ಶತ್ರುಗಳ ಎದೆ ನಡುಗಿಸುವ ಗೂರ್ಖಾ ರೈಫಲ್ಸ್ ಪಡೆ
Team Udayavani, Sep 17, 2020, 8:09 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಪ್ರಪಂಚದ ಅತ್ಯಂತ ಶಕ್ತಿಶಾಲಿ ಸೇನಾ ಪಡೆಗಳಲ್ಲಿ ಭಾರತೀಯ ಸೇನೆಯ ಗೂರ್ಖಾ ರೈಫಲ್ಸ್ ಪಡೆಯೂ ಒಂದು. ಯುದ್ಧಕ್ಕೆ ನಿಂತರೆ ಶತ್ರು ಪಡೆಯನ್ನು ಹುಟ್ಟಡಗಿಸದೆ ಹಿಂದೆ ಸರಿಯದ ಈ ಗೂರ್ಖಾ ರೈಫಲ್ಸ್ ಶೌರ್ಯ, ಸಾಹಸಕ್ಕೆ ಹೆಸರುವಾಸಿ.
ನೋಡಲು ಸಾಮಾನ್ಯವಾಗಿ 5.3 ಇಂಚು ಎತ್ತರದ ಈ ಯೋಧರು ಯುದ್ಧಭೂಮಿಯಲ್ಲಿ ತೋರುವ ಶೌರ್ಯಕ್ಕೆ ಶತ್ರುಪಡೆ ಬೆಚ್ಚಿ ಬೀಳುತ್ತದೆ. ಎಂತಹ ಕಠಿನ ಪರಿಸ್ಥಿತಿಯಲ್ಲೂ ಎದೆಗುಂದದೆ ಜೀವ ಪಣಕ್ಕಿಟ್ಟು ಹೋರಾಡುವ ಗೂರ್ಖಾ ಪಡೆಯ ಶಕ್ತಿ ಜಗ ಜ್ಜಾಹೀರಾಗಿದೆ. ಸದ್ಯ 32 ಸಾವಿ ರಕ್ಕೂ ಹೆಚ್ಚು ಗೂರ್ಖಾಗಳೂ ಭಾರತೀಯ ಸೈನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಬ್ಬ ವ್ಯಕ್ತಿ “ನಾನು ಸಾವಿಗೆ ಹೆದರುವುದಿಲ್ಲ ಎಂದು ಹೇಳಿದರೆ ಆತ ಸುಳ್ಳು ಹೇಳು ತ್ತಿರಬಹುದು, ಇಲ್ಲವಾದಲ್ಲಿ ಆತ ಗೂರ್ಖಾ ರೆಜಿಮೆಂಟ್‌ಗೆ ಸೇರಿದವನಾಗಿರಬಹುದು’ಎಂದು ಇತ್ತೀಚೆಗೆ ಸೇನಾ ಮುಖ್ಯಸ್ಥರು ಹೇಳಿದ್ದ ಮಾತು ಗೂರ್ಖಾ ರೆಜಿಮೆಂಟ್‌ನ ಶೌರ್ಯಕ್ಕೆ ಹಿಡಿದ ಕೈಗನ್ನಡಿ.
ಸ್ವಾತಂತ್ರ್ಯ ಪೂರ್ವದಲ್ಲೇ ರಚನೆ
ಇಂದು ಭಾರತೀಯ ಸೇನೆಯ ಪ್ರಮುಖ ಭಾಗವಾಗಿರುವ ಈ ಪಡೆ ಸ್ವಾತಂತ್ರ್ಯ ಪೂರ್ವದಲ್ಲೇ ರಚನೆಯಾಗಿತ್ತು. ಗೂರ್ಖಾ ಪಡೆಯ ದಿಟ್ಟ ಹೊರಾಟಕ್ಕೆ ದಂಗಾಗಿದ್ದ ಬ್ರಿಟಿಷ್ ಜನರಲ್ ಸರ್ ಡೇವಿಡ್ ಒಚೆರ್ಲೋನಿ ಗೂರ್ಖಾಗಳನ್ನು ಬ್ರಿಟಿಷ್ ಸೈನ್ಯಕ್ಕೆ ಸೇರಿಸಿಕೊಂಡರು. ಅಂದಿನಿಂದ ಗೂರ್ಖಾ ಪಡೆ ಬ್ರಿಟಿಷ್ ಸೈನ್ಯದ ಅವಿಭಾಜ್ಯ ಅಂಗವಾಗಿ ಉಳಿದಿತ್ತು. ದೇಶ ಸ್ವÌತಂತ್ರಗೊಂಡ ಬಳಿಕ ಬ್ರಿಟಿಷ್ ಕಾಲದ 6 ರೆಜಿಮೆಂಟ್‌ಗಳ ಜತೆ ಹೊಸದೊಂದು ರೆಜಿಮೆಂಟ್‌ನ್ನು ರಚನೆ ಮಾಡಲಾಗಿದ್ದು ಸದ್ಯಕ್ಕೆ, 7 ಗೂರ್ಖಾ ರೆಜಿಮೆಂಟ್‌ಗಳು ಕಾರ್ಯಾಚರಿಸುತ್ತಿವೆ. ಇದರಲ್ಲಿ 42 ಬಟಾಲಿಯನ್‌ಗಳಿವೆ.
ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ
ಕಾರ್ಗಿಲ್ ಯುದ್ಧದಲ್ಲಿ ಯೋಧನ ತ್ಯಾಗ ಬಲಿದಾನ ಎಂದಿಗೂ ಮರೆಯಲು ಅಸಾಧ್ಯ. ಕಾರ್ಗಿಲ್ ಯುದ್ಧದಲ್ಲಿ ಗೂರ್ಖಾ ರೈಫಲ್ಸ್ 11ರ 1ಬಟಾಲಿಯನ್ ಮುನ್ನಡೆಸಿ, ಕಾರ್ಗಿಲ್‌ನ ಬಟಾಲಿಕ್ ಸೆಕ್ಟrrರ್‌ಗೆ ಸೇರಿದ ಕಾಲುಬಾರ್ ಪರ್ವತದ ತುದಿಯಲ್ಲಿ ಶತ್ರು ಪಡೆಯೊಂದಿಗೆ ಕಾದಾಡುವಾಗ ಹುತಾತ್ಮರಾದರು. ಇವರ ಧೈರ್ಯ ಮತ್ತು ಅತ್ಯುತ್ತಮ ನಾಯಕತ್ವಕ್ಕೆ ಸೇನೆಯು ಅತ್ಯುನ್ನತ ಗೌರವ “ಪರಮ ವೀರ ಚಕ್ರ’ ನೀಡಿದೆ. 2003ರಲ್ಲಿ “ಎಲ್‌ಒಸಿ ಕಾರ್ಗಿಲ್’ ಎಂಬ ಹೆಸರಲ್ಲಿ ಬಾಲಿವುಡ್ ಚಿತ್ರ ಕೂಡ ತೆರೆಕಂಡಿದೆ.
ಡಿಪ್ರಸಾದ್ ಪುನ್
2010ರಲ್ಲಿ ಅಫ್ಘಾನಿಸ್ಥಾನದಲ್ಲಿ ಸಾರ್ಜೆಂಟ್ ಡಿಪ್ರಸಾದ್ ಪುನ್ 30 ತಾಲಿಬಾನಿಗಳೊಂದಿಗೆ ಒಂಟಿಯಾಗಿ ಹೋರಾಡಿದ್ದರು. ಪುನ್ ಚೆಕ್ ಪಾಯಿಟ್‌ನ ಛಾವಣಿ ಮೇಲೆ ಕಾವಲು ಕಾಯುತ್ತಿದ್ದಾಗ, ದಾಳಿಕೋರರು ರಾಕೆಟ್ ಚಾಲಿತ ಗ್ರೆನೇಡ್‌ಗಳು ಮತ್ತು ಎಕೆ -47ಗಳಿಂದ ಸುತ್ತುವರಿದಾಗ ಏಕಾಂಗಿಯಾಗಿ ಎಲ್ಲರನ್ನು ಸದೆಬಡಿದಿದ್ದರು. ಅವರೆಲ್ಲರನ್ನೂ ಕೊಲ್ಲಲು ಪುನ್ ತೆಗೆದುಕೊಂಡಿದ್ದು ಒಂದು ಗಂಟೆ ಕಾಲಾವಕಾಶ ಮಾತ್ರ. ಪುನ್ ಶೌರ್ಯಕ್ಕೆ ನೀಡಲಾದ ಬ್ರಿಟಿಷ್ ಮಿಲಿಟರಿಯ ಎರಡನೇ ಅತ್ಯುನ್ನತ ಗೌರವವಾದ ಕಾನ್‌ಸ್ಪೀಸಿಯಸ್ ಗ್ಯಾಲೆಂಟ್ರಿ ಕ್ರಾಸ್ ನೀಡಲಾಗಿದೆ.
ಕುಕ್ರಿ
ಕುಕ್ರಿ ಗೂರ್ಖಾ ಪಡೆಯ ಅಗತ್ಯ ಮತ್ತು ಪ್ರಮುಖ ಆಯುಧಗಳಲ್ಲೊಂದು. 12 ಇಂಚು ಉದ್ದದ ಬಾಗಿರುವ ಮೊನಚಾದ ಕತ್ತಿ ಪ್ರತಿಯೊಬ್ಬ ಗೂರ್ಖಾ ರೈಫಲ್ಸ್‌ನ ಸೈನಿಕನ ಬಳಿ ಕಡ್ಡಾಯವಾಗಿ ಇರುತ್ತದೆ. ಅಲ್ಲದೇ ಇದನ್ನು ಅವರ ಸೇನಾ ಸಮವಸ್ತ್ರದ ಬ್ಯಾಡ್ಜ್ ಗಳಲ್ಲಿಯೂ ಅಳವಡಿಲಾಗಿದೆ.
ಸ್ವಾರಸ್ಯಕರ ಸಂಗತಿಗಳು
- ಸ್ಯಾಮ್ ಮಾಣಿಕ್ ಷಾ ಮತ್ತು ಈಗಿನ ಸೇನಾ ಮುಖ್ಯಸ್ಥ ಜನರಲ್ ದಲ್ಬಿàರ್ ಸಿಂಗ್ ಸುಹಾಗ ಸೇರಿ ಭಾರತೀಯ ಸೈನ್ಯಕ್ಕೆ 2 ಫೀಲ್ಡ್ ಮಾರ್ಷಲ್‌ಗಳನ್ನು ನೀಡಿದ ಹೆಮ್ಮೆಯ ರೆಜಿಮೆಂಟ್ ಇದಾಗಿದೆ.
- ಗೂರ್ಖಾ ರೈಫಲ್ಸ್‌ಗೆ ಸೇರುವ ಗೂರ್ಖಾಯೇತರ ಯೋಧರು ರೆಜಿಮೆಂಟ್‌ನಲ್ಲಿ ಸಂವಹನಕ್ಕಾಗಿ ಕಡ್ಡಾಯವಾಗಿ ನೇಪಾಳಿ ಭಾಷೆ ಕಲಿಯಬೇಕು.
- ಗೂರ್ಖಾ ರೈಫಲ್ಸ್‌ನಲ್ಲಿ ಹಿಂದಿನಿಂದಲೂ ದಸರಾ ಸಂದರ್ಭ ಕೋಣ ಬಲಿ ಕೊಡುವ ಸಂಪ್ರದಾಯವಿತ್ತು. 2015ರಲ್ಲಿ ರಕ್ಷಣಾ ಸಚಿವಾಲಯ ಇದಕ್ಕೆ ನಿರ್ಬಂಧ ಹೇರಿದೆ.
- ಅಗಲ ಆಕಾರದ ಮತ್ತು ಓರೆಯಾಗಿ ಧರಿಸಲ್ಪಡುವ ಗೂರ್ಖಾ ಟೋಪಿ ಇದರ ಇನ್ನೊಂದು ಪ್ರಮುಖ ಆಕರ್ಷಣೆ.
- ರಕ್ಷಣಾ ಸಿಬಂದಿ ಮುಖ್ಯಸ್ಥ ಜ| ಬಿಪಿನ್ ರಾವತ್ ಅವರು ಗೂರ್ಖಾ ಟೋಪಿಯನ್ನು ಸದಾ ಧರಿಸುವುದನ್ನು ನಾವು ಕಾಣಬಹುದು. ಮೂಲತಃ ಇವರು ಗೂರ್ಖಾ ರೈಫಲ್ಸ್‌ನಿಂದ ಬಂದವರು.
- 2ನೇ ವಿಶ್ವ ಮಹಾಯುದ್ಧ, ಫೋಕ್‌ಲ್ಯಾಂಡ್ ಸಂಘರ್ಷ, ಬೋಸ್ನಿ ಯಾ, ಕೊಸಾವೋ, ಅಫ್ಘಾನಿಸ್ಥಾನ್‌ಸಹಿತ ಹಲವು ಬ್ರಿಟಿಷ್ ಕಾರ್ಯಾಚರಣೆಗಳಲ್ಲಿ ಇದು ಭಾಗವಹಿಸಿತ್ತು.
ಶಿವಾನಂದ . ಎಚ್ ಗದಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.