ಕೋಲಾರ : ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯವಿವಾಹ ಸದ್ದು

ಸಾಂದರ್ಭಿಕ ಚಿತ್ರ

Team Udayavani, Sep 21, 2020, 4:17 PM IST

br-tdy-1

ಕೋಲಾರ: ಜಿಲ್ಲೆಯಲ್ಲಿ ಹಿಂದಿನ ವರ್ಷದಲ್ಲಿ ಪತ್ತೆಯಾಗಿದ್ದ ಬಾಲ್ಯವಿವಾಹಗಳಿಗಿಂತಲೂ ಒಂದೂವರೆ ಪಟ್ಟು ಹೆಚ್ಚು ಬಾಲ್ಯ ವಿವಾಹಗಳು ಈ ವರ್ಷದ ಕೋವಿಡ್‌-19 ಅವಧಿಯ ನಾಲ್ಕು ತಿಂಗಳುಗಳಲ್ಲಿಯೇ ಪತ್ತೆಯಾಗಿದೆ.

2019-20 ಏಪ್ರಿಲ್‌1 ರಿಂದ ಮಾರ್ಚ್‌ಅಂತ್ಯದವರೆವಿಗಿನ ಹನ್ನೆರೆಡು ತಿಂಗಳುಗಳಲ್ಲಿ 39 ಬಾಲ್ಯ ವಿವಾಹಗಳು ಕೋಲಾರ ಜಿಲ್ಲೆಯಲ್ಲಿ ಪತ್ತೆಯಾಗಿದ್ದರೆ,2020 ರ ಏಪ್ರಿಲ್‌ ನಿಂದ ಆಗಸ್ಟ್‌ವರೆಗೂ 61 ಬಾಲ್ಯ ವಿವಾಹಗಳು ಪತ್ತೆಯಾಗಿರುವುದು ವಿಶೇಷ.

ತಾಲೂಕುವಾರು: ಕೋಲಾರ ಜಿಲ್ಲೆಯಲ್ಲಿ ಏಪ್ರಿಲ್‌2020ರಿಂದ ಆಗಸ್ಟ್‌ ಅಂತ್ಯದ ವರೆಗೂ 61 ಬಾಲ್ಯ ವಿವಾಹಗಳು ಪತ್ತೆಯಾಗಿದ್ದು, ಬಂಗಾರಪೇಟೆ ತಾಲೂಕಿನಲ್ಲಿ 8, ಬೇತಮಂಗಲದಲ್ಲಿ8,ಕೋಲಾರದಲ್ಲಿ14,ಮಾಲೂರಿನಲ್ಲಿ5, ಮುಳಬಾಗಿಲಿನಲ್ಲಿ 12 ಹಾಗೂ ಶ್ರೀನಿವಾಸಪುರದಲ್ಲಿ 14 ಬಾಲ್ಯವಿವಾಹ ಪತ್ತೆ ಹಚ್ಚಲಾಗಿದೆ.

ಎರಡು ಎಫ್ಐಆರ್‌: ಪತ್ತೆಯಾಗಿರುವ 59 ಬಾಲ್ಯ ವಿವಾಹಗಳನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ನೇತೃತ್ವದ ತಂಡ ತಡೆದಿದ್ದು, ಈಗಾಗಲೇ ವಿವಾಹ ಆಗಿದ್ದ ಎರಡು ಪ್ರಕರಣಗಳಲ್ಲಿ ಎಫ್ಐಆರ್‌ ದಾಖಲಿಸಲಾಗಿದೆ. ಕೋಲಾರ ಜಿಲ್ಲೆಯ ಬೇತಮಂಗಲಠಾಣೆಹಾಗೂ ಮಾಲೂರು ತಾಲೂಕಿನ ಲಕ್ಕೂರು ವ್ಯಾಪ್ತಿಯಲ್ಲಿ ಪ್ರಕರಣಗಳು ಎಫ್ಐಆರ್‌ ದಾಖಲಾಗಿ ತನಿಖೆ ಮುಂದು ವರಿಯುತ್ತಿದೆ. ಎರಡೂ ಪ್ರಕರಣಗಳಲ್ಲಿ ಅಪ್ರಾಪ್ತೆ ಯನ್ನು ಕೆಜಿಎಫ್ ಬಾಲಮಂದಿರಕ್ಕೆ ಸೇರಿಸಲಾಗಿದೆ. ಶ್ರೀನಿವಾಸಪುರ ತಾಲೂಕಿನ ಮತ್ತೂಂದು ಪ್ರಕರಣ ಎಫ್ಐಆರ್‌ ದಾಖಲಾಗುವ ಹಂತದಲ್ಲಿದೆ.

ಜನ ಜಾಗೃತಿ: ಬಾಲ್ಯ ವಿವಾಹಗಳನ್ನು ತಡೆಗಟ್ಟುವ ವಿಚಾರದಲ್ಲಿ ವ್ಯಾಪಕ ಮುಂಜಾಗ್ರತಾ ಜಾಗೃತಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಚೈಲ್ಡ್‌ ಲೈನ್‌ ಸಹಕಾರದಿಂದ ಬಾಲ್ಯ ವಿವಾಹ ಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಶಾಲಾ ಮತ್ತು ಹಾಸ್ಟೆಲ್‌ ಹಂತದಲ್ಲಿ ಬಾಲ್ಯ ವಿವಾಹ ಆಗುವುದಿಲ್ಲವೆಂಬ ಪ್ರತಿಜ್ಞೆ ಸ್ವೀಕಾರ ನಡೆಸಲಾಗುತ್ತಿದೆ. ಬಾಲ್ಯ ವಿವಾಹ ಪತ್ತೆಯಾದಲ್ಲಿ ತಕ್ಷಣ ಮಕ್ಕಳ ಸಹಾಯವಾಣಿ 1098 ಗೆ ದೂರು ನೀಡಲುಸೂಚಿಸಲಾಗಿದೆ.

ಸ್ವಯಂ ಪ್ರೇರಿತ ಎಫ್ ಐಆರ್‌: ಬಾಲ್ಯ ವಿವಾಹ ನಿಷೇಧ ಕಾಯ್ದೆ 2016 ಕ್ಕೆ ತಿದ್ದುಪಡಿ ಆದ ನಂತರ ಬಾಲ್ಯ ವಿವಾಹಗಳನ್ನು ಮಕ್ಕಳ ರಕ್ಷಣಾಧಿಕಾರಿ ತಂಡ ಮಾತ್ರವೇ ಎಫ್ಐಆರ್‌ ದಾಖಲಿಸಬೇಕಾಗಿಲ್ಲ, ಪೊಲೀಸ್‌, ಗ್ರಾಪಂ ಪಿಡಿಒ, ಗ್ರಾಮ ಲೆಕ್ಕಿಗರು, ಆಯಾ ಶಾಲಾ ಮುಖ್ಯ ಶಿಕ್ಷಕರು ಸಹ ಎಫ್ಐಆರ್‌ ದಾಖಲಿಸಬಹುದಾಗಿದೆ. ಬಾಲ್ಯ ವಿವಾಹ ಸಂಬಂಧ ಸ್ವಯಂ ಪ್ರೇರಿತವಾಗಿಯೇಪ್ರಕರಣದಾಖಲಿಸಿಕೊಳ್ಳಬಹುದಾಗಿದೆ. ಕಾರಣಗಳು: ಬಹುತೇಕ ಬಾಲ್ಯ ವಿವಾಹಗಳು ಬಡತನ ಕಾರಣಕ್ಕೆ ನಡೆಯುತ್ತಿದೆ. ಬಡ ಕುಟುಂಬ ಗಳಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಸಮಸ್ಯೆ ಹಾಗೂ ಹೆಣ್ಣು ಮಕ್ಕಳನ್ನು ಓದಿಸಲು ಆರ್ಥಿಕ ಸಾಮರ್ಥ್ಯವಿಲ್ಲದೆ ಮದುವೆ ಮಾಡಿ ಕಳುಹಿಸುವಮನಸ್ಥಿತಿಏರ್ಪಡುತ್ತಿದೆ.ಹೆಣ್ಣು ಮಕ್ಕಳು ಋತು ಮತಿ ಯಾಗು ತ್ತಿದ್ದಂ ತೆಯೇ ಮದುವೆ ಮಾಡ ಬಹುದು ಎಂಬ ಧಾರ್ಮಿಕ ನಂಬಿಕೆ ಬಾಲ್ಯ ವಿವಾಹಗಳನ್ನು ಹೆಚ್ಚಿಸುತ್ತಿದೆ.

ಮುಂದೇನು?: ಬಾಲ್ಯ ವಿವಾಹ ಪ್ರಕರಣಗಳಲ್ಲಿ ಪತ್ತೆಯಾದ ಬಹುತೇಕ ಹೆಣ್ಣು ಮಕ್ಕಳಿಗೆ ಬಾಲ ಮಂದಿರದಲ್ಲಿಯೇ ಅನೌಪಚಾರಿಕವಾಗಿ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ಕಲ್ಪಿಸಲಾಗುತ್ತಿದೆ. ಇಂತ ಹೆಣ್ಣು ಮಕ್ಕಳ ಭವಿಷ್ಯತ್ತು ರೂಪಿಸಲು ಪ್ರಾಯೋಜಕ ಪೋಷಕರನ್ನು ಹುಡುಕಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ವೃತ್ತಿ ಕೌಶಲ್ಯ ತರಬೇತಿ ನೀಡಲು ಕ್ರಿಯಾ ಯೋಜನೆಯೊಂದನ್ನುಜಿಲ್ಲಾ ಮಟ್ಟದಲ್ಲಿ ರೂಪಿಸಲಾಗುತ್ತಿದೆ. ಕಣ್ತಪ್ಪಿ ಹೋದ ಬಾಲ್ಯವಿವಾಹಗಳು: ಕೋಲಾರ ಜಿಲ್ಲೆ ಯಲ್ಲಿಈ ವರ್ಷ 61ಬಾಲ್ಯ ವಿವಾಹಗಳು ಪತ್ತೆಯಾಗಿದ್ದು, ಇವು ಮಕ್ಕಳ ರಕ್ಷಣಾಧಿಕಾರಿಗಳ ಗಮನಕ್ಕೆ ಬಂದಿವೆ. ಆದರೆ, ಇವರ ಗಮನಕ್ಕೆ ಬಾರದೆಯೇ ಮದುವೆಯಾಗಿರುವ ಅದೆಷ್ಟೋ ಪ್ರಕರಣಗಳು ಇನ್ನೂ ಪತ್ತೆಯಾಗದೆ ಇರಬಹುದಾದ ಸಾಧ್ಯತೆಗಳು ಹೆಚ್ಚಾಗಿವೆ.

‌ಮನೆಗೆ ಹೋಗದ ಬಾಲಕಿ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಅಲೆಮಾರಿ ಅಪ್ರಾಪೆ¤ಗೆ ಬಾಲ್ಯವಿವಾಹ ಮಾಡುವುದನ್ನು ತಡೆಗಟ್ಟಲಾಗಿದೆ. ಈ ಯುವತಿಗೆ ಓದಿನಲ್ಲಿ ಅಪಾರ ಆಸಕ್ತಿ, ಈಕೆ ಶಾಲೆಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗುತ್ತಿದ್ದರು. ಇದೀಗ ಬಾಲ ಮಂದಿರದಲ್ಲಿರುವ ಈ ಯುವತಿಯನ್ನು ಬಿಡಿಸಲು ಪೋಷ ಕರು ಎಲ್ಲಾ ರೀತಿಯ ಒತ್ತಡಗಳನ್ನು ಹಾಕಿಸಿದ್ದರು. ಆದರೆ, ಬಾಲಕಿಯೇ ಖುದ್ದು ತಾನು ಓದುವ ನಿರ್ಧಾರ ತೆಗೆದುಕೊಂಡು ಮನೆಗೆ ಹೋಗದೆಬಾಲಮಂದಿರದಲ್ಲಿಯೇ ವ್ಯಾಸಂಗ ಮುಂದು ವರಿಸುತ್ತಿರುವುದು ವಿಶೇಷವೆನಿಸಿದೆ.

ಬಾಲ್ಯ ವಿವಾಹ ತಡೆಗಟ್ಟುವ ಅಧಿಕಾರಿಗಳೆಂದು ಗುರುತಿಸಿಕೊಂಡಿರುವ ಪೊಲೀಸ್‌, ಮುಖ್ಯ ಶಿಕ್ಷಕರು, ಪಿಡಿಒಗಳು,ಕಂದಾಯಾಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದಕೆಲಸ ಮಾಡಿದರೆ ಮತ್ತಷ್ಟು ಪರಿಣಾಮಕಾರಿಯಾಗಿ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಚೌಡಪ್ಪ, ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ

ಪತ್ತೆಗೆ ಹಚ್ಚಲು ತೊಡಕು :  ಕೋಲಾರ ಜಿಲ್ಲೆಯು ಆಂಧ್ರಪ್ರದೇಶ ಹಾಗೂ ತಮಿಳು ನಾಡು ಗಡಿ ಹೊಂದಿರುವುದರಿಂದ ಬಾಲ್ಯ ವಿವಾಹಗಳು ಆಗಿ ಹೊರ ರಾಜ್ಯಕ್ಕೆ ಹೋಗುವುದು ಹಾಗೂ ಹೊರ ರಾಜ್ಯದಲ್ಲಿ ಬಾಲ್ಯ ವಿವಾಹವಾಗಿ ಜಿಲ್ಲೆಗೆ ಬರುವ ಪ್ರಕರಣಗಳು ಪತ್ತೆ ಹಚ್ಚುವುದು ಸಮಸ್ಯೆಯಾಗುತ್ತಿದೆ. ಬಾಲ್ಯವಿವಾಹಗಳನ್ನು ಪತ್ತೆ ಹಚ್ಚಿದರೂ ಎಫ್ಐಆರ್‌ ದಾಖಲಿಸಲು ಪೊಲೀಸರು ಸಾಕ್ಷ್ಯಾಧಾರಗಳನ್ನು ಹುಡುಕಿಕೊಡಿ ಎನ್ನುತ್ತಿರುವುದು. ಶೀಘ್ರ ಶಿಕ್ಷೆ ವಿಧಿಸಿ, ದಂಡ ಹಾಕಲು ಅವಕಾಶ ಇಲ್ಲದಿರುವುದು ಬಾಲ್ಯವಿವಾಹದ ತೊಡಕುಗಳಾಗಿವೆ.

ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಸಾರ್ವಜನಿಕರು ಹಾಗೂ ಎಲ್ಲಾ ಇಲಾಖೆಗಳ ಸ್ಪಂದನೆ ಅತ್ಯಗತ್ಯ. ಬಾಲ್ಯವಿವಾಹದಲ್ಲಿ ಪತ್ತೆಯಾದಯುವತಿಯರ ಭವಿಷ್ಯ ರೂಪಿಸುವಂತ ವೃತ್ತಿಕೌಶಲ್ಯ ಕಾರ್ಯಕ್ರಮಗಳ ತರಬೇತಿ ನೀಡಲು ಸದ್ಯಕ್ಕೆ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ. -ಎಂ.ರಮೇಶ್‌, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

-ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TDP ಮುಖಂಡನ ಹತ್ಯೆಗೆ ನೆರವು: ಇಬ್ಬರು ಪೊಲೀಸರ ಅಮಾನತು

Ration Card: 1.25 ಲಕ್ಷ ಪಡಿತರ ಚೀಟಿ ಅನರ್ಹ ಸಾಧ್ಯತೆ!

Ration Card: 1.25 ಲಕ್ಷ ಪಡಿತರ ಚೀಟಿ ಅನರ್ಹ ಸಾಧ್ಯತೆ!

14-bng

Kolar: 1.25 ಲಕ್ಷ ಅನರ್ಹ ಬಿಪಿಎಲ್‌ ಕಾರ್ಡ್‌ಗಳು ಪತ್ತೆ

CM-Dineh

Eagles Eye: ಭ್ರೂಣಲಿಂಗ ಪತ್ತೆ ತಡೆಗೆ ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ನಿಗಾ: ದಿನೇಶ್‌

Benga-Club

Bengaluru Press Club: ಸುದ್ದಿಗೋಷ್ಠಿ ನಡುವೆಯೇ ಮೃತಪಟ್ಟ ಕಾಂಗ್ರೆಸ್‌ ಕಾರ್ಯಕರ್ತ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.