ಜನ ಕಲ್ಯಾಣ ಎಂಜಿನಿಯರ್ ಶ್ರೀ ಪ್ರಶಸ್ತಿ ಪ್ರದಾನ
Team Udayavani, Sep 21, 2020, 6:23 PM IST
ಸಾಂದರ್ಭಿಕ ಚಿತ್ರ
ಸುರಪುರ: ವಿಶ್ವ ಕಂಡ ಮಹಾನ್ ಎಂಜಿನಿಯರ್ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ, ಅವರ ತತ್ವ, ಸಿದ್ದಾಂತ, ಆದರ್ಶ ಹಾಗೂ ತಂತ್ರಜ್ಞಾನವನ್ನು ಎಂಜಿನಿಯರ್ ಗಳು ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಮಾದರಿಯಾಗಬೇಕು ಎಂದು ಶ್ರೀಗಿರಿ ಮಠದ ಪೀಠಾಧಿಪತಿ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ತಾಲೂಕಿನ ಲಕ್ಷಿ¾àಪುರ ಗ್ರಾಮದ ಶ್ರೀಗಿರಿ ಮಠದ ಆವರಣದಲ್ಲಿ ಎಂಜನಿಯರ್ ದಿನಾಚರಣೆ ನಿಮಿತ್ತ ಶ್ರೀ ಗುರು ಪುಟ್ಟರಾಜ ಜನ ಕಲ್ಯಾಣ ಸೇವಾ ಸಮಿತಿ ಹಮ್ಮಿಕೊಂಡಿದ್ದ ಎಂಜನಿಯರ್ ಶ್ರೀ-2020 ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸರ್ ಎಂ. ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ದಿವಾನ್ ಸೇರಿದಂತೆ ನಾನಾ ಹುದ್ದೆಗಳನ್ನು ನಿರ್ವಹಿಸಿದ್ದರು. ಮೈಸೂರು, ಬೆಂಗಳೂರು ವಿಶ್ವ ವಿದ್ಯಾಲಯ,ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಂಬಾಡಿ ಅಣೆಕಟ್ಟೆ, ಕನ್ನಡ ಸಾಹಿತ್ಯ ಪರಿಷತ್, ವಿಐಎಸ್ ಎಲ್, ಎಂಪಿಎಂ ಸಂಸ್ಥೆಗಳನ್ನು ಹುಟ್ಟು ಹಾಕುವ ಮೂಲಕ ನಾಡಿನ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದರು.
ರಾಜ್ಯ ಜಾನಪದ ಆಕಾಡೆಮಿ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ, ಚಿಂತಕ ಲಕ್ಷ್ಮೀಕಾಂತ ದೇವರ ಗೋನಾಲ ಮತ್ತು ಗುಲ್ಬರ್ಗ ವಿವಿ ಸೀಡಿಕೇಟ್ ಸದಸ್ಯ ಗಂಗಾಧರ ನಾಯಕ ಮಾತನಾಡಿದರು. ಕೆಬಿಜೆಎನ್‌ಎಲ್ ಎಇ ಹುಸನಪ್ಪ ಎಚ್. ಕಟ್ಟಿಮನಿ, ವಿಜಯಕುಮಾರ ಆಲೆಮನಿ, ಸಂಪತಕುಮಾರ ಅವರಿಗೆ ಎಂಜಿನಿಯರ್ ಜನ ಕಲ್ಯಾಣ ಶ್ರೀ-2020 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.