![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Sep 21, 2020, 6:49 PM IST
ಮಂಡ್ಯ: ಜಿಲ್ಲೆಯಲ್ಲಿ ಸೋಮವಾರ 424 ಮಂದಿ ಕೋವಿಡ್ ನಿಂದ ಬಿಡುಗಡೆಯಾಗಿದ್ದರೆ, 102 ಮಂದಿಗೆ ಸೋಂಕು ಆವರಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಮಂಡ್ಯ ತಾಲ್ಲೂಕಿನ 75 ವರ್ಷದ ಹಾಗೂ ಮದ್ದೂರು ತಾಲ್ಲೂಕಿನ 70 ವರ್ಷದ ವೃದ್ಧರಿಬ್ಬರು ತೀವ್ರ ಉಸಿರಾಟದ ತೊಂದರೆ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರಿಂದ ಸಾವಿನ ಸಂಖ್ಯೆ 95ಕ್ಕೇರಿದೆ.
424 ಮಂದಿ ಕೋವಿಡ್ ನಿಂದ ಮುಕ್ತ:
ಸೋಮವಾರ ಬರೋಬ್ಬರಿ 424 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಮಂಡ್ಯ 109, ಮದ್ದೂರು 31, ಮಳವಳ್ಳಿ 34, ಪಾಂಡವಪುರ 143, ಶ್ರೀರಂಗಪಟ್ಟಣ 71, ಕೆ.ಆರ್.ಪೇಟೆ 11 ಹಾಗೂ ನಾಗಮಂಗಲದ 17 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೂ 7809 ಮಂದಿ ಗುಣಮುಖರಾಗಿದ್ದು, 1359 ಸಕ್ರಿಯ ಪ್ರಕರಣಗಳಿವೆ.
102 ಹೊಸ ಪ್ರಕರಣ:
ಮಂಡ್ಯ 31, ಮದ್ದೂರು 1, ಮಳವಳ್ಳಿ 13, ಪಾಂಡವಪುರ 7, ಶ್ರೀರಂಗಪಟ್ಟಣ 15, ಕೆ.ಆರ್.ಪೇಟೆ 18 ಹಾಗೂ ನಾಗಮಂಗಲದ 17 ಮಂದಿಗೆ ಸೋಂಕು ಆವರಿಸಿದೆ. ಇದರಿಂದ 9263 ಸೋಂಕಿತ ಪ್ರಕರಣಗಳು ದಾಖಲಾಗಿವೆ. ಸರ್ಕಾರಿ ಆಸ್ಪತ್ರೆಗಳ ಐಸೋಲೇಷನ್‌ನಲ್ಲಿ 371, ಖಾಸಗಿ ಆಸ್ಪತ್ರೆಗಳ ಐಸೋಲೇಷನ್‌ನಲ್ಲಿ 143, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 115 ಹಾಗೂ ಹೋಂ ಐಸೋಲೇಷನ್‌ನಲ್ಲಿ 730 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
1594 ಕೊರೊನಾ ಪರೀಕ್ಷೆ:
ಸೋಮವಾರ 1594 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. 266 ರ‍್ಯಾಪಿಡ್ ಹಾಗೂ 1328 ಮಂದಿ ಆರ್‌ಟಿಪಿಸಿಆರ್ ಪರೀಕ್ಷೆಗೊಳಪಟ್ಟಿದ್ದರು.
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.