ಜನರ ನಿರ್ಲಕ್ಷ್ಯದಿಂದ ಸೋಂಕು ಹೆಚ್ಚಳ
ಜಿಲ್ಲೆಯಲ್ಲಿ ದಶಕದತ್ತ ಸಾಗಿದೆ ಕೋವಿಡ್ ಪ್ರಕರಣ
Team Udayavani, Sep 24, 2020, 4:24 PM IST
ಮಂಡ್ಯದಲ್ಲಿ ಆರೋಗ್ಯ ಕಾರ್ಯಕರ್ತರು ಸಾರ್ವಜನಿಕರಿಗೆ ಕೋವಿಡ್ ಪರೀಕ್ಷೆ ಮಾಡಿದರು.
ಮಂಡ್ಯ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, 10 ಸಾವಿರದತ್ತ ದಾಪುಗಾಲು ಇಟ್ಟಿದೆ. ಅಲ್ಲದೆ, ಸಾವಿನ ಸಂಖ್ಯೆ ನೂರರ ಗಡಿಯತ್ತ ಸಾಗಿದೆ.
ಕೋವಿಡ್-19 ನಿಯಮಗಳನ್ನು ಸರಿಯಾಗಿ ಪಾಲಿಸದೆ ಸಾರ್ವಜನಿಕರ ನಿರ್ಲಕ್ಷ್ಯದಿಂದಲೇ ಕೋವಿಡ್ ಸೋಂಕು ಜಿಲ್ಲೆಯಲ್ಲಿ ವೇಗವಾಗಿ ಹರಡುತ್ತಿದೆ. ಮಾಸ್ಕ್ ಧರಿಸದೆ ಇರುವುದು. ಧರಿಸಿದರೂ ಮೂಗು, ಬಾಯಿ ಮುಚ್ಚದಂತೆ ಹಾಕಿಕೊಳ್ಳು ವುದು. ಸಾಮಾಜಿಕ ಅಂತರ ಕಾಪಾಡಿ ಕೊಳ್ಳದಿರುವುದು. ಕ್ವಾರಂಟೈನ್ ಉಲ್ಲಂಘಿಸುವ ಪ್ರಕರಣಗಳು ಹೆಚ್ಚಾ ಗಿವೆ. ಆಗಾಗ್ಗೆ ಕೈತೊಳೆಯ ದಿರುವುದು, ಸ್ಯಾನಿಟೈಸರ್ ಬಳಸದಿರುವುದು ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ.
ನಿಯಮ ಸಡಿಲಿಕೆಯಿಂದ ಹೆಚ್ಚಳ: ಜಿಲ್ಲಾ ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿ ಜಾಗೃತಿ, ಪರೀಕ್ಷೆಗಳನ್ನು ನಡೆಸುತ್ತಿದೆ. ಜಿಲ್ಲೆಯಲ್ಲಿ ಮೊದಲ ಬಾರಿ ಕೋವಿಡ್ ಕಾಣಿಸಿಕೊಂಡ ಬಳಿಕ ತೆಗೆದುಕೊಂಡ ಕ್ರಮಗಳು, ನಂತರ ದಿನಗಳಲ್ಲಿ ಸಡಿಲಿಕೆ ಮಾಡಿದ ಪರಿಣಾಮ ನಿಧಾನಗತಿಯಲ್ಲಿದ್ದ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಪ್ರತಿದಿನ ನೂರಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ. ಆರೋಗ್ಯ ಇಲಾಖೆ ಜಾಗೃತಿ ಮೂಡಿಸುತ್ತಿದ್ದರೂ ಸಾರ್ವಜನಿಕರ ನಿರ್ಲಕ್ಷ್ಯ ಮಾತ್ರ ಮುಂದುವರಿದಿದೆ.
ಸೋಂಕಿನ ಲಕ್ಷಣಗಳಿದ್ದರೂ ನಿರ್ಲಕ್ಷ್ಯ: ಸಾರ್ವಜನಿಕರು ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳು ಕಂಡು ಬಂದರೂ ನಿರ್ಲಕ್ಷ್ಯ ವಹಿಸುತ್ತಿರುವುದು ಸೋಂಕಿನ ಪ್ರಮಾಣ ಹೆಚ್ಚಲು ಕಾರಣವಾಗಿದೆ. ಕೆಲವರು ಆತಂಕಕ್ಕೊಳಗಾಗಿ ಪರೀಕ್ಷೆಗೆ ಹಾಜರಾದರೆ, ಕೆಲವರು ಲಕ್ಷಣಗಳಿದ್ದರೂ ನಿರ್ಲಕ್ಷ್ಯ ವಹಿಸಿ ಅದು ಹೆಚ್ಚಾದಾಗ ಕೊನೆಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ಹೈರಿಸ್ಕ್ ರೋಗಿಗಳೇ ಹೆಚ್ಚು ಸಾವು: ವಯೋ ವೃದ್ಧರು, ಮಧುಮೇಹ, ಬಿಪಿ,ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಇದುವರಿಗೂ ಜಿಲ್ಲೆಯಲ್ಲಿ 96 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ಶೇ.99ರಷ್ಟು ವಯೋವೃದ್ಧರು ಹಾಗೂ ಇನ್ನಿತರೆಕಾಯಿಲೆಗಳಿಂದ ಬಳಲುತ್ತಿರುವವರೇ ಮೃತಪಟ್ಟಿದ್ದಾರೆ. ಆದ್ದರಿಂದ ಇಂಥ ರೋಗಿಗಳು ಹಾಗೂ ವಯಸ್ಸಾದವರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ.
ಹೋಂ ಐಸೋಲೇಷನ್‌ಗೆ ಒತ್ತು: ಸೋಂಕು ಇಲ್ಲದ ರೋಗಿಗಳು ಜಿಲ್ಲೆಯ ಹೆಚ್ಚು ಕಂಡು ಬರುತ್ತಿದೆ. ಇದರಿಂದ ಹೋಂ ಐಸೋಲೇಷನ್ ಗೆ ಒತ್ತು ನೀಡಲಾಗುತ್ತಿದೆ . ಅವರಿಗೆ 10 ದಿನಗಳ ಕಾಲ ಚಿಕಿತ್ಸೆ ನಡೆಯಲಿದೆ. ನಂತರ ಯಾವುದೇ ಪರೀಕ್ಷೆ ಇಲ್ಲದೆ ಬಿಡುಗಡೆ ಮಾಡಲಾಗುತ್ತದೆ. ಬಿಡುಗಡೆಯಾದ ವ್ಯಕ್ತಿಯಿಂದ ಯಾವುದೇ ಸೋಂಕು ಹರಡುವುದಿಲ್ಲ ಎಂದು ವೈದ್ಯರು ತಿಳಿಸುತ್ತಾರೆ.
ನಿತ್ಯ ಸಾವಿರಕ್ಕೂ ಹೆಚ್ಚು ಪರೀಕ್ಷೆ: ಪ್ರತಿದಿನ ಸಾವಿರಕ್ಕೂ ಹೆಚ್ಚು ಮಂದಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತಿದೆ. ಆರ್‌ಟಿಪಿಸಿಆರ್ ಹಾಗೂ ರ್ಯಾಪಿಡ್ ಮೂಲಕ ಸಾಮೂಹಿಕ ಪರೀಕ್ಷೆ ನಡೆಸುತ್ತಿರುವುದರಿಂದ ಸೋಂಕಿ ತರು ಪತ್ತೆಯಾಗುತ್ತಿದ್ದಾರೆ
5500ಬೆಡ್‌ಗಳ ವ್ಯವಸ್ಥೆ : ಜಿಲ್ಲೆಯಾದ್ಯಂತ5500 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಸ್ಪತ್ರೆ ಯಲ್ಲಿ 500, ತಾಲೂಕು ಆಸ್ಪತ್ರೆಗಳಲ್ಲಿ ತಲಾ 50, ಜಿಲ್ಲೆಯ ಹಾಸ್ಟೆಲ್ ಗಳಲ್ಲಿ ತಲಾ500, ಸಮುದಾಯಕೇಂದ್ರಗಳಲ್ಲಿ ತಲಾ30, ಜಿಲ್ಲಾಸ್ಪತ್ರೆಯಲ್ಲಿ30 ಐಸಿಯು, 300 ಆಕ್ಸಿಜನ್ ಹಾಸಿಗೆ, ಆದಿಚುಂಚನ ಗಿರಿ ಆಸ್ಪತ್ರೆಯಲ್ಲಿ300, ಸಾಂಜೋ ಆಸ್ಪತ್ರೆಯಲ್ಲಿ55 ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲೂ ತಲಾ50 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ.
ಚಿಕಿತ್ಸೆಗೆ ವೈದ್ಯರ ಕೊರತೆ ಇಲ್ಲ : ಕೋವಿಡ್ ಸಂದರ್ಭ ಆಗಿರುವುದರಿಂದ ಇಂತಿಷ್ಟೇ ವೈದ್ಯರುಕರ್ತವ್ಯ ನಿರ್ವಹಿಸಬೇಕು ಎಂಬ ನಿಯಮವಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ತಜ್ಞರು,ಕರ್ತವ್ಯನಿರತ ವೈದ್ಯರು, ನರ್ಸ್‌ಗಳು ಸೇರಿದಂತೆ200 ಮಂದಿ ಪ್ರತಿದಿನ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಂತೆ ತಾಲೂಕು ಆಸ್ಪತ್ರೆಗಳಲ್ಲೂ10ಕ್ಕೂ ಹೆಚ್ಚು ಮಂದಿ ವೈದ್ಯರು, ನರ್ಸ್‌ಗಳಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಹೋಂ ಐಸೋಲೇಷನ್‌ನಲ್ಲಿರುವವರಿಗೆ ಚಿಕಿತ್ಸೆ ನೀಡಲು ಆರೋಗ್ಯ ಸಹಾಯಕರು, ಆಶಾಕಾರ್ಯಕರ್ತರುಕಾರ್ಯನಿರ್ವಹಿಸ್ತುದ್ದಾರೆ.
ರೋಗ ಲಕ್ಷಣಗಳುಕಂಡು ಬಂದ ತಕ್ಷಣ ಕೋವಿಡ್ ಪರೀಕ್ಷೆಗೊಳಗಾಗುವ ಮೂಲಕ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು. ನಿರ್ಲಕ್ಷ್ಯ ಮಾಡಿ,ಕೊನೆಕ್ಷಣದಲ್ಲಿ ಆಸ್ಪತ್ರೆಗೆ ಬರುವುದರಿಂದ ತೊಂದರೆ ಹೆಚ್ಚಾಗಲಿದೆ.ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಜಿಲ್ಲೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು, ಶೀಘ್ರ ಗುಣಮುಖರಾಗುತ್ತಿದ್ದಾರೆ. – ಡಾ.ಟಿ.ಎನ್.ಧನಂಜಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಮಂಡ್ಯ
ರಾಜ್ಯಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಮಂಡ್ಯ, ಮದ್ದೂರಿನಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಕಂಡು ಬರುತ್ತಿದ್ದಾರೆ. ಆ ಎರಡು ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪರೀಕ್ಷೆಗಳನ್ನು ಹೆಚ್ಚು ಮಾಡಲಾಗಿದೆ. ಜನರು ಕೋವಿಡ್‌ನಿಯಮ ಪಾಲಿಸುವ ಮೂಲಕಕೊರೊನಾ ನಿಯಂತ್ರಣಕ್ಕೆಕೈಜೋಡಿಸಬೇಕು. – ಡಾ.ಎಚ್.ಪಿ.ಮಂಚೇಗೌಡ, ಡಿಎಚ್‌ಒ, ಮಂಡ್ಯ
– ಎಚ್. ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.