ಮೀನುಗಾರರನ್ನು ಪದೇ ಪದೇ ಕಾಡುತ್ತಿರುವ ಹವಾಮಾನದ ವೈಪರೀತ್ಯ!

ನಿರಂತರ ಮಳೆಯಿಂದ ಸಾಕಷ್ಟು ಸಮಸ್ಯೆ

Team Udayavani, Sep 24, 2020, 4:40 AM IST

ಮೀನುಗಾರರನ್ನು ಪದೇ ಪದೇ ಕಾಡುತ್ತಿರುವ ಹವಾಮಾನದ ವೈಪರೀತ್ಯ!

ಮೀನುಗಾರಿಕೆಗೆ ತೆರಳದೆ ಲಂಗರು ಹಾಕಿರುವ ಬೋಟ್‌ಗಳು.

ಮಲ್ಪೆ: ಇತ್ತೀಚಿನ ವರ್ಷಗಳಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ಹವಾಮಾನ ವೈಪರೀತ್ಯ ಕರಾವಳಿಯ ಮೀನುಗಾರರನ್ನು ಕಂಗೆಡಿಸುವಂತೆ ಮಾಡಿದೆ. ಈ ಮೊದಲು ಮತ್ಸ್ಯ ಕ್ಷಾಮದಿಂದ ಬಳಲುತ್ತಿದ್ದ ಮೀನುಗಾರರು ಕಳೆದ ಒಂದೂವರೆ ವರ್ಷದಿಂದ ಹವಾಮಾನದ ವೈಪರೀತ್ಯವನ್ನು ಎದುರಿಸುತ್ತಿದ್ದಾರೆ. ಇದು ಉಳಿದ ವ್ಯಾಪಾರ ವ್ಯವಹಾರದ ಮೇಲೂ ಪರೋಕ್ಷವಾಗಿ ಪರಿಣಾಮವನ್ನು ಬೀರಿದೆ.

ಕಳೆದ ವರ್ಷ ಓಖೀ, ಕ್ಯಾರ್‌, ಮಹಾ, ಅಂಫಾನ್‌ ಸೇರಿದಂತೆ ಆರು ಚಂಡ ಮಾರುತಗಳು ಮೀನುಗಾರರ ಬದುಕನ್ನು ಕಸಿದಿತ್ತು. ಪರಿಣಾಮ ಬೋಟ್‌ ಒಂದಷ್ಟು ಕಾಲ ದಡದಲ್ಲಿ ಉಳಿಯಬೇಕಾಯಿತು. ಅಕ್ಟೋಬರ್‌ ನಂತರ ಸ್ವಲ್ಪಮಟ್ಟಿಗೆ ಮೀನುಗಾರಿಕೆ ಚುರುಕು ಕಂಡು, ಡಿಸೆಂಬರ್‌ವರೆಗೆ ಮುಂದುವರಿದರೂ ಜನವರಿಯಿಂದ ಮೀನಿನ ಲಭ್ಯತೆ ಕಡಿಮೆ
ಯಾಯಿತು. ಉಳಿದ ಅವಧಿಯಲ್ಲಿ ಒಂದಷ್ಟು ದುಡಿದು ಕಳೆದುಕೊಂಡಿರುವ ಅರ್ಧದಷ್ಟಾದರೂ ಪಡೆಯೋಣ ಎಂಬ ನಿರೀಕ್ಷೆಯಲ್ಲಿ ಮೀನುಗಾರಿಕೆಗೆ ತೊಡಗಿದರೆ ಮುಂದೆ ಕಾಡಿದ್ದು ಮಹಾಮಾರಿ ಕೊರೊನಾ. ಪರಿಣಾಮ ಕನಿಷ್ಠ ಮೂರು ತಿಂಗಳ ಕಾಲ ಮೀನುಗಾರಿಕೆ ನಡೆಸಲು ಸಾಧ್ಯ
ವಾಗಲಿಲ್ಲ.

ಬೋಟ್‌ಗಳ ಢಿಕ್ಕಿ, ಕೋಟ್ಯಂತರ ರೂ. ನಷ್ಟ
ಹವಾಮಾನದ ವೈಪರೀತ್ಯಗಳಾದಾಗ ಬೋಟುಗಳು ಬಂದರಿನಲ್ಲಿ ಲಂಗರು ಹಾಕುತ್ತವೆ. ಈ ವೇಳೆಯೂ ಸಾಕಷ್ಟು ಹಾನಿಯಾಗಿವೆ. ಹೊಳೆಬದಿ ಲಂಗರು ಹಾಕಿ ನಿಲ್ಲಿಸಲಾಗಿದ್ದ ಮೀನುಗಾರಿಕೆ ಬೋಟುಗಳು ನದಿ ನೀರಿನ ಹರಿವಿನ ರಭಸಕ್ಕೆ ಕಟ್ಟಿದ ಹಗ್ಗ ತುಂಡಾಗಿ ತೇಲಿ ಹೋದರೆ,ಇನ್ನು ಕೆಲವು ಒಂದಕ್ಕೊಂದು ಢಿಕ್ಕಿಯಾಗಿ ಹಾನಿಗೊಂಡಿದೆ. ನಿರಂತರ ಮಳೆಯಿಂದಾಗಿ ನದಿಯಲ್ಲಿ ನೀರು ಪ್ರವಾಹ ವೇಗದಲ್ಲಿ ಹರಿಯುತ್ತಿದ್ದು ನೀರಿನ ಹೊಯ್ದಾಟಕ್ಕೆ ಕಟ್ಟಿದ ಬೋಟುಗಳು ಒಂದಕ್ಕೊಂದು ಢಿಕ್ಕಿ ಹೊಡೆದುಕೊಂಡು ಸಾಕಷ್ಟು ನಷ್ಟ ಉಂಟಾಗಿತ್ತು. ಮೀನುಗಾರಿಕೆ ಆರಂಭಗೊಂಡಂದಿನಿಂದ ಆದಾಯಗಳಿಸುವುದಕ್ಕಿಂತ ಬೋಟಿನ ದುರಸ್ತಿ ಕೆಲಸದ ಖರ್ಚು ಹೆಚ್ಚಾಗಿದೆ.

ಹವಾಮಾನ ಏರಿಳಿತ
ಕಳೆದ ಸಾಲಿನಲ್ಲಿ 6 ಚಂಡಮಾರುತ ಬಂದಿತ್ತು. ಈ ಸಲ ಮೀನುಗಾರಿಕೆ ಆರಂಭಗೊಂಡು ಒಂದು ತಿಂಗಳಲ್ಲಿ ಎರಡು ಹವಾಮಾನ ಏರಿಳಿತ ಕಂಡಿದೆ. ಹೀಗೆ ವೈಪರೀತ್ಯಗಳಿದ್ದರೆ ಮೀನುಗಾರರು ದುಡಿಮೆ ಮಾಡುವುದು ಹೇಗೆ ?  ದಿನದಿಂದ ದಿನಕ್ಕೆ ಮೀನುಗಾರರ  ಸ್ಥಿತಿ ಶೋಚನೀಯವಾಗುತ್ತಿದೆ.
-ಕೃಷ್ಣ ಎಸ್‌. ಸುವರ್ಣ, ಅಧ್ಯಕ್ಷರು, ಮೀನುಗಾರರ ಸಂಘ ಮಲ್ಪೆ

ಟಾಪ್ ನ್ಯೂಸ್

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.