ಗುಮಾಸ್ತನಿಗೆ 12 ಕೋಟಿ ರೂ. ಲಾಟರಿ!
Team Udayavani, Sep 23, 2020, 6:22 AM IST
ತಿರುವನಂತಪುರ: ಕೇರಳದ ಇಡುಕ್ಕಿ ಜಿಲ್ಲೆಯ ಬಡಕುಟುಂಬದ ಯುವಕ ನೊಬ್ಬ ಸರಕಾರದ ಓಣಂ ಬಂಪರ್ ಲಾಟರಿಯಲ್ಲಿ 12 ಕೋಟಿ ರೂಪಾಯಿ ಗೆದ್ದಿದ್ದಾನೆ! ಎರ್ನಾಕುಳಂನ ಮಂದಿರವೊಂದರಲ್ಲಿ ಗುಮಾಸ್ತನಾಗಿ ಕೆಲಸ ಮಾಡುವ 24 ವರ್ಷದ ಅನಂತು ವಿಜಯನ್, ಕಳೆದ ತಿಂಗಳು ಲಾಟರಿ ಖರೀದಿಸಿ, ರಾತ್ರಿ ಬೆಳಗಾಗುವುದರಲ್ಲಿ ಕೋಟ್ಯಧಿ ಪತಿಯಾಗಿದ್ದಾನೆ.
“”ನಾನು ಲಾಟರಿ ಗೆದ್ದಿದ್ದೇನೆ ಎಂದು ಕರೆ ಬಂದಾಗ, ಯಾರೋ ತಮಾಷೆ ಮಾಡುತ್ತಿದ್ದಾರೆ ಎಂದು ಭಾವಿಸಿದ್ದೆ. ಆದರೆ ನ್ಯೂಸ್ ನೋಡಿದಾಗ, ನಂಬುವುದಕ್ಕೆ ಕಷ್ಟವಾಯಿತು. ಭಾನುವಾರ ಮುಂಜಾನೆ ನಾನು ಗೆಳೆಯರೊಂದಿಗೆ ಮಾತ ನಾಡುತ್ತಾ, ನೋಡ್ತಿರಿ ಈ ಓಣಂ ಬಂಪರ್ ಲಾಟರಿ ನನ್ನ ಬದುಕನ್ನೇ ಬದಲಿಸುತ್ತೆ ಎಂದು ತಮಾಷೆ ಮಾಡಿದ್ದೆ. ಆ ಮಾತು ನಿಜವಾಗಿಬಿಟ್ಟಿತು.ಈಗ ಎರ್ನಾಕುಳಂನಲ್ಲಿ ಮೊದಲು ಒಂದು ಚಿಕ್ಕ ಮನೆ ಖರೀದಿಸುತ್ತೇನೆ. ಆಮೇಲೆ ತಂದೆಯ ಜತೆಗೂಡಿ ಚಿಕ್ಕ ಬ್ಯುಸಿನೆಸ್ ತೆರೆಯುತ್ತೇನೆ” ಎನ್ನುತ್ತಾರೆ ವಿಜಯನ್.
ಲಾಟರಿ ಮತ್ತು ಮದ್ಯ ಮಾರಾಟ ಕೇರಳ ಸರಕಾರದ ಪ್ರಮುಖ ಆದಾಯ ಮಾರ್ಗಗಳಾಗಿವೆ. ಪ್ರತಿದಿನ ಒಂದಲ್ಲ ಒಂದು ಲಾಟರಿ ಡ್ರಾ ಆಗುತ್ತದೆ. ಈ ಕೆಲಸದಲ್ಲಿ 35,000 ಏಜೆಂಟರು ಹಾಗೂ 1.5 ಲಕ್ಷ ವರ್ತಕರು ತೊಡಗಿಕೊಂಡಿದ್ದಾರೆ. ಲಾಟರಿ ಟಿಕೆಟ್‌ಗಳ ಮಾರಾಟದ ಆದಾಯವೇ ವಾರ್ಷಿಕವಾಗಿ 10,000 ಕೋಟಿಯಿಂದ 12 ಸಾವಿರ ಕೋಟಿಯಷ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.