ವಿವಿಯಲ್ಲಿ ಶೀಘ್ರವೇ ಮಹಿಳಾ ವಸ್ತು ಸಂಗ್ರಹಾಲಯ

Team Udayavani, Sep 20, 2020, 6:06 PM IST

ವಿವಿಯಲ್ಲಿ ಶೀಘ್ರವೇ ಮಹಿಳಾ ವಸ್ತು ಸಂಗ್ರಹಾಲಯ

ವಿಜಯಪುರ: ಮಹಿಳಾ ಸಬಲೀಕರಣಕ್ಕಾಗಿ ಜನ್ಮ ತಳೆದಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಕೆಲ ತಿಂಗಳಲ್ಲಿ ದೇಶದಲ್ಲೇ ವಿಶಿಷ್ಟವಾದ ಮಹಿಳಾ ವಸ್ತು ಸಂಗ್ರಹಾಲಯ ಕಾರ್ಯಾರಂಭ ಮಾಡಲಿದೆ ಎಂದು ಹಂಗಾಮಿ ಕುಲಪತಿ ಪ್ರೋ| ಓಂಕಾರ ಕಾಕಡೆ ಪ್ರಕಟಿಸಿದರು.

ಶನಿವಾರ ನಡೆದ ವಿವಿಯ 11ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ವಿಷಯ ತಜ್ಞರು ವಸ್ತು ಸಂಗ್ರಹಾಲ ಯದ ರೂಪುರೇಷೆಗಳ ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಈ ಯೋಜನೆಯಲ್ಲಿ ಮಹಿಳೆಯರ ಜ್ಞಾನ, ಕೌಶಲ್ಯ, ಸಮಾಜಕ್ಕೆ ನೀಡಿದ ಕೊಡುಗೆ ಬಿಂಬಿಸಲಾಗುತ್ತಿದೆ. ಇದಕ್ಕಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಬಹುತೇಕ ಮುಕ್ತಾಯದ ಹಂತದಲ್ಲಿದೆ ಎಂದರು.

ಈಗಾಗಲೇ ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಿಸಿರುವ ಶಿಲೊ³àದ್ಯಾನದಲ್ಲಿ ಗ್ರಾಮೀಣ ಬದುಕು ಬಿಂಬಿಸುವಕಲಾಕೃತಿಗಳು, ಸಾಧಕ ಮಹಿಳೆಯರೊಂದಿಗೆ ಹಳ್ಳಿ ಮಹಿಳೆಯರು ಜನ ಜೀವನದ ಮಾದರಿಗಳು ಗಮನ ಸೆಳೆದಿದೆ. ಈ ಭಾಗದಲ್ಲಿ ಇಂತಹ ಕಲಾಕೃತಿಗಳು ವಿಶೇಷವಾಗಿದ್ದು ಗ್ರಾಮೀಣ ಮಹಿಳಾ ಬದುಕನ್ನು ಪರಿಚಯಿಸುತ್ತಿವೆ ಎಂದರು.

ಉತ್ತಮವಾದ ಶೈಕ್ಷಣಿಕ ಚಟುವಟಿಕೆಗಳಿಗೆ ಮೂಲಸೌಕರ್ಯಗಳು ಅವಶ್ಯಕ ಎಂಬುದನ್ನು ವಿಶ್ವವಿದ್ಯಾಲಯ ಮನಗಂಡಿದ್ದು ಕಳೆದ ಸಾಲಿನಲ್ಲಿ ವಿಶ್ವವಿದ್ಯಾಲಯ ಕೆಲವು ಮಹತ್ವದ ಮೂಲಭೂತ ಸೌಕರ್ಯ ಕಾರ್ಯ ಕೈಗೆತ್ತಿಕೊಂಡಿದೆ. ಹೊಸ ಕಟ್ಟಡಗಳ ನಿರ್ಮಾಣ, ಹಳೆ ಕಟ್ಟಡಗಳ ದುರಸ್ತಿ ಕಾರ್ಯ, ಪ್ರಯೋಗಾಲಯಗಳ ಉನ್ನತೀಕರಣಕ್ಕೆ ಪಾರದರ್ಶಕವಾಗಿ ರೂಸಾ ಅನುದಾನಬಳಸಿಕೊಳ್ಳಲಾಗಿದೆ. ಶಿಕ್ಷಣ, ದೈಹಿಕ ಶಿಕ್ಷಣ, ವಿದ್ಯುನ್ಮಾನ ವಿಭಾಗಗಳು ತಮ್ಮ ಸ್ವಂತ ಕಟ್ಟಡಗಳಲ್ಲಿ ಕಾರ್ಯ ಮಾಡಲಾರಂಭಿಸಿವೆ.ಗ್ರಂಥಾಲಯ ಕಟ್ಟಡದ ವಿಸ್ತರಣಾ  ಕಾಮಗಾರಿ ಮುಕ್ತಾಯಗೊಂಡಿದೆ. ಇದು ಆಡಳಿತಾತ್ಮಕ, ವಿದ್ಯಾರ್ಥಿನಿಯರ ಶೈಕ್ಷಣಿಕ ದೃಷ್ಟಿಯಿಂದ ಅನುಕೂಲವಾಗಿದೆ. ಇದನ್ನು ಸಾಕಾರಗೊಳಿಸಿದ ಹಿಂದಿನ ಕುಲಪತಿ ಪ್ರೊ| ಸಬಿಹಾ ಭೂಮಿಗೌಡ ಶ್ರಮ ಇಲ್ಲಿ ಸ್ಮರಣೀಯ ಎಂದರು. ಸಮಾಜ ಕಲ್ಯಾಣ ಇಲಾಖೆಯ 8 ಕೋಟಿ ರೂ. ಅನುದಾನದಲ್ಲಿ ಅರ್ಧಕ್ಕೆ ನಿಂತಿದ್ದ ಬೃಹತ್‌ ಸಭಾಂಗಣದ ಕಾಮಗಾರಿ ಇದೀಗ ಪೂರ್ಣಗೊಂಡಿದ್ದು ಡಾ| ಬಿ.ಆರ್‌. ಅಂಬೇಡ್ಕರ್‌ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದರು.

ವಿಶ್ವವಿದ್ಯಾಲಯದ ಜ್ಞಾನಶಕ್ತಿ ಆವರಣದಲ್ಲಿ ರಾಸಾಯನ ಶಾಸ್ತ್ರ ವಿಭಾಗ, ಸಸ್ಯಶಾಸ್ತ್ರ ವಿಭಾಗ, ವಸತಿ ನಿಲಯ, ಹಿಂದಿ ಭವನ ಮುಂತಾದ ಕಟ್ಟಡಗಳನ್ನು ಉದ್ಘಾಟಿಸಲಾಗಿದೆ. ವಿಶ್ವವಿದ್ಯಾಲಯದ ಜ್ಞಾನಶಕ್ತಿ ಆವರಣದಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ವಸತಿ ನಿಲಯದಲ್ಲಿ ಹೊಸದಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಲಾಗಿದೆ. ಮಂಡ್ಯ ವಿಸ್ತರಣಾ ಕೇಂದ್ರದ ಆಡಳಿತ ಕಟ್ಟಡ 5 ಕೋಟಿ ರೂ. ಅನುದಾನದ ಕಾಮಗಾರಿಗಳು ಪ್ರಗತಿಯಲ್ಲಿವೆ. 13 ಕೋಟಿ ರೂ. ವೆಚ್ಚದಲ್ಲಿ ಸಿಂಧನೂರು ಆಡಳಿತ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿವೆ ಎಂದರು.

ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ ಪದವಿಯ 5, 6ನೇ ಸೆಮಿಸ್ಟರ್‌ ಗೆ ಕನ್ನಡ ಮತ್ತು ಇಂಗ್ಲಿಷ್‌ನ 12 ಭಾಷಾ ಪಠ್ಯಪುಸ್ತಕ ಪ್ರಕಟಿಸಿದೆ. ಪದವಿ ಭಾಷಾ ಕನ್ನಡ ಮತ್ತು ಇಂಗ್ಲಿಷ್‌, ಪ್ರಸ್ತುತ ಪದವಿಯ 1 ಮತ್ತು 2ನೇ ಸೆಮಿಸ್ಟರ್‌ ಹಿಂದಿ ಭಾಷಾ ಪಠ್ಯಪುಸ್ತಕ ಪ್ರಕಟಗೊಂಡಿವೆ. ಉಳಿದ ಸೆಮಿಸ್ಟರ್‌ನ ಪಠ್ಯಗಳು ಮುದ್ರಣ ಹಂತದಲ್ಲಿವೆ ಎಂದು ವಿವರಿಸಿದರು.

ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ ಪದವಿಯ 5, 6ನೇ ಸೆಮಿಸ್ಟರ್‌ಗೆ ಕನ್ನಡ ಮತ್ತು ಇಂಗ್ಲಿಷ್‌ನ 12 ಭಾಷಾ ಪಠ್ಯಪುಸ್ತಕ ಪ್ರಕಟಿಸಿದೆ. ಪದವಿ ಭಾಷಾ ಕನ್ನಡ ಮತ್ತು ಇಂಗ್ಲಿಷ್‌, ಪ್ರಸ್ತುತ ಪದವಿಯ 1 ಮತ್ತು 2ನೇ ಸೆಮಿಸ್ಟರ್‌ ಹಿಂದಿ ಭಾಷಾ ಪಠ್ಯಪುಸ್ತಕ ಪ್ರಕಟಗೊಂಡಿವೆ. ಉಳಿದ ಸೆಮಿಸ್ಟರ್‌ನ ಪಠ್ಯಗಳು ಮುದ್ರಣ ಹಂತದಲ್ಲಿವೆ. -ಓಂಕಾರ ಕಾಕಡೆ, ಪ್ರಭಾರ ಕುಲಪತಿ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Arrested: ವಿಜಯಪುರ ಪೊಲೀಸರ ಯಶಸ್ವಿ ಕಾರ್ಯಾಚರಣೆ: ಅಂತರಾಜ್ಯ ನಾಲ್ವರು ಕಳ್ಳರ ಬಂಧನ

Arrested: ವಿಜಯಪುರ ಪೊಲೀಸರ ಯಶಸ್ವಿ ಕಾರ್ಯಾಚರಣೆ: ಅಂತರಾಜ್ಯ ನಾಲ್ವರು ಕಳ್ಳರ ಬಂಧನ

Vijayapura; ಯತ್ನಾಳ ಭಾವಚಿತ್ರವಿದ್ದ ಬೆಂಬಲಿಗರ ಬ್ಯಾನರ್ ಹರಿದ ಕಿಡಿಗೇಡಿಗಳು

Vijayapura; ಯತ್ನಾಳ ಭಾವಚಿತ್ರವಿದ್ದ ಬೆಂಬಲಿಗರ ಬ್ಯಾನರ್ ಹರಿದ ಕಿಡಿಗೇಡಿಗಳು

dw

Muddebihal: ಬೈಕ್ ವ್ಹೀಲಿಂಗ್ ನಾಲ್ವರು ಯುವಕರ ಬಲಿ

Yathanal

Ganesh Festival: ಪ್ರಸಾದಕ್ಕೆ ಪರವಾನಗಿ: ಹಿಂದೂ ಹಬ್ಬಗಳ ಹತ್ತಿಕ್ಕುವ ಪ್ರಯತ್ನ: ಯತ್ನಾಳ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.