :LACಯಲ್ಲಿ ಚೀನಾ ಪಡೆಗಳಿಂದ ಪಂಜಾಬಿ ಗಾನ-ಬಜಾನ ; ಏನಿದು ಕೆಂಪು ಸೇನೆಯ ಹೊಸ ಗೇಮ್ ಪ್ಲ್ಯಾನ್?
ಆದರೆ ಆ ವರ್ಷದ ಒಲಿಂಪಿಕ್‌ನಲ್ಲಿ ಪಾಲ್ಗೊಂಡಿದ್ದ 15 ರಾಷ್ಟ್ರಗಳ ಪೈಕಿ ಅಂತಿಮ ಪಂದ್ಯದಲ್ಲಿ ಭಾರತ ನೆರೆಯ ಪಾಕಿಸ್ತಾನವನ್ನು ಮಣಿಸಿ, ಚಿನ್ನದ ಪದಕ ಮುಡಿಗೇರಿಸಿಕೊಂಡಿತು. ಆದರೆ ಬಾಲ್ಯದಿಂದ ಹಾಕಿಯೇ ತನ್ನ ಉಸಿರು ಎಂದು ನಂಬಿದ್ದ ಭಾಟ್ ಅವರಿಗೆ ಒಲಿಂಪಿಕ್ ಅಷ್ಟೇಯಲ್ಲ ಚಿನ್ನದ ಪದಕದಿಂದಲೂ ವಂಚಿಸಿತು ಎಂಬುದು ವಿಧಿಯಾಟ. ಕೊನೆವರಿಗೂ ಈ ನೋವು ಅವರನ್ನು ಕಾಡಿತು ಎನ್ನುತ್ತಾರೆ ಹತ್ತಿರದಿಂದ ಕಂಡವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Railway;ನನೆಗುದಿಗೆ ಬಿದ್ದಿದ್ದ 9 ಯೋಜನೆಗಳಿಗೆ ವೇಗ: ಸೋಮಣ್ಣ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.