ನೆನಪುಗಳು ಸುಂದರ ಸೂತಕದಂತೆ… ನಲ್ಮೆಯ ನರಳಿಕೆಯಂತೆ…
Team Udayavani, Sep 26, 2020, 9:00 AM IST
ನನಗೊಂದು ಓಲೆ ಬರೆಯಬೇಕೆಂದು ಕುಳಿತೆರೆ ಅಕ್ಷರಗಳೇ ಮಾಯವಾಗಿ ಬಿಡುತ್ತದೆ. ಮನಸ್ಸೆಲ್ಲ ಮೌನವಾಗುತ್ತ ದೆ.
ನಿನ್ನ ನೆನಪುಗಳೇ ಒಮ್ಮೊಮ್ಮೆ ನನ್ನನ್ನು ಬಡಿದೆಬ್ಬಿಸುವುದಾದರರೂ ಅವೇ ಒಮ್ಮೊಮ್ಮೆ ನನ್ನನ್ನು ಜಡವಾಗಿಸುತ್ತದೆ. ನೀನಿಗಿಲ್ಲ ಎಂಬ ಒಂದು ಕಹಿ ವಾಸ್ತವ ನನ್ನ ಬದುಕನ್ನ ನೀರಸಗೊಳಿಸಿಬಿಡುತ್ತದೆ.
ಅದೆಂತಹ ನೆನಪುಗಳು ಅವು. ಮನದ ಪರದೆಯ ಮೇಲೆ ಸು#ಟವಾಗಿ ತಮ್ಮ ಅಚ್ಚೊತ್ತಿ ಬಿಟ್ಟಿವೆ. ಅದ್ಯಾವುದೋ ಮೂಲೆಯಲ್ಲಿ ನಿನ್ನ ಕಿರು ಬೆರಳ ಹಿಡಿದು ಹೆಜ್ಜೆ ಹಾಕಿದ ನೆನಪು… ಮತ್ತೆಲ್ಲೋ ಕೂತು ನೀನು ನನ್ನ ತೋಳ ತೆಕ್ಕೆಯಲ್ಲಿ ಬಂಧಿಯಾದ ನೆನಪು….ಸಣ್ಣ ಸಣ್ಣ ಕನಸುಗಳಿಗೆ ಬಣ್ಣ ಕೊಟ್ಟ ನೆನಪು ಎಲ್ಲವೂ ಹಾಗೆ ಗಂಗೆಯಷ್ಟೇ ಪವಿತ್ರ.
ಪವಿತ್ರ ಗಂಗೆಯೂ ಕಾಲದ ಕ್ರೂರ ತೆಕ್ಕೆಯಲ್ಲಿ ಮಲಿನವಾದಂತೆ ನಮ್ಮ ಪ್ರೀತಿಯೂ ಆಯಿತೇ? ಹೇಳಬೇಕೆಂದರೆ ನಿನ್ನ ನೆನಪುಗಳೇ ವಾಸಿ. ನೀನು ನನ್ನನ್ನು ಬಿಟ್ಟು ಹೋದಷ್ಟು ಬೇಗ ಅವು ಹೋಗುವುದಿಲ್ಲ. ಅವುಗಳಿಗೆ ಕರುಣೆಯಿದೆ. ನನಗೊಂದು ಅನುಮಾನ ನಾನು ನಿನಗಿಂತ ನಿನ್ನ ನೆನಪುಗಳನ್ನೇ ಹೆಚ್ಚು ಪ್ರೀತಿಸುತ್ತಿದ್ದೀನಾ? ಇನ್ನು ಮುಂದೆ ನೀನಿಲ್ಲದೆ ಇರಬಲ್ಲೆ, ಆದರೆ ನಿನ್ನ ನೆನಪುಗಳಿಲ್ಲದೆ.. ಕಷ್ಟವೆನಿಸುತ್ತದೆ. ನೆನಪುಗಳು ಸುಂದರ ಸೂತಕದಂತೆ, ನಲ್ಮೆಯ ನರಳಿಕೆಯಂತೆ ಇರುತ್ತದೆ.
ಯಾರಿಗೆ ಗೊತ್ತು ಹೇಳು? ಎಲ್ಲವೂ ಕಟು ವಾಸ್ತವದ ಕೈವಾಡ. ವಾಸ್ತವದ ಸತ್ಯಗಳು ಎಂಥವರ ಭಾವಾ ಲೋಕವನ್ನೂ ಛಿದ್ರಗೊಳಿಸಿಬಿಡೆತ್ತದೆ. ಯಾರು ಎಷ್ಟೆ ಸ್ವಾತಂತ್ರ್ಯವಾರಾದರೂ ಎಲ್ಲರೂ ವಾಸ್ತವಿಕತೆಯ ಬಂಧಿಗಳು. ಬದುಕನ್ನ ಕಿತ್ತು ತಿನ್ನುವುದೇ ಕಟು ವಾಸ್ತವತೆ.
ಹೋಗಲಿ ಬಿಡು. ಹೇಳುವುದೇ ಮರೆತಿದ್ದೆ ನೀನು ನನ್ನೊಂದಿಗೆ ಇದ್ದಾಗ ಯಾವಾಗಲು ಒಂದು ಕವನ ಬರೆಯೋ ನನಗಾಗಿ ಎನ್ನುತ್ತಿದೆ. ಗೊತ್ತಾ ನಿನಗೆ, ನೀನು ಹೋದ ಮೆಲೆ ಡೈರಿಯ ಪುಟದಲೆಲ್ಲಾ ಸಾಲುಗಳು. ಸಾಲು ಸಾಲು ಭಾವಗಳು…..ಆದರೆ ಎಲ್ಲ ಅರ್ಧ ಬರೆದವು. ಅದಕ್ಕೊಂದು ಪೂರ್ಣ ವಿರಾಮ ಕೊಡೋಣವೆಂದರೆ ಹಾಳಾದ ಪದಗಳೇ ನೆನಪಾಗೋಲ್ಲ.
ಒಮ್ಮೊಮ್ಮೆ ಅನಿಸುತ್ತದೆ ನೀನಿಲ್ಲದೆ ಇರಬೇಕೆಂದು. ಬಂದಾಗ ಒಂಟಿ ಹೋಗುವಾಗ ಒಂಟಿ ಎಂಬ ಯಾರೋ ಹೇಳಿದ ಹಾಳಾದ ತತ್ವಗಳು ನೆನಪಾಗಿ ಸಮಾಧಾನ ಹೇಳುತ್ತದೆ. ಆದರೆ ಮಧ್ಯದಲ್ಲಿ ಒಂಟಿಯಾಗೇ ಇದ್ದರೆ ಮನಸ್ಸೆಲ್ಲಾ ಖಾಲಿಯಲ್ಲವೇ. ಒಂದಷ್ಟಾದರೂ ಇಲ್ಲಿಂದ ಹೊತ್ತು ಹೋಗಬೇಕೆಂದರೆ ಒಬ್ಬರಾದರೂ ನಮಗಾಗಿ ಬೇಕಲ್ಲವೇ ಎನಿಸುತ್ತದೆ. ಮನಸ್ಸು ಮರ್ಕಟ ಎಂಬುದು ಮಾತ್ರ ಸತ್ಯ. ನೀನಿದ್ದ ಜೀವನಕ್ಕೆ ಹೊಂದಿಕೊಂಡಷ್ಟು ಬೇಗ ಹಾಳಾದ ಮನಸ್ಸು ನೀನಿಲ್ಲದ ಜೀವನಕ್ಕೆ ಹೊಂದಿಕೊಳ್ಳುತಿಲ್ಲ.
ಮತ್ತೂಮ್ಮೆ ಹೇಳುತ್ತೀನಿ ಗೆಳತಿ, ಸಿಗುವುದಾದರೆ ಸಿಗು ಕತ್ತಲು ಕಳೆಯುವ ಮುನ್ನ… ನಕ್ಷತ್ರಗಳು ಮಾಯವಾಗುವ ಮುನ್ನ…. ರಾತ್ರಿಯ ಕಡುಗಪ್ಪು ಮಾಸುವ ಮುನ್ನ ಇರುಳಿನ ಸವಿ ತಂಪು ಇಬ್ಬನಿಯಾಗಿ ಕರಗುವ ಮುನ್ನ… ಬೆಳಗೊಂದು ಅರಳಿ, ತಂಗಾಳಿ ಬೀಸಿ ಮತ್ತೂಂದು ವಿರಹದ ಹಗಲು ಜೀವ ತಾಳುವ ಮುನ್ನ.
ರೋಹಿತ್ ಬಾಸ್ರಿ , ಜೈನ್ ಕಾಲೇಜು, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.