ಹೆಬ್ಟಾಕ ‌ಕೆರೆಗೆ ಹರಿದು ಬಂದ ಹೇಮೆ ನೀರು


Team Udayavani, Sep 19, 2020, 6:48 PM IST

ಹೆಬ್ಟಾಕ ‌ಕೆರೆಗೆ ಹರಿದು ಬಂದ ಹೇಮೆ ನೀರು

ತುಮಕೂರು: ನಗರದ ಜನರಿಗೆ ಕುಡಿಯಲು ನೀರು ಒದಗಿಸುವ ಬುಗುಡನಹಳ್ಳಿ ಕೆರಯಿಂದ ಹೆಬ್ಟಾಕ ಕೆರೆಗೆ ಹೇಮಾವತಿ ನೀರನ್ನು ಶುಕ್ರವಾರ ಹರಿಸಲಾಯಿತು. ಪೈಪ್‌ಲೈನ್‌ ಮೂಲಕ ತಾಲೂಕಿನ ಬುಗುಡನಹಳ್ಳಿ ಕರೆಯಿಂದ ಹೆಬ್ಟಾಕ ಕೆರೆಗೆ ಹೇಮಾವತಿ ನೀರನ್ನು ಬಿಡುತ್ತಲೇ ಅಲ್ಲಿದ್ದ ಗ್ರಾಮಸ್ಥರು ಹೇಮಾವತಿ ನೀರು ಕೆರೆಗೆ ಹರಿದು ಬಂದಿದ್ದನ್ನು ನೋಡಿ ಸಂತಸ ಪಟ್ಟರು.

ಗಂಗಾ ಪೂಜೆ: ಈ ವೇಳೆ ಪೈಪ್‌ ಲೈನ್‌ ಮೂಲಕ ಹೇಮಾವತಿ ನೀರು ಹರಿದು ಬಂದು ಕೆರೆಗೆ ಬೀಳುತ್ತಿದ್ದ ವೇಳೆಯಲ್ಲಿ ಕೆಲವರು ಗಂಗಾ ಪೂಜೆ ಮಾಡಿ ನಮ್ಮ ಊರಿನ ಕೆರೆಬೇಗ ತುಂಬಲಿ ಎಂದು ಬೇಡಿಕೊಂಡರು. ಈ ಕೆರೆ ತುಂಬುವುದರಿಂದಈಭಾಗದಲ್ಲಿ ಅಂತರ್‌ ಜಲ ಹೆಚ್ಚಲಿದ್ದು ಇದು ಇಲ್ಲಿಯ ರೈತರಿಗೆ ಸಂತಸವಾಗಲಿದೆ ಕೆರೆಗೆ ಹೇಮಾವತಿ ನೀರು ಹರಿಸಬೇಕು ಎನ್ನುವುದು ಈ ಬಾಗದ ರೈತರ ಒತ್ತಾಯ ವಾಗಿತ್ತು.

ಶಾಸಕ ಭೇಟಿ, ಪರಿಶೀಲನೆ: ಹಬ್ಟಾಕ ಕೆರೆಗೆ ನೀರು ಹರಿಯುತ್ತಲೇ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ತುಮಕೂರು ಮಹಾನಗರ ಪಾಲಿಕೆ ಮೇಯರ್‌ ಫ‌ರೀದಾಬೇಗಂ, ಉಪ ಮೇಯರ್‌ ಶಶಿಕಲಾ ಗಂಗಹನುಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಧಿಕಾರಿಗಳಿಗೆಸೂಚನೆ: ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಅಲ್ಲಿದ್ದ ಅಧಿಕಾರಿಗಳಿಂದ ನಗರಕ್ಕೆ ನೀರು ಹರಿದಿರುವ ಬಗ್ಗೆ ಮಾಹಿತಿ ಪಡೆದು ಶೀಘ್ರವಾಗಿ ಹೆಬ್ಟಾಕ ಕೆರೆ ತುಂಬ ಬೇಕು,ಕೆರೆಗೆ ನೀರುಹರಿಯುವುದನ್ನು ನಿಲ್ಲಿಸಕೂಡದು, ಇಲ್ಲಿ ನೀರು ಸಂಗ್ರಹ ವಾದರೆ ನಗರಕ್ಕೆ ಕುಡಿಯಲು ನೀರು ಬಳಸ ಬಹುದು ಎಂದು ಹೇಳಿದರು.

ಮರಳೂರು ಕೆರೆಗೂ ಶೀಘ್ರಹೇಮೆ: ನಗರದ ಜನತೆ ಇದುವರೆಗೂ ಬುಗುಡನಹಳ್ಳಿ ಜಲಾಸಂಗ್ರಹಾಗಾರದ ನೀರಿನ ಮೇಲೆಯೇ ಅವಲಂಭಿತರಾಗಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ಗಂಗಸಂದ್ರ, ಮರಳೂರು ಕೆರೆಗೂ ಹೇಮಾವತಿ ನೀರು ಹರಿಸುವ ಯೋಜನೆ ಸಿದ್ದವಾಗಿದ್ದು ಶೀಘ್ರವಾಗಿಆಕೆರೆಗಳಿಗೂ ಹೇಮಾವತಿ ನೀರು ಹರಿಯಲಿದೆ ಎಂದರು.

ನಗರದ ಗಂಗಸಂದ್ರ ಮತ್ತು ಮರಳೂರು ಈ ಕೆರೆಗಳಲ್ಲೂ ಸಹ ಶುದ್ಧೀಕರಣ ಘಟಕ ಸ್ಥಾಪಿಸಲು ಸ್ಮಾರ್ಟ್‌ ಸಿಟಿಯಿಂದ 11 ಕೋಟಿ ರೂ. ಹಣ ಮಂಜೂರಾಗಿದೆ ಎಂದು ತಿಳಿಸಿದರು.

ಜನರಿಗೆ ಹೆಚ್ಚು ಅನುಕೂಲ: ಈಗಾಗಲೇ ನಗರದ ಅಮಾನಿಕೆರೆಗೆ ನೀರು ಹರಿಸಲಾಗುತ್ತಿದೆ ಕೆರೆಯಲ್ಲಿ ಅರ್ಧದಷ್ಟು ನೀರು ಸಂಗ್ರಹವಾಗಿದೆ ಕೆರೆಯಲ್ಲಿ ನೀರುನೋಡಿ ಸಂತಸವಾಗಿದೆ ಅಮಾನಿಕೆರೆಗೆ ಹೇಮಾವತಿ ನೀರನ್ನು ತೋರ್ಪಡಿಕೆಗಾಗಿ ನೀರು ಹರಿಸಿ ತುಂಬಿಸುತ್ತಲ್ಲ ಇದರಿಂದನಗರದಜನರಿಗೆಹೆಚ್ಚುಅನುಕೂಲವಾಗಲಿದೆ ಎಂದರು.

ಅಂತರ್ಜಲ ಮಟ್ಟವೂ ವೃದ್ಧಿ: ಈ ಕೆರೆಯಲ್ಲಿ ನೀರು ತುಂಬಿದರೆ ಅಂತರ್ಜಲ ಮಟ್ಟವೂ ವೃದ್ಧಿಯಾಗಲಿದೆ. ಇದರಿಂದ ಈ ಭಾಗದ ಬಹುತೇಕ ಬೋರ್‌ವೆಲ್‌ಗ‌ಳು ನೀರಿನಿಂದ ಸಮೃದ್ಧಿಯಾಗಲಿವೆ ಎಂದು ಹೇಳಿದರು. ಅಮಾನಿಕೆರೆ ಹೇಮಾವತಿ ನೀರಿನಿಂದ ಭರ್ತಿಯಾದ ನಂತರ ಆ ನೀರನ್ನು ಜನವರಿ ತಿಂಗಳ ನಂತರವಷ್ಟೇ ಬಳಸಲು ತೀರ್ಮಾನಿಸಲಾಗಿದೆ, ಮುಂದಿನ ದಿನಗಳಲ್ಲಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವುದಿಲ್ಲ ಎಂದು ಹೇಳಿದರು.

ಪಾಲಿಕೆ ಸದಸ್ಯರಾದ ಗಿರಿಜಾ ಧನಿಯಾಕುಮಾರ್‌, ನಳಿನಾ ಇಂದ್ರಕುಮಾರ್‌, ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಮಹೇಶ್‌, ಎಇಇ ವಸಂತ್‌, ಸಹಾಯಕ ಎಂಜಿನಿಯರ್‌ ಗೀತಾ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಬ್ಟಾಕ ರವಿಶಂಕರ್‌, ತಾಪಂ ಸದಸ್ಯ ವಿಜಯಕುಮಾರ್‌, ಷಣ್ಮುಖಪ್ಪ, ಎಪಿಎಂಸಿ ಶಿವಕುಮಾರ್‌ ಹೆಬ್ಟಾಕ ಭಾಗದ ಮುಖಂಡರು ಇದ್ದರು.

ಟಾಪ್ ನ್ಯೂಸ್

BGT 2024-25: Australia’s leading pacer ruled out of Adelaide Test

BGT 2024-25: ಅಡಿಲೇಡ್‌ ಟೆಸ್ಟ್‌ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ

2-bng-crime

Bengaluru Crime: ಅತಿಯಾಗಿ ಮೊಬೈಲ್‌ ಬಳಸಿದಕ್ಕೆ ಪ್ರೇಯಸಿ ಹತ್ಯೆ?

Maharashtra; Gondia bus accident: PM announces compensation

Maharashtra; ಗೊಂಡಿಯಾ ಬಸ್‌ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ

ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Man arrested for giving Coast Guard information to Pakistan for Rs 200

Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-koratagere

ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ

hejjenu

Koratagere: ಕಂದಾಯ ಇಲಾಖೆ ಸಿಬ್ಬಂದಿ ಸೇರಿ ನಾಲ್ವರ ಮೇಲೆ ಹೆಜ್ಜೇನು ದಾಳಿ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BGT 2024-25: Australia’s leading pacer ruled out of Adelaide Test

BGT 2024-25: ಅಡಿಲೇಡ್‌ ಟೆಸ್ಟ್‌ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ

3-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ : 2 ವಿದ್ಯಾರ್ಥಿಗಳು ಸಾವು

2-bng-crime

Bengaluru Crime: ಅತಿಯಾಗಿ ಮೊಬೈಲ್‌ ಬಳಸಿದಕ್ಕೆ ಪ್ರೇಯಸಿ ಹತ್ಯೆ?

Naa Ninna Bidalare Movie Review

Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!

Maharashtra; Gondia bus accident: PM announces compensation

Maharashtra; ಗೊಂಡಿಯಾ ಬಸ್‌ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.