ಹೆಚ್ಚುತ್ತಲೇ ಇದೆ ಆನ್‌ಲೈನ್‌ ವಂಚನೆ-ಸೈಬರ್‌ಕ್ರೈಂ

ಜನರಿಗೆ ಟೋಪಿ ಹಾಕಲು ವಂಚಕರಿಂದ ದಿನಕ್ಕೊಂದು ಐಡಿಯಾ,ದೂರು ದಾಖಲಿಸುವವರ ಸಂಖ್ಯೆಯಲ್ಲೂ ಏರಿಕೆ

Team Udayavani, Sep 21, 2020, 7:44 PM IST

ಹೆಚ್ಚುತ್ತಲೇ ಇದೆ ಆನ್‌ಲೈನ್‌ ವಂಚನೆ-ಸೈಬರ್‌ಕ್ರೈಂ

ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಅತಿಯಾಸೆ ಗತಿಗೇಡು ಎಂಬಂತೆ ಜನ ಎಷ್ಟೇ ಜಾಗೃತರಾಗಿದ್ದರೂ ಮೋಸದ ಜಾಲಕ್ಕೆ ಬಲಿಯಾಗುತ್ತಲೇ ಇದ್ದಾರೆ. ಆನ್‌ಲೈನ್‌ನಲ್ಲಿ ಬರುವ ಆಫರ್‌ಗಳ ಆಸೆಗೆ ಹಣ ಕಳೆದುಕೊಳ್ಳುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇವೆ. ಶಿವಮೊಗ್ಗದಲ್ಲಿ ಪ್ರತಿದಿನ ಹೊಸ ರೀತಿಯ ಆನ್‌ ಲೈನ್‌ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಲಾಕ್‌ ಡೌನ್‌ ಅವಧಿ ಯಲ್ಲೂ ಇಂತಹ ಪ್ರಕರಣಗಳ ಸಂಖ್ಯೆಕಡಿಮೆಯಾಗಿಲ್ಲ. ಹಿಂದೆ ಎಲ್ಲಿ ದೂರು ಕೊಡಬೇಕೆಂಬ ಗೊಂದಲ, ಹೆಸರು ಬಹಿರಂಗಗೊಳ್ಳುವ ಆತಂಕದಿಂದ ದೂರು ದಾಖಲಿಸುವವರ ಸಂಖ್ಯೆ ಕಡಿಮೆಯಾಗಿತ್ತು. ಪೊಲೀಸ್‌ ಇಲಾಖೆಯ ನಿರಂತರ ಜಾಗೃತಿ ಪರಿಣಾಮ ದೂರಿನ ಸಂಖ್ಯೆಯೂ ಹೆಚ್ಚಿದೆ. ಅಷ್ಟೇ ಅಲ್ಲ ಪರಿಹಾರವೂ ಸಿಗುತ್ತಿದೆ.

273 ಪ್ರಕರಣ-6.15 ಕೋಟಿ ವಂಚನೆ: 2018ನೇ ಸಾಲಿನಿಂದ ಈವರೆಗೆ ಜಿಲ್ಲೆಯಲ್ಲಿ 273 ಪ್ರಕರಣಗಳು ದಾಖಲಾಗಿದ್ದು 6.15 ಕೋಟಿ ರೂ. ವಂಚನೆ ನಡೆದಿದೆ. 2018ರಲ್ಲಿ 47, 2019ರಲ್ಲಿ 105, 2020ರಲ್ಲಿ (ಆಗಸ್ಟ್ ವರೆಗೆ) 121 ದೂರು ದಾಖಲಾಗಿದೆ. ಹಣ ವಂಚನೆ ಪ್ರಕರಣಗಳ ಜತೆಗೆ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಮಹಿಳೆಯ ಅಶ್ಲೀಲ ಚಿತ್ರ ಅಪ್‌ಲೋಡ್‌ ಮಾಡುವುದು ಹಾಗೂ ಲೈಂಗಿಕ ಕಿರುಕುಳ ನೀಡುವರರ ಮೇಲೆ 2018ರಲ್ಲಿ 1, 2019ರಲ್ಲಿ 14, 2020ರಲ್ಲಿ 16 ದೂರು ದಾಖಲಾಗಿವೆ. ಈಚೆಗೆ ಶುರುವಾಗಿರುವ ಸೈಬರ್‌ ಟಿಪ್‌ಲೈನ್‌ (ಮಕ್ಕಳ ಲೈಂಗಿಕ ಚಿತ್ರ ವೀಕ್ಷಣೆ) ಅಡಿ 6 ಪ್ರಕರಣಗಳು ದಾಖಲಾಗಿವೆ.

ಗಿಫ್ಟ್‌ ನಂಬಿ ಮೋಸ ಹೋಗಿರುವ ಕುರಿತು 2018ರಲ್ಲಿ 16, 2019ರಲ್ಲಿ 16, 2020ರಲ್ಲಿ 27 ಹಾಗೂ ಕೆಲಸ ಕೊಡಿಸುವ ಆಮಿಷಕ್ಕೆ ಸಂಬಂ ಧಿಸಿ 2018ರಲ್ಲಿ 10, 2019ರಲ್ಲಿ 13, 2020ರಲ್ಲಿ 1 ಪ್ರಕರಣ ದಾಖಲಾಗಿದೆ. ಇನ್ನು ಎಟಿಎಂ ಕಾರ್ಡ್‌ ಹಾಳಾಗಿದೆ, ನವೀಕರಣ ಮಾಡಲಾಗುವುದು ಹಾಗೂ ಇತರೆ ಆಮಿಷ ತೋರಿಸಿ ಒಟಿಪಿ ಪಡೆದು ವಂಚಿಸಿದ್ದಕ್ಕೆ ಸಂಬಂಧಿಸಿ 2018ರಲ್ಲಿ 20, 2019ರಲ್ಲಿ 62, 2020ರಲ್ಲಿ 15 ಪ್ರಕರಣ ದಾಖಲಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಅಶ್ಲೀಲ ´ೋಟೋ ಅಪ್‌ಲೋಡ್‌ ಮಾಡಿದ ಬಗ್ಗೆ 2018ರಲ್ಲಿ 1, 2019ರಲ್ಲಿ 14, 2020ರಲ್ಲಿ 16 ಪ್ರಕರಣ ದಾಖಲಾಗಿದೆ. ಓಎಲ್‌  ಎಕ್ಸ್‌ ಜಾಹೀರಾತು ನಂಬಿ ಕಡಿಮೆ ಬೆಲೆಗೆ ವಾಹನ ಖರೀದಿಗೆ ಮುಂದಾಗಿದ್ದ 16 ಮಂದಿ 2020ರಲ್ಲಿ ಹಣ ಕಳೆದುಕೊಂಡಿದ್ದಾರೆ.

ಹೊಸ-ಹೊಸ ಐಡಿಯಾ: ಜನ ಜಾಗೃತರಾದರೂ ವಂಚಕರು ಮಾತ್ರ ಹೊಸ ಹೊಸ ಐಡಿಯಾಗಳ ಮೂಲಕ ಟೋಪಿ ಹಾಕುತ್ತಲೇ ಇದ್ದಾರೆ. ಕೊರೊನಾ ಲಾಕ್‌ಡೌನ್‌ ಅವಧಿ ಯಲ್ಲಿ ಆರೋಗ್ಯ ಸೇತು ಆ್ಯಪ್‌ ಹೆಸರಲ್ಲಿ ಫೇಕ್‌ ಆ್ಯಪ್‌, ಸ್ಮಿಶಿಂಗ್‌ (ಎಸ್‌ಎಂಎಸ್‌), ವಿಶಿಂಗ್‌ (ಕರೆ), ಓಎಲ್‌ಎಕ್ಸ್‌, μಶಿಂಗ್‌(ಎಮೋಷನ್‌ ಚೀಟಿಂಗ್‌), ಐಟಿಎನ್‌ (ಕೊರೊನಾ ಹೆಸರಲ್ಲಿ ಬೇರೆ ಬೇರೆ ವೆಬ್‌ಸೈಟ್‌) ಮೂಲಕ ವಂಚನೆ ನಡೆದಿವೆ. ಬ್ಯಾಂಕ್‌ ಅಧಿಕಾರಿಗಳು, ಕೌನ್‌ ಬನೇಗಾ ಕರೋಡ್‌ ಪತಿ, ನನ್ನ ಬಳಿ ಅಪಾರ ಹಣವಿದೆ ಎಂದು ವಿದೇಶಿ ಯವತಿ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ವಂಚನೆ, ನಿಮಗೆ ಲಾಟರಿ ಬಂದಿದೆ, ವಿದೇಶದಿಂದ ನಿಮಗೆ ಚಿನ್ನ ಬಂದಿದೆ, ನಿಮ್ಮ ಶಾಲೆಗೆ ಸಹಾಯ ಮಾಡುವೆ ಹೀಗೆ ಹಲವು ಹೊಸ ಐಡಿಯಾ ಮಾಡಿ ಸುಂದರ ಯುವತಿಯರ ´ೋಟೋ, ವಿಡಿಯೋ ಬಳಸಿ ಜನರನ್ನು ಮೋಸದ ಬಲೆಗೆ ಬೀಳಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ.

ಹಣ ಫ್ರೀಜ್‌ ಮಾಡಿಸಿ: ನಕಲಿ ಜಾಹೀರಾತು, ಆಮಿಷ ನಂಬಿ ಮೋಸ ಹೋದವರು ತಕ್ಷಣ ಸಮೀಪದ ಪೊಲೀಸ್‌ ಠಾಣೆಗೆ ಹಾಗೂ ನಿಮ್ಮ ಬ್ಯಾಂಕ್‌ಗೆ ಕರೆ ಮಾಡಿ ವರ್ಗಾವಣೆಯಾದ ಹಣವನ್ನು  ಫ್ರೀಜ್ ‌ ಮಾಡಿಸಬಹುದು. ಈ ರೀತಿ ಫ್ರೀಜ್‌ ಆದ ಹಣ ಯಾವುದೇ ರಾಜ್ಯದಲ್ಲಿ ಇದ್ದರೂ ಮರಳಿ ಪಡೆಯುವ ಸಾಧ್ಯತೆ ಹೆಚ್ಚಿದೆ. ಲಕ್ಷಾಂತರ ಹಣ ವರ್ಗಾವಣೆಗೊಂಡಾಗ ಆ ಹಣವನ್ನು ಆರೋಪಿ ಬಿಡಿಸಿಕೊಳ್ಳಲು ಅಥವಾಇತರೆ ಅಕೌಂಟ್‌ಗಳಿಗೆ ವರ್ಗಾವಣೆ ಮಾಡಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ವಂಚನೆಗೆ ಒಳಗಾದವರು ಈ ಸಮಯವನ್ನು ಸದುಪಯೋಗ ಮಾಡಿಕೊಳ್ಳಬಹುದು. ಇದೇ ರೀತಿ ಶಿವಮೊಗ್ಗದಲ್ಲಿ 2018ರಿಂದ ಈವರೆಗೆ 37.83 ಲಕ್ಷ ರೂ.ಗಳನ್ನು ಫ್ರೀಜ್‌ ಮಾಡಲಾಗಿದೆ. 2018ರಲ್ಲಿ 4.53 ಲಕ್ಷ, 2019ರಲ್ಲಿ 23.67 ಲಕ್ಷ, 2020ರಲ್ಲಿ ಈವರೆಗೆ 9.63 ಲಕ್ಷ ರೂ. ಫ್ರೀಜ್‌ ಮಾಡಲಾಗಿದೆ.

ಪೊಲೀಸರ ಹೆಸರಲ್ಲೇ ನಕಲಿ ಖಾತೆ : ಎರಡು ದಿನಗಳಿಂದ ಶಿವಮೊಗ್ಗ ಪೊಲೀಸ್‌ ಇನ್ಸ್‌ಪೆಕ್ಟರ್‌ ಹಾಗೂ ನಿವೃತ್ತ ಪಿಎಸ್‌ಐ ಹೆಸರಿನಲ್ಲಿ ನಕಲಿ ಫೇಸ್‌ ಬುಕ್‌ ಖಾತೆ ಸೃಷ್ಟಿಸಿ ಅವರ ಸ್ನೇಹಿತರ ಬಳಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆಯೂ ನಡೆದಿದೆ.ಆನ್‌ಲೈನ್‌  ವಂಚನೆ ಜಾಲ ದಿನಕ್ಕೊಂದು ಹೊಸ ರೂಪ ಪಡೆಯುತ್ತ ಬಿಗಿಗೊಳ್ಳುತ್ತಿದ್ದು ಇದರಿಂದ ಯಾರೂ ಹೊರತಾಗಿಲ್ಲ.

24 ಜನರ ಬಂಧನ : ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಅಪ್‌ಲೋಡ್‌ ಮಾಡಿದವರ ಮೇಲೆ ಶಿವಮೊಗ್ಗ ಸಿಇಎನ್‌ ಪೊಲೀಸರು ಸಮರ ಸಾರಿದ್ದಾರೆ. ಇಂತಹ ಪ್ರಕರಣಗಳಲ್ಲಿ ಮಹಿಳೆಯರ ಗುರುತು ಗೌಪ್ಯವಾಗಿ ಇಟ್ಟು ಆರೋಪಿಗಳನ್ನು ಬಂಧಿಸಲಾಗಿದೆ. 2018ರಲ್ಲಿ 2, 2019ರಲ್ಲಿ 10, 2020ರಲ್ಲಿ 12 ಜನರನ್ನು ಬಂಧಿಸಲಾಗಿದೆ. ಆನ್‌ಲೈನ್‌ ವಂಚನೆ ಮಾಡಿದ ಮೂವರು ಹಾಗೂ ಮಕ್ಕಳ ಲೈಂಗಿಕ ಚಿತ್ರ ವೀಕ್ಷಣೆ ಮಾಡಿದ ಮೂರು ಮಂದಿ ಹಾಗೂ ಇತರೆ ಐಪಿಸಿ ಪ್ರಕರಣಗಳಿಗೆ ಸಂಬಂಧಿಸಿ 5ಮಂದಿಯನ್ನು ಬಂಧಿಸಲಾಗಿದೆ.

ಆನ್‌ಲೈನ್‌ ಜಾಹೀರಾತುಗಳನ್ನು ನಂಬುವುದು, ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳ ಜತೆ ಚಾಟಿಂಗ್‌ ಮಾಡುವುದು, ವ್ಯವಹರಿಸುವುದು ಸೂಕ್ತವಲ್ಲ. ಸುಲಭವಾಗಿ ಹಣಗಳಿಸುವ ಜಾಹೀರಾತುಗಳನ್ನು ನಂಬಬೇಡಿ. ಹಣ ಕಳೆದುಕೊಂಡವರು ತಕ್ಷಣ ಬ್ಯಾಂಕ್‌ ಅಥವಾ ಸಿಇಎನ್‌ ಪೊಲೀಸರನ್ನು ಸಂಪರ್ಕಿಸಿದರೆ ಹಣ ಫ್ರೀಜ್‌ ಮಾಡಬಹುದು. ದೂರು ಕೊಡಲು ಆನ್‌ಲೈನ್‌ನಲ್ಲೂ ಅವಕಾಶವಿದೆ. – ಕೆ.ಟಿ.ಗುರುರಾಜ್‌ ಕರ್ಕಿ, ಇನ್ಸ್‌ಪೆಕ್ಟರ್‌, ಸೈಬರ್‌ ಕ್ರೈಂ ಪೊಲೀಸ್‌ ಠಾಣೆ

 

ಶರತ್‌ ಭದ್ರಾವತಿ

ಟಾಪ್ ನ್ಯೂಸ್

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

Ashok-Vijayendra

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್‌ ಉತ್ಸವ’ ಮಾಡಲ್ಲ: ಬಿಜೆಪಿ

Mumbai Coast: ಗೇಟ್‌ವೇ ಆಫ್‌ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!

1-horoscope

Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

19-thirthahalli

Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು

1-edd

Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು

9

Shivamogga: ಅಯೋಧ್ಯೆ ರೀತಿ ವ‌ಕ್ಫ್ ಹಗರಣಕ್ಕೂ ನ್ಯಾಯ ಸಿಕ್ಕೇ ಸಿಗುತ್ತದೆ; ಈಶ್ವರಪ್ಪ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

Ashok-Vijayendra

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್‌ ಉತ್ಸವ’ ಮಾಡಲ್ಲ: ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.