ಸೆ.20ರಿಂದ ಅಮೆರಿಕದಲ್ಲಿ ಟಿಕ್ ಟಾಕ್, ವಿ-ಚಾಟ್ ಅಧಿಕೃತವಾಗಿ ಬ್ಯಾನ್
Team Udayavani, Sep 18, 2020, 7:05 PM IST
ವಾಷಿಂಗ್ಟನ್: ಭಾನುವಾರದಿಂದ (20-9-2020) ಅಮೆರಿಕಾದ ಪ್ರಜೆಗಳು ಚೀನಾ ಮೂಲದ ಟಿಕ್ ಟಾಕ್ ಹಾಗೂ ವಿ-ಚಾಟ್ ಅನ್ನು ಡೌನ್ ಲೋಡ್ ಮಾಡುವಂತಿಲ್ಲ ಎಂದು ಯುಎಸ್ ವಾಣಿಜ್ಯ ವಿಭಾಗದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ರಾಷ್ಟ್ರೀಯ ಭಧ್ರತೆಗೆ ಈ ಅಪ್ಲಿಕೇಶನ್ ಗಳು ಅಪಾಯವನ್ನುಂಟು ಮಾಡುತ್ತಿರುವುದರಿಂದ ಕೂಡಲೇ ಇದರ ಬಳಕೆಯನ್ನು ನಿಲ್ಲಿಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕಾ ಮತ್ತು ಚೀನಾ ನಡುವೆ ತಾಂತ್ರಿಕ ಬಿಕ್ಕಟ್ಟು ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದು, ಟ್ರಂಪ್ ಸರ್ಕಾರ ಅಮೆರಿಕಾದ ಹೂಡಿಕೆದಾರರಿಗೆ ಟಿಕ್ ಟಾಕ್ ಅನ್ನು ಮಾರಾಟ ಮಾಡುವಂತೆ ಬೈಟೇಡ್ಯಾನ್ಸ್ ಕಂಪೆನಿಗೆ ಕಾಲಾವಕಾಶ ನೀಡಿತ್ತು. ಅದಾಗ್ಯೂ ಚೀನಾದ ಬೈಟೇಡ್ಯಾನ್ಸ್ ಕಂಪೆನಿ ಹಲವು ಅಮೆರಿಕಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ ತನ್ನ ಕಾರ್ಯಾಚರಣೆಯನ್ನು ಉಳಿಸಿಕೊಳ್ಳಲು ಉತ್ಸುಕತೆ ತೋರ್ಪಡಿಸಿತ್ತು.
ಮಾತ್ರವಲ್ಲದೆ ಓರ್ಯಾಕಲ್ ಕಾರ್ಪ್, ಮೈಕ್ರೋಸಾಫ್ಟ್ ಸೇರಿದಂತೆ ಹಲವು ಹೊಸ ಕಂಪೆನಿಗಳ ಜೊತೆಗೆ ಮೊದಲ ಸುತ್ತಿನ ಮಾತುಕತೆ ನಡೆಸಿತ್ತು. ಅದಾಗ್ಯೂ ಕಾಲಾವಕಾಶ ಮೀರಿದ್ದರಿಂದ ಇದೇ ಸೆಪ್ಟೆಂಬರ್ 20 ಭಾನುವಾರದಿಂದ ಗೂಗಲ್ ಮತ್ತು ಆ್ಯಪಲ್ ಪ್ಲೇಸ್ಟೋರ್ ನಿಂದ ಟಿಕ್ ಟಾಕ್ ಮತ್ತು ವಿ-ಚಾಟ್ ಅಧಿಕೃತವಾಗಿ ಹೊರಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.