LinkedIn ಪರಿಚಯಿಸುತ್ತಿದೆ ಹಲವು ಹೊಸ ಫೀಚರ್: ಏನಿದರ ವೈಶಿಷ್ಟ್ಯತೆ ?
Team Udayavani, Sep 26, 2020, 6:38 PM IST
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಲಿಂಕ್ಡ್ ಇನ್ ಇದೀಗ ಹಲವು ಹೊಸ ಫೀಚರ್ ಗಳನ್ನು ಒಮ್ಮೆಲೆ ಪರಿಚಯಿಸಿದೆ. ಎಲ್ಲಾ ಫೀಚರ್ ಗಳು ಕೂಡ ಬಳಕೆದಾರರ ಸ್ನೇಹಿಯಾಗಿದ್ದು, ಬಹಳಷ್ಟು ಕುತೂಹಲ ಕೆರಳಿಸಿದೆ.
ಪ್ರಮುಖವಾಗಿ ವಿಡಿಯೋ ಕಾಲಿಂಗ್ ಫೀಚರ್ ಹೊರತರಲಾಗಿದ್ದು, ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಬಳಕೆದಾರರು ಸುಲಭವಾಗಿ ಮತ್ತೊಬ್ಬರಿಗೆ ವಿಡಿಯೋ ಕರೆ ಮಾಡಬಹುದಾಗಿದೆ. ಇದಕ್ಕಾಗಿ ಮೈಕ್ರೋಸಾಫ್ಟ್ ಟೀಮ್ಸ್ ಬ್ಲೂ ಜೀನ್ಸ್, ವೇರಿಜಾನ್, ಜೂಮ್ ಆ್ಯಪ್ ಗಳ ನೆರವು ಪಡೆಯಬಹುದಾಗಿದೆ.
ಮತ್ತೊಂದು ಹೊಸ ಫೀಚರ್ ಎಂದರೇ ಮೆಸೇಜ್ ಗಳನ್ನು ಎಡಿಟ್ ಅಥವಾ ಡಿಲೀಟ್ ಮಾಡುವುದು. ಇದರ ಸಹಾಯದಿಂದ ಅಚಾನಕ್ಕಾಗಿ ಸೆಂಡ್ ಆದ ಅಥವಾ ಅನಗತ್ಯವಾಗಿ ಸೆಂಡ್ ಆದ ಮೆಸೇಜ್ ಗಳ ಡಿಲೀಟ್ ಅಥವಾ ಎಡಿಟ್ ಮಾಡಬಹುದಾಗಿದೆ.
ಇಮೋಜಿಗಳನ್ನು ಕೂಡ ನೂತರ ಫೀಚರ್ ಗಳಲ್ಲಿ ಅಳವಡಿಸಲಾಗಿದ್ದು ಬಳಕೆದಾರರು ಯಾವುದೇ ಸಂದೇಶಗಳಿಗೆ ಇದರ ಮೂಲಕ ರಿಪ್ಲೈ ಮಾಡಬಹುದಾಗಿದೆ. ಮಾತ್ರವಲ್ಲದೆ ಬಳಕೆದಾರರು ಇದೀಗ ಒಮ್ಮೆಲೇ ಎಲ್ಲಾ ಮೆಸೇಜ್ ಗಳನ್ನು ಡಿಲೀಟ್ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.
ಗಮನಾರ್ಹ ಸಂಗತಿಯೆಂದರೇ ಲಿಂಕ್ಡ್ ಇನ್ ನಲ್ಲಿ ಯಾವುದೇ ವ್ಯಕ್ತಿಗಳಿಂದ ಅನಗತ್ಯ ಮತ್ತು ಅಶ್ಲೀಲ ಸಂದೇಶಗಳು ಬಂದರೆ ಈ ಕುರಿತು ವರದಿ ಸಲ್ಲಿಸಬಹುದು. ಮಾತ್ರವಲ್ಲದೆ ಬ್ಲಾಕ್ ಕೂಡ ಮಾಡಬಹುದು.
ಲಿಂಕ್ಡ್ ಇನ್ ಬಳಕೆದಾರರು ಇತರರನ್ನು ಚಾಟಿಂಗ್ ಆಹ್ವಾನಿಸಬಹುದು. ಮಾತ್ರವಲ್ಲದೆ ಗ್ರೂಪ್ ರಚಿಸುವ ಆಯ್ಕೆಯನ್ನು ಕೂಡ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.