ರಜೌರಿಯ ಗುಂಡಿನ ಮೊರೆತಗಳ ನಡುವೆ ಅರಳಿದ ಕ್ರಿಕೆಟ್ ಪ್ರತಿಭೆ ಅಬ್ದುಲ್‌ ಸಮದ್


Team Udayavani, Sep 18, 2020, 4:02 PM IST

ರಜೌರಿಯ ಗುಂಡಿನ ಮೊರೆತಗಳ ನಡುವೆ ಅರಳಿದ ಕ್ರಿಕೆಟ್ ಪ್ರತಿಭೆ ಅಬ್ದುಲ್‌ ಸಮದ್

ಜಮ್ಮು ಕಾಶ್ಮೀರದ ರಜೌರಿ ಎಂದರೆ ಪಕ್ಕನೆ ನೆನಪಾಗುವುದು ಬೆಟ್ಟ ಗುಡ್ಡಗಳ ನಡುವಣ ಒಂದು ಪಟ್ಟಣ. ದೂಧ್ ಧಾರಿ ದೇವಸ್ಥಾನ. ಪಟ್ಟಣದ ನಡುವೆ ಹಾದು ಹೋಗುವ ನದಿ. ಪ್ರಸಿದ್ಧ ರಜೌರಿ ಸೇತುವೆಯೇ? ಅಲ್ಲ ಕಣ್ಣು ಮುಚ್ಚಿ ಒಮ್ಮೆ ರಜೌರಿಯನ್ನು ನೆನೆದರೆ ಎದುರಾಗುವುದು ಗುಂಡಿನ ಮೊರೆತಗಳು, ಸಿಡಿದ ಬಾಂಬ್‌ ನ ಕಾರಣದಿಂದ ಛಿದ್ರ ಛಿದ್ರವಾದ ಮೃತದೇಹಗಳು, ಹೊತ್ತಿ ಉರಿಯುತ್ತಿರುವ ವಾಹನಗಳು.! ಇಂತಹ ಗುಂಡಿನ ಮೊರೆತಗಳ ಸದ್ದಿನ ನಡುವೆ ಕ್ರಿಕೆಟ್ ಪ್ರತಿಭೆಯೊಂದು ಅರಳುತ್ತಿದೆ. ಕಷ್ಟಗಳ ಕೆಸರಿನ ನಡುವೆ ಕಮಲದಂತೆ ಅರಳಲು ಐಪಿಎಲ್ ಎಂಬ ಉದಯ ರವಿಯತ್ತ ಮುಖ ಮಾಡಿದ್ದಾನೆ. ಈ ಪ್ರತಿಭೆ ಬೇರಾರು ಅಲ್ಲ ಜಮ್ಮು ಕಾಶ್ಮೀರದ ಹೊಸ ಸೆನ್ಸೇಶನ್ 18ರ ಹರೆಯದ ಅಬ್ದುಲ್‌ ಸಮದ್. ಐಪಿಎಲ್ ಎಂಬ ಮಹಾಕೂಟದಲ್ಲಿ ಪಾಲ್ಗೊಳ್ಳಲು ಬಹಳಷ್ಟು ಯುವ ಆಟಗಾರರು ಇಚ್ಛಿಸುತ್ತಾರೆ. ಕೆಲವರು ಅವಕಾಶ ಪಡೆದರೆ, ಕೆಲವರು ಅದರಿಂದ ವಂಚಿತರಾಗುತ್ತಾರೆ. ಸದ್ಯ ಸನ್ ರೈಸರ್ಸ್ ತಂಡದಲ್ಲಿ ಅವಕಾಶ ಪಡೆದಿರುವ ಸಮದ್ ಗಮನ ಸೆಳೆದಿರುವುದು ತನ್ನ ಹಿನ್ನೆಲೆಯಿಂದ ಮಾತ್ರವಲ್ಲ ಪ್ರತಿಭೆಯಿಂದಲೂ.

ಪಠಾಣ್ ಗರಡಿಯ ಪ್ರತಿಭೆ

2018ರಲ್ಲಿ ಜಮ್ಮು ಕಾಶ್ಮೀರ ತಂಡದ ಆಟಗಾರ ಮತ್ತು ತರಬೇತುದಾರನಾಗಿ ಸೇರಿದ್ದ ಇರ್ಫಾನ್ ಪಠಾಣ್ ಸೇರಿದ್ದರು.  ರಣಜಿ ತಂಡಕ್ಕೆ ಹೊಸ ಆಟಗಾರರ ಹುಡುಕಾಟದಲ್ಲಿದ್ದ ಪಠಾಣ್ ರಾಜ್ಯದಲ್ಲಿ ಸುತ್ತಾಟ ನಡೆಸಿದ್ದರು. ಕಣಿವೆ ರಾಜ್ಯದಲ್ಲಿ ಬಹಳಷ್ಟು ಕೂಟಗಳನ್ನು ನಡೆಸಿದರು. ಈ ಹಂತದಲ್ಲಿ ಜಮ್ಮುವಿನ ವಿಜ್ಞಾನ ಕಾಲೇಜಿನ ಕ್ಯಾಂಪ್ ನಲ್ಲಿ ಭರ್ಜರಿ ಸಿಕ್ಸರ್ ಬಾರಿಸುತ್ತಿದ್ದ ಯುವಕ ಪಠಾಣ್ ಗಮನ ಸೆಳೆದಿದ್ದ. ಆತನಿಗಿನ್ನೂ 16 ವರ್ಷ. ಆತನೇ ಅಬ್ದುಲ್‌ ಸಮದ್.

ಇರ್ಫಾನ್ ಪಠಾಣ್

ಡ್ರೈ ವಿಕೆಟ್ ನಲ್ಲಿ ಹಿರಿಯ ಆಟಗಾರರು ಪರದಾಡುತ್ತಿದ್ದರೆ ಈ ಬಾಲಕ ಮಾತ್ರ ಮುನ್ನುಗ್ಗಿ ಬಂದು ದಂಡಿಸುತ್ತಿದ್ದ. ದೂರ ದೂರಕ್ಕೆ ಸಿಕ್ಸರ್ ಬಾರಿಸುತ್ತಿದ್ದ. ಆಗಲೇ ನಮ್ಮ ಗಮನ ಸೆಳೆದಿದ್ದ. ಕೂಡಲೇ ನಾನು ಆತನ ಹಿನ್ನೆಲೆ ಗಮನಿಸಿದೆ. ಚುಟುಕು ಮಾದರಿ ಕ್ರಿಕೆಟ್ ನಲ್ಲಿ ಅವಕಾಶ ಕೊಡಬೇಕೆಂದು ಸಯ್ಯದ್ ಮುಷ್ತಾಕ್ ಅಲಿ ಕೂಟದಲ್ಲಿ ಕಣಕ್ಕಿಳಿಸಿದೆ ಎನ್ನುತ್ತಾರೆ ಇರ್ಫಾನ್ ಪಠಾಣ್.

ನಾಗಾಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಸಮದ್ 51ಎಸೆತಗಳಿಂದ 76 ರನ್ ಬಾರಿಸಿದ್ದರು. ತಂಡದ ಗೆಲುವಿನ ರೂವಾರಿಯಾದರು. ನಂತರ ಲಿಸ್ಟ್ ಎ ಮತ್ತು ರಣಜಿ ತಂಡಕ್ಕೂ ಆಯ್ಕೆಯಾದರು.

ಇದನ್ನೂ ಓದಿ: ಆರ್ ಸಿ ಬಿ ಥೀಮ್ ಸಾಂಗ್ ರಿಲೀಸ್ : ಕನ್ನಡ ಸಾಹಿತ್ಯ ಇಲ್ಲದ್ದಕ್ಕೆ ಅಭಿಮಾನಿಗಳು ಗರಂ..!

ಜಮ್ಮು ಕಾಶ್ಮೀರ ಪರ 10 ಪ್ರಥಮ ದರ್ಜೆ ಪಂದ್ಯವಾಡಿರುವ ಸಮದ್, ಎರಡು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 592 ರನ್ ಗಳಿಸಿದ್ದಾರೆ. 10 ಟಿ20 ಇನ್ನಿಂಗ್ಸ್ ಗಳಲ್ಲಿ 40ರ ಸರಾಸರಿಯಲ್ಲಿ 240 ರನ್ ಗಳಿಸಿದ್ದಾರೆ. ಸ್ಟ್ರೇಕ್ ರೇಟ್ 136.4.

ಸಮದ್

ಅಬ್ದಲ್ ಸಮದ್ ಬ್ಯಾಟ್ ಬೀಸುವ ಪರಿಯ ಬಗ್ಗೆ ಹೇಳಬೇಕಾದರೆ ಆತ ಅಸ್ಸಾಂ ವಿರುದ್ಧ ರಣಜಿ ಪಂದ್ಯದಲ್ಲಿ ಬಾರಿಸಿದ ಶತಕವನ್ನು ಗಮನಿಸಬೇಕು. 72 ಎಸೆತಗಳಲ್ಲಿ ಅಜೇಯ 103 ರನ್ ಬಾರಿಸಿದ್ದ ಸಮದ್ ಎಂಟು ಬಾರಿ ಚೆಂಡನ್ನು ಸಿಕ್ಸರ್ ಗೆ ಅಟ್ಟಿದ್ದರು. ಏಳು ಬೌಂಡರಿ ಬಾರಿಸಿದ್ದರು. ಅಂದರೆ ಟೆಸ್ಟ್ ಶತಕವೊಂದರಲ್ಲಿ ಕೇವಲ ಸಿಕ್ಸರ್ ಬೌಂಡರಿಯಿಂದಲೇ ಈತ 76 ರನ್ ಗಳಿಸಿದ್ದ.

ಯುವ ಆಟಗಾರನ ಸಾಧನೆ ಗಮನಿಸಿದ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಐಪಿಎಲ್ ಹರಾಜಿನಲ್ಲಿ ಖರೀದಿಸಿದೆ. ಈ ಮೂಲಕ ಐಪಿಎಲ್ ನಲ್ಲಿ ಆಡುವ ಅವಕಾಶ ಪಡೆದ ಜಮ್ಮು ಕಾಶ್ಮೀರದ ನಾಲ್ಕನೇ ಆಟಗಾರ ಎಂಬ ಗರಿಮೆಗೆ ಪಾತ್ರರಾದರು. (ಪರ್ವೇಜ್ ರಸೂಲ್, ಮಂಜೂರ್ ದಾರ್, ರಸಿಖ್ ಸಲಾಂ ಮೊದಲ ಮೂವರು).

ಸನ್ ರೈಸರ್ಸ್ ಹೈದರಾಬಾದ್

“ನನ್ನ ಕ್ರಿಕೆಟ್ ಪಯಣ ಈಗಷ್ಟೇ ಆರಂಭವಾಗಿದ್ದು, ಇನ್ನಷ್ಟು ಸಾಧನೆ ಮಾಡಬೇಕಿದೆ. ಗಲ್ಲಿ ಕ್ರಿಕೆಟ್ ಆಡುತ್ತಿದ್ದಾತ ಈಗ ಐಪಿಎಲ್ ಆಡುವ ಅವಕಾಶ ಪಡೆದಿದ್ದೇನೆ. ಮುಂದೊಂದು ದಿನ ಭಾರತೀಯ ತಂಡವನ್ನು ಪ್ರತಿನಿಧಿಸುತ್ತೇನೆ” ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಾರೆ ಅಬ್ದುಲ್ ಸಮದ್.

ಕೀರ್ತನ್ ಶೆಟ್ಟಿ ಬೋಳ

ಟಾಪ್ ನ್ಯೂಸ್

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.