ದೇಶದಲ್ಲಿ ಅಲ್‌ಕಾಯಿದಾ ಉಗ್ರ ಜಾಲ ಅಸಡ್ಡೆ ಸಲ್ಲ


Team Udayavani, Sep 22, 2020, 6:11 AM IST

ದೇಶದಲ್ಲಿ ಅಲ್‌ಕಾಯಿದಾ ಉಗ್ರ ಜಾಲ ಅಸಡ್ಡೆ ಸಲ್ಲ

ಸಾಂದರ್ಭಿಕ ಚಿತ್ರ

ಅಲ್‌ಕಾಯಿದಾ ಉಗ್ರ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ 9 ಜನರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ಬಂಧಿಸಿದ್ದು, ಬಹುದೊಡ್ಡ ಅಪಾಯದಿಂದ ದೇಶ ಪಾರಾದಂತಾಗಿದೆ. ಇವರೆಲ್ಲ ರಾಷ್ಟ್ರ ರಾಜಧಾನಿ ದಿಲ್ಲಿ, ಬಿಹಾರದಲ್ಲಿನ ಭದ್ರತಾ ಘಟಕಗಳು, ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಆದರೆ, ಪ್ರಬಲ ಸಾಕ್ಷ್ಯಾಧಾರಗಳ ಬಲದ ಮೇಲೆ ಎಷ್ಟು ತ್ವರಿತವಾಗಿ ಎನ್‌ಐಎ ಕಾರ್ಯಾಚರಣೆ ನಡೆಸಿದೆಎಂದರೆ, ಆರೋಪಿಗಳ ಸಂಚು ವಿಫ‌ಲವಾಗಿದೆ.

ಈ ರೀತಿ ಆಗುತ್ತಿರುವುದು ಇದೇ ಮೊದಲ ಬಾರಿಯೇನೂ ಅಲ್ಲ. ಅಲ್‌ಕಾಯಿದಾ, ಇಸ್ಲಾಮಿಕ್‌ ಸ್ಟೇಟ್‌, ಹಿಜ್ಬುಲ್‌ ಸೇರಿದಂತೆ ಇತರೆ ಉಗ್ರ ಸಂಘಟನೆಗಳ ಭಯೋತ್ಪಾದಕರು ಸಿಕ್ಕಿ ಬೀಳುತ್ತಲೇ ಇದ್ದಾರೆ. ಸ್ವಾತಂತ್ರೊéàತ್ಸವ, ಗಣರಾಜ್ಯೋತ್ಸವ ಮತ್ತು ಹಬ್ಬಗಳಂದು ಭಯೋತ್ಪಾದನಾ ಕೃತ್ಯಗಳ ಅಪಾಯ ಹೆಚ್ಚಿಬಿಟ್ಟಿರುತ್ತದೆ. ಒಟ್ಟಲ್ಲಿ ಈಗಿನ ಬಂಧನಗಳಿಂದ ಸ್ಪಷ್ಟವಾಗುತ್ತಿರುವ ಅಂಶವೆಂದರೆ, ಈ ಉಗ್ರರ ನೆಟ್ ವರ್ಕ್ ದೇಶಾದ್ಯಂತ ಹರಡಿದೆ ಹಾಗೂ ತಮ್ಮ ದುರುದ್ದೇಶ ಸಾಧನೆಗಾಗಿ ಈ ಜಾಲ ಪ್ರಬಲ ಪ್ರಯತ್ನದಲ್ಲಿ ತೊಡಗಿದೆ ಎನ್ನುವುದು. ಪಶ್ಚಿಮ ಬಂಗಾಲ, ಕೇರಳ, ಝಾರ್ಖಂಡ್‌, ಉತ್ತರಪ್ರದೇಶ, ಕಾಶ್ಮೀರದಲ್ಲಿ ಉಗ್ರರ ಜಾಲ ಸಕ್ರಿಯವಾಗಿದೆ ಎಂದು ತನಿಖಾ ಸಂಸ್ಥೆಗಳು ಆಗಾಗ ಹೇಳುತ್ತಲೇ ಇರುತ್ತವೆ.

ಭಾರತದಲ್ಲಿ ಸಕ್ರಿಯವಾಗಿರುವ ಇಂಥ ಉಗ್ರ ಜಾಲಗಳ ಹಿಂದೆ ಪಾಕಿಸ್ಥಾನದ ಸರಕಾರ ಹಾಗೂ ಐಎಸ್‌ಐನ ಕೈವಾಡವಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಎನ್‌ಐಎ ಕೈಗೆ ಈಗ ಸಿಕ್ಕಿಬಿದ್ದಿರುವ ಪಾತಕಿಗಳೂ ಸಹ, ಪಾಕಿಸ್ಥಾನದಲ್ಲಿ ಕುಳಿತ ಮಾಸ್ಟರ್‌ಮೈಂಡ್‌ಗಳ ಆದೇಶದಂತೆ ತಾವು ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಅಲ್‌ಕಾಯಿದಾ ಮತ್ತು ಐಸಿಸ್‌ ಉಗ್ರರ ಬಹುದೊಡ್ಡ ನೆಲೆಯಾಗಿ ಬದಲಾಗಿರುವ ಪಾಕಿಸ್ಥಾನವೀಗ, ಡಿಜಿಟಲ್‌ ಮಾಧ್ಯಮದ ಮೂಲಕ(ಅದರಲ್ಲೂ ಡಾರ್ಕ್‌ ವೆಬ್‌ ಮೂಲಕ) ವಿದೇಶಗಳಲ್ಲಿರುವ ಯುವಕರ ಬ್ರೈನ್‌ವಾಶ್‌ ಮಾಡುವ ಕುಕೃತ್ಯಕ್ಕೆ ವೇಗ ನೀಡಿಬಿಟ್ಟಿದೆ. ಮೂಲಭೂತವಾದದ ಮದವೇರಿಸಿಕೊಂಡ ಯುವಕರು ಪಾಕ್‌ನ ಕೈಗೊಂಬೆಯಾಗಿ ತಾವು ಹುಟ್ಟಿದ ನೆಲದಲ್ಲೇ ವಿಧ್ವಂಸ ಎಸಗಲು ಸಜ್ಜಾಗಿಬಿಡುತ್ತಾರೆ.

ಕಳೆದ ವರ್ಷ ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಈಸ್ಟರ್‌ ಹಬ್ಬದ ವೇಳೆ ಚರ್ಚ್‌ ಮತ್ತು ಪಂಚತಾರಾ ಹೊಟೇಲ್‌ನ ಮೇಲೆ ನಡೆದ ಭಯೋತ್ಪಾದನಾ ದಾಳಿಯಲ್ಲಿ 250ಕ್ಕೂ ಅಧಿಕ ಜನ ಮೃತಪಟ್ಟಿದ್ದರು. ಆ ದಾಳಿಯ ಹಿಂದೆಯೂ ಐಸಿಸ್‌ ಹಾಗೂ ಅಲ್‌ಕಾಯಿದಾ ಕೈವಾಡವಿತ್ತು. ಪಾಕಿಸ್ಥಾನವೀಗ ಇವೆರಡೂ ಉಗ್ರ ಸಂಘಟನೆಗಳಿಂದ ಭಾರತದ ಮೇಲೆ ಇಂಥದ್ದೇ ಕೃತ್ಯ ಎಸಗಿಸಲು ಪ್ರಯತ್ನಿಸುತ್ತಿದೆ.

ಗುಪ್ತಚರ ದಳದ ಅಧಿಕಾರಿಗಳ ಪ್ರಕಾರ ಅಲ್‌ಕಾಯಿದಾ ಈಗ ಪಶ್ಚಿಮ ಬಂಗಾಲ ದಲ್ಲಿ ತನ್ನ ಬೇರುಗಳನ್ನು ಭದ್ರವಾಗಿಸಿಕೊಂಡಿದೆ. ಬಾಂಗ್ಲಾದೇಶದ ನುಸುಳುಕೋರರಿಗೆಲ್ಲ ಮಮತಾ ಬ್ಯಾನರ್ಜಿ ರತ್ನಗಂಬಳಿ ಹಾಸುತ್ತಿರುವುದು ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತದೆ. ಇದು ನಿಜವೇ ಆಗಿದ್ದರೆ, ರಾಷ್ಟ್ರೀಯ ಭದ್ರತೆಗೆ ಮುಂದಿನ ದಿನಗಳಲ್ಲಿ ಬಹಳ ಅಪಾಯ ಎದುರಾಗಲಿದೆ. ದುರಂತವೆಂದರೆ, ಇಂಥ ವಿಚಾರಗಳಲ್ಲಿ ರಾಜಕೀಯ ಪಕ್ಷಗಳ ಧೋರಣೆಯೇ ಭಿನ್ನವಾಗಿದೆ. ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ನಡೆದು, ಮುಖ್ಯ ವಿಚಾರ ಚರ್ಚೆಯಾಗುವುದೇ ಇಲ್ಲ. ಕಾನೂನು ಸುವ್ಯವಸ್ಥೆಯ ಪಾಲನೆಯಲ್ಲಿ ರಾಜ್ಯಗಳಿಗೆ ಹೆಚ್ಚು ಜವಾಬ್ದಾರಿ, ಅಧಿಕಾರ ಇರುತ್ತದೆ. ರಾಜ್ಯ ಸರಕಾರಗಳು ಇಂಥ ಉಗ್ರ ಜಾಲಗಳನ್ನು ಪುಡಿಯಾಗಿಸಲು ಮುಂದಾಗಬೇಕು. ನಿರಾಕರಣೆಯಿಂದ ತಾತ್ಕಾಲಿಕ ರಾಜಕೀಯ ಲಾಭವಾಗಬಹುದಷ್ಟೇ ಹೊರತು, ರಾಷ್ಟ್ರಕ್ಕೆ ಅಪಾಯ ಹೆಚ್ಚುತ್ತದೆ.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.