ಕೀಡಾಕ್ಷೇತ್ರದಲ್ಲಿ ದಾಖಲೆ ಬರೆದ ಐಪಿಎಲ್ ಉದ್ಘಾಟನಾ ಪಂದ್ಯ; 20 ಕೋಟಿ ವೀಕ್ಷಣೆ !
Team Udayavani, Sep 22, 2020, 9:03 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಣಿಪಾಲ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ -13 ಸೆಪ್ಟೆಂಬರ್ 19ರಂದು ಪ್ರಾರಂಭವಾಗಿತ್ತು. ಈ ಬಾರಿ ಪಂದ್ಯಾವಳಿಯನ್ನು ಕೋವಿಡ್ 19ನ ಹಿನ್ನೆಲೆಯಲ್ಲಿ ಪ್ರೇಕ್ಷಕರಿಲ್ಲದೆ ಯುಎಇಯಲ್ಲಿ ಆಡಲಾಗುತ್ತಿದೆ.
ಅಬುಧಾಬಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಮೊದಲ ಪಂದ್ಯ ನಡೆದಿತ್ತು. ಅದರಲ್ಲಿ ಹಾಲಿ ಚಾಂಪಿಯನ್ ಮುಂಬೈ ಅನ್ನು ಚೆನ್ನೈ ತಂಡ ಮಣಿಸಿ ಶುಭಾರಂಭ ಮಾಡಿತ್ತು.
ಉದ್ಘಾಟನಾ ಪಂದ್ಯ ಇದೀಗ ದಾಖಲೆಯ ಪುಟ ಸೇರಲಿದೆ. ಟಿವಿಯಲ್ಲಿ ಈ ಪಂದ್ಯವನ್ನು 200 ಮಿಲಿಯನ್ (20 ಕೋಟಿ) ಜನರು ವೀಕ್ಷಿಸಿದ್ದಾರೆ. ಟ್ವೀಟ್ ಮೂಲಕ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಈ ಮಾಹಿತಿಯನ್ನು ನೀಡಿದ್ದಾರೆ. ಷಾ ಪ್ರಕಾರ, ವಿಶ್ವದ ಯಾವುದೇ ಕ್ರೀಡೆಯು ಇಷ್ಟೊಂದು ವೀಕ್ಷಣೆಯನ್ನು ಪಡೆದಿಲ್ಲ. ಆರಂಭಿಕ ಪಂದ್ಯವನ್ನು ವೀಕ್ಷಿಸುವ ಜನರ ಸಂಖ್ಯೆಯಲ್ಲಿ ಇದು ದಾಖಲೆಯಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆಗಳೊಂದಿಗೆ ಈ ಬಾರಿಯ ಐಪಿಎಲ್ ನಡೆಯುತ್ತಿದೆ. ಎಲ್ಲ ಐಪಿಎಲ್ ಪಂದ್ಯಗಳನ್ನು ಯುಎಇಯ ಮೂರು ಕ್ರೀಡಾಂಗಣಗಳಲ್ಲಿ ಆಡಲಾಗುತ್ತಿದೆ. ದುಬೈ, ಅಬುಧಾಬಿ ಮತ್ತು ಶಾರ್ಜಾ ಎಂಬ ಮೂರು ಕ್ರೀಡಾಂಗಣಗಳಲ್ಲಿ ನಡೆಯುತ್ತಿವೆ.
Opening match of #Dream11IPL sets a new record!
As per BARC, an unprecedented 20crore people tuned in to watch the match. Highest ever opening day viewership for any sporting league in any country- no league has ever opened as big as this. @IPL @SGanguly99 @UShanx @DisneyPlusHS
— Jay Shah (@JayShah) September 22, 2020
ಐಪಿಎಲ್ 2020 ಆವೃತ್ತಿಗೆ ಭಾರಿ ಸ್ಪಂದನೆ ದೊರೆಯುತ್ತಿದೆ. ಟೂರ್ನಿಯ ಆರಂಭದಿಂದಲೇ ರೋಚಕ ಹಣಾಹಣಿ ನಡೆಯುತ್ತಿದ್ದು ಪ್ರೇಕ್ಷಕರಿಗೆ ಭರಪೂರ ಮನರಂಜನೆ ದೊರೆಯುತ್ತಿದೆ. ಉದ್ಘಾಟನಾ ಪಂದ್ಯ ಕ್ರಿಕೆಟ್ ಮಾತ್ರವಲ್ಲ ಎಲ್ಲ ಲೀಗ್ ಕ್ರೀಡೆಗಳ ದಾಖಲೆಯನ್ನು ಮುರಿದಿದೆ.
ಈ ಬಾರಿಯ ಐಪಿಎಲ್ ಹಿಂದಿಗಿಂತ ವಿಭಿನ್ನವಾಗಿ ನಡೆಯುತ್ತಿದೆ. ಕಿಕ್ಕಿರಿದ ಅಭಿಮಾನಿಗಳ ಅಬ್ಬರದ ಮಧ್ಯೆ ಅದ್ಧೂರಿಯಾಗಿ ನಡೆಯುತ್ತಿದ್ದ ಐಪಿಎಲ್ ಈ ಬಾರಿ ಪ್ರೇಕ್ಷಕರು ಇಲ್ಲದೆ ನಡೆಯುತ್ತಿದೆ. ಹಾಗಿದ್ದರೂ ಈ ಬಾರಿಯ ಐಪಿಎಲ್ ಮನರಂಜನೆಗೇನೂ ಕಡಿಮೆಯಾಗಿಲ್ಲ.
ಅಭಿಮಾನಿಗಳು ತಮ್ಮ ತಮ್ಮ ಮನೆಗಳಲ್ಲೇ ಟಿವಿ ಹಾಗೂ ಆನ್‌ಲೈನ್ ಮೂಲಕ ಐಪಿಎಲ್ ವೀಕ್ಷಣೆಯನ್ನು ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ ಕ್ರೀಡಾ ಇತಿಹಾಸದಲ್ಲಿ ದಾಖಲೆಯನ್ನು ಬರೆದಿದೆ. ಮೊದಲ ಪಂದ್ಯವನ್ನು 20 ಕೋಟಿ ಜನರು ವೀಕ್ಷಿಸಿದ್ದಾರೆ. ಇದು ಎಲ್ಲ ಕ್ರೀಡೆಗಳ ಲೀಗ್‌ಗಳಲ್ಲೇ ಅಧಿಕವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.