ಎಸೆಸೆಲ್ಸಿ ಉತ್ತೀರ್ಣರಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗಾವಕಾಶಗಳು
Team Udayavani, Sep 19, 2020, 6:40 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಣಿಪಾಲ: ಅಂಚೆ ಕಚೇರಿಯಲ್ಲಿ ಉದ್ಯೋಗ ಮಾಡಲು ಇಚ್ಚೆ ಇರುವವರಿಗೆ ಶುಭ ಸುದ್ದಿ. ಗ್ರಾಮೀಣ ಡಾಕ್ ಸೇವಕ ಅಥವ ಜಿಡಿಎಸ್ ನೇಮಕಾತಿ ಮೂರನೇ ಸುತ್ತಿನ ಪ್ರಕ್ರಿಯೆ ಆರಂಭವಾಗಿದೆ. ಅರ್ಹ ಮತ್ತು ಸೂಕ್ತ ಅಭ್ಯರ್ಥಿಗಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮೂರನೇ ಸುತ್ತಿನಲ್ಲಿ ಖಾಲಿ ಇರುವ ಒಟ್ಟು 5,222 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಒಡಿಶಾ ಅಂಚೆ ವಲಯದಲ್ಲಿ 3,162 ಮತ್ತು ತಮಿಳುನಾಡು ಅಂಚೆ ವಲಯದಲ್ಲಿನ 2,060 ಹುದ್ದೆಗಳು ಸೇರಿವೆ. ನೊಂದಣಿ ಪ್ರಕ್ರಿಯೆ ಎಲ್ಲವೂ ಹಿಂದಿನ ನೇಮಕಾತಿಯಂತೆಯೇ ಇರಲಿದೆ. ಆಸಕ್ತರು ಸೆ. 30ರ ಒಳಗೆ ಅರ್ಜಿ ಸಲ್ಲಿಸಬೇಕಾಗಿದೆ.
ವಿದ್ಯಾರ್ಹತೆ
10ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, ಗಣಿತ ಮತ್ತು ಇಂಗ್ಲಿಷ್ ವಿಷಯದಲ್ಲಿ ಉತ್ತಮ ಅಂಕ ಹೊಂದಿದ್ದು, 10ನೇ ತರಗತಿ ತನಕ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಪೂರೈಸಿರಬೇಕು.
ವಯೋಮಾನ/ ಆಯ್ಕೆ
18ರಿಂದ 40 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ
ಅರ್ಜಿ ಶುಲ್ಕವನ್ನು 100 ರೂ. ಎಂದು ನಿಗದಿಪಡಿಸಲಾಗಿದ್ದು, ಎಸ್ಸಿ. ಎಸ್ಟಿ, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಕೆ ಹೇಗೆ?
ಸಂಸ್ಥೆಯ ಅಧಿಕೃತ ಜಾಲತಾಣ https://appost.in/gdsonline/Home.aspxದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ : ಅಂಚೆ ಇಲಾಖೆ ಗ್ರಾಮೀಣ ಡಾಕ್ ಸೇವಕ
ಒಟ್ಟು ಹುದ್ದೆಗಳು: 5,222
ತಮಿಳುನಾಡು: 2,060
ಒಡಿಶಾ: 3,162
ಸೆಪ್ಟಂಬರ್ ಕಡೆಯ ದಿನಾಂಕ: 30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Job Opportunities: ಭಾರತೀಯ ನೌಕಾಪಡೆ ಇಲಾಖೆಯಲ್ಲಿ 250 ಹುದ್ದೆಗಳಿಗೆ ಅರ್ಜಿ ಆಹ್ವಾನ
Job Opportunities:ಪಂಜಾಬ್ and ಸಿಂಧ್ ಬ್ಯಾಂಕ್-213 ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
Job:Indian ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ನಲ್ಲಿ ಅಪ್ರಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ
Career Guidance: PUC ನಂತರ Agricultural ಬಯೋಟೆಕ್ನೋಲೊಜಿಸ್ಟ್ ಆಯ್ಕೆ ಉತ್ತಮ…
Job Opportunities: ಭಾರತೀಯ ರೈಲ್ವೆ, KUIDFC- ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.