ಸಂಧ್ಯಾರಾಗದೊಳಗೆ ತಾಳ್ಮೆಯ ಗೆಲುವು


Team Udayavani, Sep 25, 2020, 9:38 PM IST

book talk 8

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕನ್ನಡದ ಮೇರು ಕಾದಂಬರಿಕಾರರಲ್ಲಿ ಆ.ನ. ಕೃಷ್ಣರಾಯರು ಓರ್ವರು. ಕನ್ನಡದ ಸಾರಸ್ವತ ಲೋಕಕ್ಕೆ ಇವರ ಕೊಡುಗೆ ಅಗ್ರಗಣ್ಯ.

ತಮ್ಮ ಕೃತಿ, ಕಾದಂಬರಿಗಳ ಮೂಲಕ ಪಾತ್ರಗಳಲ್ಲಿಯೇ ಬದುಕನ್ನು ಅನ್ವೇಷಿಸುವ ಇವರ ಬರೆಹದ ಶೈಲಿ ಅದ್ಭುತ. ಇದು ಓದುಗರನ್ನು ಹತ್ತಿರವಾಗಿಸುತ್ತದೆ. ಜೀವನ ಪ್ರೀತಿಯನ್ನು ಹೆಚ್ಚಿಸುತ್ತದೆ. ಈ ಸಾಲಿಗೆ “ಸಂಧ್ಯಾರಾಗ’ ಎಂಬ ಕಾದಂಬರಿ ಸೇರುತ್ತದೆ.

ಸಂಧ್ಯಾರಾಗ ಕಾದಂಬರಿಯೂ ದೀರ್ಘ‌ವಾದ ಅನುಭವ ಮತ್ತು ಜೀವನದ ಸಂಗತಿಯನ್ನು ಒಳಗೊಂಡಿದ್ದು, ಇದು ಪ್ರಭಾವಶಾಲಿಯಾಗಿ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಕನ್ನಡ ಮೇರು ಲೇಖಕ ವಿಎಂ ಇನಾಂದಾರ್‌ ಅವರು ಕೂಡ ಈ ಕಾದಂಬರಿಯನ್ನು ಓದಿ ಮುಗಿಸಿದ ಬಳಿಕ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ಕಾದಂಬರಿಯ ಕಥೆ ಎಳೆಯನ್ನು ನೋಡಿದರೆ, ಇದು ಕೂಡು ಕುಟುಂಬದ ಕಥೆ. ಶ್ರೀನಿವಾಸರಾಯರೆಂಬ ಗೌರವಾನ್ವಿತ ವ್ಯಕ್ತಿ , ಪತ್ನಿ ಮೀನಾಕ್ಷಮ್ಮ. ಮೀನಾಕ್ಷಮ್ಮ ಮನೆಗೆ ಭಾಗ್ಯವಂತಾಗಿದ್ದಳು. ಆದರೆ ಆಕೆಗೆ ಮಕ್ಕಳಾಗದ ಕಾರಣ ನಿರ್ಭಾಗ್ಯಳು ಎಂದು ಕೆಲವರು ಛೇಡಿಸಿದ್ದುಂಟು. ಆಗ ರಾಯರಿಗೆ ಇನ್ನೊಂದು ಮದುವೆ ಮಾಡಲು ಮುಂದಾಗಿ ದೂರದ ಸಂಬಂಧಿ ಸಾವಿತ್ರಿಯನ್ನು ರಾಯರಿಗೆ ತಂದು ಮದುವೆ ಮಾಡಿ ಸುತ್ತಾಳೆ.

ಕೆಲವು ದಿನಗಳಲ್ಲಿ ಮೀನಾಕ್ಷಮ್ಮ ಕೂಡ ಗರ್ಭ ಧರಿಸಿದಳು. ಇಬ್ಬರಿಗೂ ಗಂಡು ಮಕ್ಕಳು ಜನಿಸಿ, ರಾಮ, ಲಕ್ಷ್ಮಣ ಎಂದು ನಾಮಕರಣ ಮಾಡಿದರು.

ಒಂದು ದಿನ ತಮ್ಮ ಮನೆಯಲ್ಲಿದ್ದ ಗುಮಾಸ್ತನ ಕುಟುಂಬದ ಬಡತನವನ್ನು ಕಂಡ ರಾಯರು, ಗುಮಾಸ್ತನ ಸಂಬಂಧಿ ವೆಂಕಟೇಶ ಎಂಬ ಬಾಲಕನಿಗೆ “ನಾನು ವೆಂಕಟೇಶನಿಗೆ ವಿದ್ಯಾದಾನ ಮಾಡುತ್ತೇನೆ’ ಎಂದು ಮಾತುಕೊಟ್ಟರು. ರಾಯರು ಕೊಟ್ಟ ಮಾತಿನಂತೆಯೇ ವೆಂಕಟೇಶನನ್ನು ತಮ್ಮ ಮನೆಗೆ ಕರೆದುಕೊಂಡು ಬಂದರು.

ಹಿರಿಯ ಮಗ ರಾಮ ಎಲ್‌ಎಸ್‌ಬಿ ಪದವಿ ಪಡೆದ ಬಳಿಕ ಎಲ್ಲರೂ ಈತನನ್ನು ರಾಮಚಂದ್ರರಾಯರು ಎಂದು ಈತನನ್ನು ಕರೆಯಲಾರಂಭಿಸದರು. ಇದರಿಂದ ಈತ ಹಿಗ್ಗಿ ಜಂಭಕೊಚ್ಚಿಕೊಳ್ಳುತ್ತಿದ್ದ. ಆದರೆ ಲಕ್ಷ್ಮಣನಿಗೆ ಮಾತ್ರ ವಿದ್ಯೆ ತಲೆಗೆ ಹಚ್ಚಲಿಲ್ಲ. ಬದಲಿಗೆ ಆತನಿಗೆ ಸಂಗೀತವೇ ಉಸಿರಾಗಿತ್ತು. ಈತನಿಗೆ ಸಂಗೀತಾಭ್ಯಾಸ ಮುಂದೆ ಎಲ್ಲವೂ ಗೌಣ.

ಮುಂದೆ ಶ್ರೀನಿವಾಸರಾಯರು ಇಬ್ಬರಿಗೆ ಮದುವೆ ಮಾಡಿದರು. ವೆಂಕಟೇಶನಿಗೂ ತನ್ನ ಮಗಳನ್ನೇ ಕೊಟ್ಟು ಮದುವೆ ಮಾಡಿದರು. ರಾಮಚಂದ್ರ ರಾಯನ ಹೆಂಡತಿ ಶ್ರೀಮಂತ ಮನೆಯ ಮೂಲದವಳಾಗಿದ್ದರಿಂದ ಆತನ ಇನ್ನಷ್ಟು ಜಂಭಗೊಂಡಿದ್ದ.

ಮೀನಾಕ್ಷ್ಮಮ್ಮ ಸ್ವರ್ಗಸ್ಥರಾದರು. ಬಳಿಕ ರಾಯರು ಕೂಡ ಹಾಸಿಗೆಯಿಡಿದರು. ಆದರೆ ರಾಯರೂ ಕೂಡ ಬಹಳಷ್ಟು ದಿನ ಬದುಕಲಿಲ್ಲ. ಅವರು ಕೂಡ ಸ್ವರ್ಗಸ್ಥರಾದರು. ಬಳಿಕ ಮನೆಯ ಯಜಮಾನಿಕೆ ಹಿರಿ ಮಗ ರಾಮಚಂದ್ರರಾಯರಿಗೆ ಸೇರಿದ ಮೇಲೆ ಹೆಂಡತಿ ಜತೆಗೆ ಸೇರಿ ವೈಭೋಗದ ಜೀವನಕ್ಕೆ ಮುಂದಾದನು. ತಮ್ಮ ಲಕ್ಷ್ಮಣ, ಆತನ ಹೆಂಡತಿ ಹಾಗೂ ತಂಗಿ ಗಂಡ ವೆಂಕಟೇಶ ಇವರು ಮನೆಯಾಳುಗಳಂತೆ ದುಡಿಯಲಾರಂಭಿಸಿದರು.

ರಾಮಚಂದ್ರ ರಾಯರು ಹೈಕೋರ್ಟ್‌ ವಕೀಲರಾದ ಬಳಿಕ ಸಂಬಂಧಗಳನ್ನು ದೂರಲಾರಂಭಿಸದರು. ಹಣಕ್ಕೆ ಪ್ರಾಶಸ್ತ್ಯ ನೀಡಿದರು. ಆದರೆ ರಾಯರ ತಮ್ಮ ಲಕ್ಷ್ಮಣನ ಸಂಗೀತ ಅಭ್ಯಾಸಕ್ಕೆ ತೊಂದರೆ ಮಾಡಿ, ನೀನು ಮನೆಯಲ್ಲಿ ಸಂಗೀತಾಭ್ಯಾಸ ಮಾಡದಿರು ಆಜ್ಞೆ ಮಾಡಿ ಅವಮಾನಿಸದ. ಇದರಿಂದ ಒಂದು ದಿನ ಲಕ್ಷ್ಮಣ ಮನೆ ಬಿಟ್ಟು ಹೋದ. ಮುಂದೆ ಲಕ್ಷ್ಮಣ ತನ್ನ ಸಂಗೀತ ಶಿಕ್ಷಣಕ್ಕೆ, ಹಸಿವಿಗೆ ಊರುಗಳ ತಿರುಗಾಡಿದ ಬಳಿಕ ಅವರು ಒಬ್ಬ ಮಹಾನ್‌ ಸಂಗೀತ ದರ್ಶನವಾಗಿ ಈತನಿಗೆ ಸಂಗೀತ ಅಭ್ಯಾಸ ಹೇಳಿಕೊಟ್ಟರು. ಮುಂದೆ ದೊಡ್ಡ ಸಂಗೀತಗಾರನಾದ. ಆದರೆ ಅವರ ಅಣ್ಣ ಹಣ ಗಳಿಕೆಯ ಹಿಂದೆ ಬಿದ್ದು ಎಲ್ಲವನ್ನೂ ಕಳೆದುಕೊಂಡರು. ಆದರೆ ತಾಳ್ಮೆಯಿಂದ ಲಕ್ಷ್ಮಣ ರಾಯರು ತಮ್ಮ ಸಂಗೀತ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿದರು.

ಜೀವನದುದ್ದಕ್ಕೂ ಸುಖ ದುಃಖಗಳು ನಮ್ಮನ್ನು ಹಿಂಬಾಲಿಸುತ್ತವೆ, ನಾವು ನಮ್ಮವರು ನಮ್ಮ ಕುಟುಂಬ, ನಮ್ಮ ಸಮಾಜ ಎಂದು ತಿಳಿದಾಗಲೆ ನಮ್ಮತನ ಗೊತ್ತಾಗುತ್ತದೆ. ಈ ಸಂಧ್ಯಾರಾಗದಲ್ಲಿ ಅ.ನ. ಕೃಷ್ಣರಾಯರು ಸೃಷ್ಟಿಸಿದ ಲಕ್ಷ್ಮಣ ಈ ಸಾಲಿನಲ್ಲಿ ಬಂದು ನಿಲ್ಲುತ್ತಾರೆ.


ಸಿದ್ಧರಾಮೇಶ ರಾಮತ್ನಾಳ, ವಿಎಸ್‌ ಆರ್‌ ಕಾನೂನು ಕಾಲೇಜು, ಬಳ್ಳಾರಿ 

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

UV Fusion: ಪ್ರಕೃತಿ ಅವಶ್ಯ ಮನುಜನಿಗೆ

13

UV Fusion: ಎತ್ತ ಕಡೆ ಸಾಗುತ್ತಿದೆ ಈಗಿನ ಯುವ ಜನತೆ ?

12-uv-fusion

UV Fusion: ತಂಡ ಕಟ್ಟಿದ, ಗೆದ್ದ…

11-

Healthy lifestyle: ಸ್ವಸ್ಥ ಆರೋಗ್ಯಕ್ಕೆ ಸ್ವಸ್ಥ ಜೀವನ ಕ್ರಮ

10

UV Fusion: ಸಂಭ್ರಮದ ಹಬ್ಬಕ್ಕೆ ಬಾಂಧವ್ಯವೇ ಬೆಸುಗೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.