ಶುಕ್ರನ ಮೇಲೆ ನಮ್ಮದೇ ಅಧಿಕಾರ: ರಷ್ಯಾ
Team Udayavani, Sep 20, 2020, 6:15 AM IST
ಸಾಂದರ್ಭಿಕ ಚಿತ್ರ
ಮಾಸ್ಕೋ: ಶುಕ್ರನಲ್ಲಿ ಇತ್ತೀಚೆಗೆ ಜೀವಿಗಳ ಅಸ್ತಿತ್ವಕ್ಕೆ ಪೂರಕವಾಗಬಲ್ಲ ವಾತಾವರಣವಿದೆ ಎಂದು ಅಮೆರಿಕದ ಖಗೋಳ ಸಂಶೋಧಕರು ಪ್ರಕಟಿಸಿದ ಬೆನ್ನಲ್ಲೇ, ರಷ್ಯಾದ ಬಾಹ್ಯಾಕಾಶ ಸಂಶೋಧನಾ ಇಲಾಖೆಯ ಮುಖ್ಯಸ್ಥರು ಶುಕ್ರಗ್ರಹದ ಮೇಲೆ ರಷ್ಯಾದ ಅಧಿಕಾರವಿದೆ ಎಂದು ಹೇಳಿದ್ದಾರೆ.
ಮಾಸ್ಕೋದಲ್ಲಿ ಆಯೋಜಿಸಲಾಗಿರುವ ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಮಾತನಾಡಿದ ರಷ್ಯಾ ಬಾಹ್ಯಾಕಾಶ ಇಲಾಖೆಯ ಮುಖ್ಯಸ್ಥ ಡಿಮಿಟ್ರಿ ರೊಝೊಜೆನ್, “”60, 70 ಹಾಗೂ 80ರ ದಶಕದಲ್ಲೇ ರಷ್ಯಾದ ವಿಜ್ಞಾನಿಗಳು ಶುಕ್ರವನ್ನು ಯಶಸ್ವಿಯಾಗಿ ಅಧ್ಯಯನ ಮಾಡಿದ್ದರು. ಹಾಗಾಗಿ, ಆ ಗ್ರಹದ ಮೇಲೆ ರಷ್ಯಾದ ಸ್ವಾಯತ್ತ ಅಧಿಕಾರವಿದೆ” ಎಂದಿದ್ದಾರೆ.
“”ಸದ್ಯದಲ್ಲೇ ರಷ್ಯಾದಿಂದ ಶುಕ್ರಗ್ರಹ ಅಧ್ಯಯನಕ್ಕಾಗಿಯೇ ವಿಶೇಷ ಅಧ್ಯಯನವೊಂದನ್ನು ಯಾವುದೇ ಅಂತಾರಾಷ್ಟ್ರೀಯ ನೆರವಿಲ್ಲದೆ ಆರಂಭಿಸಲಿದೆ. ಸದ್ಯಕ್ಕೆ ಅಮೆರಿಕದ ಸಹಕಾರದೊಂದಿಗೆ ವೆನೆರಾ-ಡಿ ಎಂಬ ಬಾಹ್ಯಾಕಾಶ ಸಂಶೋಧನೆಯನ್ನು ಕೈಗೊಳ್ಳಲಾಗಿದ್ದು, ಅದು ಮುಗಿದ ನಂತರ ಶುಕ್ರಗ್ರಹದ ಅಧ್ಯಯನವನ್ನು ರಷ್ಯಾ ಆರಂಭಿಸಲಿದೆ” ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.