ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಜೊತೆಗೆ ಹೈಬ್ರೀಡ್ ತಳಿಗಳನ್ನು ಬಳಸಲು ಕೃಷಿ ವಿ.ವಿ ಸಲಹೆ
Team Udayavani, Sep 19, 2020, 6:38 PM IST
ಹನೂರು : ದೇಶದಲ್ಲಿ ಪ್ರಸ್ತುತ 292 ಮಿಲಿಯನ್ ಟನ್ ಆಹಾರ ಪದಾರ್ಥಗಳ ಉತ್ಪಾದನೆಯಾಗುತ್ತಿದ್ದು, ಏರುತ್ತಿರುವ ಜನಸಂಖ್ಯೆಗನುಗುಣವಾಗಿ ಪೌಷ್ಠಿಕಾಂಶ ಮತ್ತು ಲಘು ಲವಣಾಂಶಗಳ ಉತ್ಪಾನೆ ಅವಶ್ಯಕತೆಯಿದೆ. ಈ ಹಿನ್ನೆಲೆ ಅತ್ಯಾಧುನಿಕ ತಾಂತ್ರಿಕತೆ ಮತ್ತು ಹೈಬ್ರೀಡ್ ಬಿತ್ತನೆ ತಳಿಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ|ಎಸ್.ರಾಜೇಂದ್ರ ಪ್ರಸಾದ್ ತಿಳಿಸಿದರು.
ತಾಲೂಕಿನ ಗಡಿಯಂಚಿನ ನೆಕ್ಕುಂದಿ ಪೋಡಿಗೆ ಭೇಟಿ ನೀಡಿ ಬುಡಕಟ್ಟು ಉಪ ಯೋಜನೆಯಡಿ ತರಭೇತಿ ಮತ್ತು ಕೃಷಿ ಪರಿಕರಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜೇಂದ್ರ ಪ್ರಸಾದ್ ದೇಶದಲ್ಲಿ ದಿನೇದಿನೇ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಆಹಾರ ಪದಾರ್ಥಗಳೂ ಹೆಚ್ಚಿನ ಉತ್ಪಾದನೆಯಾಗಬೇಕಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಗಿರಿಜನರಿಗಾಗಿ ಹತ್ತು ಹಲವು ಯೋಜನೆಗಳನ್ನು ನೀಡುತ್ತಿದೆ. ಅಲ್ಲದೆ ಆ ಆಹಾರದಲ್ಲಿ ಮಾನವನಿಗೆ ದೈಹಿಕವಾಗಿ ಅಗತ್ಯವಿರುವ ಪೌಷ್ಠಿಕಾಂಶ ಮತ್ತು ಲಘು ಲವಣಾಂಶಗಳ ಆಹಾರ ಪದಾರ್ಥ ಉತ್ಪಾದನೆ ಮಾಡಬೇಕಿದೆ. ಆದರೆ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅವಶ್ಯಕವಿರುವಷ್ಟು ಪೌಷ್ಠಿಕಾಂಶ ದೊರೆಯುತ್ತಿಲ್ಲ. ಆದುದರಿಂದ ಕೃಷಿ ವಿಶ್ವವಿದ್ಯಾನಿಲಯಗಳ ಮೂಲಕ ಉತ್ತಮವಾದ ಅಭಿವೃದ್ಧಿಪಡಿಸಿದ ಹೈಬ್ರೀಡ್ ಬಿತ್ತನೆ ಬೀಗಳನ್ನು ನೀಡಲಾಗುತ್ತಿದೆ. ಈ ಹೈಬ್ರೀಡ್ ತಳಿಗಳು ಸ್ಥಳೀಯವಾಗಿ ಬಳಕೆ ಮಾಡುವ ತಳಿಗಳಿಗಿಂತ 2-3ಪಟ್ಟು ಹೆಚ್ಚಿನ ಇಳುವರಿ ನೀಡುತ್ತವೆ. ಆದುದರಿಂದ ಈ ನೂತನ ತಳಿಗಳನ್ನು ಬೆಳೆಯುವ ಮೂಲಕ ಉತ್ತಮ ಇಳುವರಿ ಪಡೆದು ರೈತರೂ ಕೂಡ ಆರ್ಥಿಕವಾಗಿ ಸದೃಢರಾಗಬೇಕು ಎಂದು ಕಿವಿಮಾತು ಹೇಳಿದರು.
ಜಿ.ಪಂ ಸದಸ್ಯ ಬಸವರಾಜು ಮಾತನಾಡಿ ರಾಮಾಪುರ ಹೋಬಳಿಯು ರಾಜ್ಯದ ಕಟ್ಟಕಡೆಯ ಮತ್ತು ಆರ್ಥಿಕವಾಗಿ ಹಿಂದುಳಿದ ಹೋಬಳಿಯಾಗಿದೆ. ಈ ಭಾಗದಲ್ಲಿ ಕೃಷಿ ವಿಶ್ವವಿದ್ಯಾನಿಲಯದವತಿಯಿಂದ ದೊರಕುವ ಎಲ್ಲಾ ಸವಲತ್ತುಗಳನ್ನು ದೊರಕಿಸಿಕೊಟ್ಟು ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಮತ್ತು ರೈತರಿಗೆ ಕಾಲಕಾಲಕ್ಕೆ ಅಗತ್ಯ ತರಭೇತಿ ಮತ್ತು ಮಾಹಿತಿಯನ್ನು ನೀಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ 150 ಗಿರಿಜನ ಕುಟುಂಬಗಳಿಗೆ ಗುದ್ದಲಿ, ಸನಿಕೆ, ಕುಡುಗೋಲು , ಟಾರ್ಪಲಿನ್ ಮತ್ತು ಆಹಾರ ಪದಾರ್ಥಗಳ ಬಿತ್ತನೆ ಬೀಜಗಳ ಸಂರಕ್ಷಣಾ ಪೆಟ್ಟಿಗೆಯನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಕೆ.ಮಧುಸೂದನ್, ಎಂ.ಪಿ.ರಾಜಣ್ಣ, ಟಿ.ಎಂ.ರಮಣಪ್ಪ, ನಿರಂಜನಮೂರ್ತಿ, ರಮಣಪ್ಪ, ಸಿದ್ಧರಾಜು, ವಿಶ್ವನಾಥ್ ಮತ್ತು ರೀಡಾ ಸಂಸ್ಥೆಯ ಶಿವರುದ್ರಪ್ಪ ಇನ್ನಿತರರು ಹಾಜರಿದ್ದರು.
ಜಮೀನುಗಳಿಗೆ ಭೇಟಿ, ಪರಿಶೀಲನೆ: ಕಾರ್ಯಕ್ರಮಕ್ಕೂ ಮುನ್ನ ಕುಲಪರಿ ಡಾ.ರಾಜೇಂದ್ರ ಪ್ರಸಾದ್ ಅವರು ಮಾದೇವಮ್ಮ ಎಂಬ ರೈತ ಮಹಿಳೆಯ ಜಮೀನಿಗೆ ಭೇಟಿ ನೀಡಿ ವಿಶ್ವವಿದ್ಯಾನಿಲಯದವತಿಯಿಂದ ನೀಡಿರುವ ಎಂಎಲ್-365 ತಳಿಯ ರಾಗಿ ಬೆಳೆ ಮತ್ತು ತರಕಾರಿ ಬೆಳೆಗಳನ್ನು ಪರಿಶೀಲನೆ ಮಾಡಿದರು. ಇದೇ ವೇಳೆ ರೈತ ಮಹಿಳೆಯೊಂದಿಗೆ ಔಪಚಾರಿಕ ಚರ್ಚೆ ನಡೆಸಿ ವಿಶ್ವವಿದ್ಯಾನಿಲಯ ನೀಡುತ್ತಿರುವ ಸವಲತ್ತುಗಳ ಬಗ್ಗೆ ತಿಳಿಸಿ ಇದರ ಸದುಪಯೋಗಪಡೆದುಕೊಳ್ಳುವಂತೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.