ಪಡಿಕ್ಕಲ್ ಅರ್ಧ ಶತಕದ ಆಟ ; ಕೊನೆಯಲ್ಲಿ ಮಿಂಚಿದ ಎಬಿಡಿ : ಹೈದರಾಬಾದ್ ಗೆ 164 ರ ಗುರಿ
Team Udayavani, Sep 21, 2020, 9:12 PM IST
ಆಬುಧಾಬಿ : ಐಪಿಎಲ್ ನ ಮೂರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಸವಾಲಿಗೆ ಇಳಿದ ಆರ್ ಸಿ ಬಿ ಪ್ರಾರಂಭಿಕ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 164 ರ ಗುರಿ ಬಿಟ್ಟು ಕೊಟ್ಟಿದೆ.
ಆರ್ ಸಿ ಬಿ ಪರ ಪ್ರಾರಂಭಿಕ ಜೋಡಿಗಳಾಗಿ ಕ್ರಿಸಿಗೀಳಿದ ದೇವದತ್ ಪಡಿಕ್ಕಲ್ ಹಾಗೂ ಆರೋನ್ ಫಿಂಚ್ ಉತ್ತಮವಾದ ಆರಂಭ ನೀಡಿದರು. ಆರಂಭದಿಂದಲೇ ಬಿರುಸಿನಿಂದ ಬ್ಯಾಟ್ ಬೀಸಿದ ಯುವ ಆಟಗಾರ ಪಡಿಕ್ಕಲ್ 42 ಎಸತೆಗಳನ್ನು ಎದುರಿಸಿ 8 ಬೌಂಡರಿಗಳನ್ನು ಬಾರಿಸಿ 56 ರನ್ ಗಳಿಸುವ ಮೂಲಕ ತಮ್ಮ ಚೊಚ್ಚಲ ಅರ್ಧ ಶತಕವನ್ನು ದಾಖಲಿಸಿ ವಿಜಯ್ ಶಂಕರ್ ಎಸತೆಕ್ಕೆ ಬೌಲ್ಡ್ ಔಟ್ ಆಗಿ ವಿಕೆಟ್ ಒಪ್ಪಿಸಿದರು. ತುಸು ನಿಧಾನವಾಗಿಯೇ ಬ್ಯಾಟ್ ಬೀಸಿದ ಆರೋನ್ ಫಿಂಚ್ 27 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಗಳನ್ನು ಬಾರಿಸಿ 29 ರನ್ ಗಳಿಸಿ ಅಭಿಷೇಕ್ ಎಸೆತಕ್ಕೆ ಎಲ್ ಬಿ ಆಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಪ್ರಾರಂಭಿಕ ಜೋಡಿ 89 ರನ್ ಗಳ ಜೊತೆಯಾಟ ನೀಡಿ ತಂಡಕ್ಕೆ ಆಶಾದಾಯಕ ಆರಂಭ ನೀಡಿತ್ತು.
ನಂತರ ಬಂದ ಕಪ್ತಾನ ವಿರಾಟ್ ಕೊಹ್ಲಿ ನಿರೀಕ್ಷೆಯಷ್ಟು ಅಬ್ಬರಿಸದೆ ಬರೀ 14 ರನ್ ಬಾರಿಸಿ ನಟರಾಜನ್ ಎಸೆತೆಕ್ಕೆ ಕ್ಯಾಚ್ ಕೊಟ್ಟು ಸಾಗಿದರು.ಎಬಿ ಡಿವಿಲಿಯರ್ಸ್ 51 ರನ್ ಗಳ ಬಿರುಸಿನ ಆಟ ನೀಡಿ ರನ್ ಔಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ಶಿವಂ ದುಬೆ ಅಂತಿಮ ಓವರ್ ಗಳಲ್ಲಿ ಬ್ಯಾಟ್ ಬೀಸಿ ನೆರವಾದರು.
ಒಟ್ಟಿನಲ್ಲಿ ಆರ್ ಸಿಬಿ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 164 ರ ಗುರಿಯನ್ನು ಬಿಟ್ಟು ಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.