ಬಹುದಿನಗಳ ಬಳಿಕ ಸೆಟ್‌ಗೆ ಮರಳಿದ ಅಭಿಷೇಕ್; ಅಭಿಮಾನಿಗಳಿಗೆ ಜಾಗೃತಿ ಸಂದೇಶ
Team Udayavani, Sep 20, 2020, 3:55 PM IST
ಮುಂಬಯಿ: ಆರು ತಿಂಗಳ ಕೋವಿಡ್ ಬ್ರೇಕ್ ನ ನಂತರ ನಟ ಅಭಿಷೇಕ್ ಬಚ್ಚನ್ ಶೂಟಿಂಗ್ ಸೆಟ್‌ಗೆ ಮರಳಿದ್ದಾರೆ. ನಟ ಗುರು ಅವರು ಹಂಚಿಕೊಂಡಿರುವ ವೀಡಿಯೋ ಒಂದರಲ್ಲಿ ಶೂಟಿಂಗ್ ಸೆಟ್‌ಗೆ ಮರಳಿದ್ದು, ಮಾಸ್ಕ್ ಧರಿಸಿ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸುತ್ತಿರುವ ಅಭಿಷೇಕ್ ಬಚ್ಚನ್ ಅವರ ವೀಡಿಯೋ ಈಗ ವೈರಲ್ ಆಗಿದೆ. ಅರ್ಧಕ್ಕೆ ನಿಂತಿದ್ದ ದಿ ಬಿಗ್ ಬುಲ್ ಚಿತ್ರದ ಚಿತ್ರೀಕರಣ ಮತ್ತೆ ಆರಂಭಗೊಂಡಿದ್ದು ಅಭಿಷೇಕ್ ಸೆಟ್‌ಗೆ ಹಾಜರಾಗಿದ್ದಾರೆ.
ವೈರಲ್ ಆಗಿರುವ ವೀಡಿಯೋದಲ್ಲಿ ಅಭಿಷೇಕ್ ಮಾಸ್ಕ್ ಧರಿಸಿ ಮಾತನಾಡಿದ್ದಾರೆ. ” ನೀವೆಲ್ಲ ಚೆನ್ನಾಗಿ ಮತ್ತು ಸುರಕ್ಷಿತವಾಗಿದ್ದೀರೆಂದು ಭಾವಿಸುತ್ತೇನೆ. ಬಾಕಿ ಉಳಿದಿದ್ದ ದೃಶ್ಯದ ಚಿತ್ರಿಕರಣಕ್ಕಾಗಿ ದಿ ಬಿಗ್ ಬುಲ್ ಚಿತ್ರದ ಸೆಟ್‌ಗೆ ನಾನು ಮತ್ತೆ ಹಾಜರಾಗಿದ್ದೇನೆ. ಹೊರಗಡೆ ಹೋಗುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. ಮಾಸ್ಕನ್ನು ಸರಿಯಾಗಿ ಧರಿಸಿ, ಜಾಗ್ರತೆ ವಹಿಸಿ ಮತ್ತು ಆರೋಗ್ಯವಾಗಿರಿ’ ಎಂದು ಅಭಿಮಾನಿಗಳಲ್ಲಿ ಮನವಿ ಮಡಿದ್ದಾರೆ.
ಅಭಿಷೇಕ್ ಅವರಿಗೆ ಜುಲೈ 11ರಂದು ಕೋವಿಡ್ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಆಗಸ್ಟ್ 8ರಂದು ಪರೀಕ್ಷಾ ವರದಿ ಕೋವಿಡ್ ನೆಗೆಟಿವ್ ವರದಿ ಬಂದು ಗುಣಮುಖರಾಗಿದ್ದರು.
ಇದನ್ನೂ ಓದಿ: ಅಬ್ಬಾ ಡೇಂಜರ್ ಝೋನ್ ದಾಟಿದೆವು! ವಿನಾಶದ ಅಂಚಿನಿಂದ ಪಾರಾದ 73 ಜೀವಿಗಳ ನಿಟ್ಟುಸಿರು
ಈ ಹಿಂದೆ ಅಭಿಷೇಕ್ ತಮ್ಮ ದಿ ಬಿಗ್ ಬುಲ್ ಚಿತ್ರವನ್ನು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ವಿಐಪಿಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಈ ಚಿತ್ರಕ್ಕೆ ಅಜಯ ದೇವಗನ್ ಮತ್ತು ಆನಂದ್ ಪಂಡಿತ್ ಅವರು ಬಂಡವಾಳ ಹೂಡಿದ್ದಾರೆ. ನಟಿ ಇಲಿಯಾನ್ ಡಿ’ಕ್ರೂಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿ ಬಿಗ್ ಬುಲ್ ಚಿತ್ರವು ಅನೇಕ ಹಣಕಾಸು ಪ್ರಕರಣಗಳಲ್ಲಿ ಭಾಗಿಯಾಗಿರುವ ಸ್ಟಾಕ್ ಬ್ರೋಕರ್ ಹರ್ಷದ್ ಮೆಹ್ತಾ ಅವರ ಕಥೆಯನ್ನು ಆಧರಿಸಿ ಮಾಡಲಾಗಿದೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
Raj Kapoor: ಪಾಕಿಸ್ತಾನದಲ್ಲಿ ಬಾಲಿವುಡ್ ನಟ ದಿ. ರಾಜ್ ಕಪೂರ್100ನೇ ಜನ್ಮದಿನ ಆಚರಣೆ
UI Movie: ಉಪ್ಪಿ ʼಯುಐʼ ಟ್ರೇಲರ್ ನೋಡಿ ಬಾಲಿವುಡ್ ನಟ ಆಮಿರ್ ಖಾನ್ ಶಾಕ್.!
MUST WATCH
ಹೊಸ ಸೇರ್ಪಡೆ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Bettampady: ಶಾಲಾ ಮಕ್ಕಳಿಂದ ಮನೆಯಲ್ಲಿ ಭತ್ತದ ಕೃಷಿ ಅಭಿಯಾನ ಯಶಸ್ವಿ
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.