ಇಂದಿನಿಂದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಸಾವಿರ ವೀಕ್ಷಕರಿಗೆ ಪ್ರವೇಶ
Team Udayavani, Sep 27, 2020, 9:56 AM IST
ಪ್ಯಾರಿಸ್: ರವಿವಾರದಿಂದ ಆರಂಭಗೊಳ್ಳಲಿರುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪ್ರತೀ ದಿನದ ಪಂದ್ಯಗಳಿಗೆ ಸೀಮಿತ ಸಂಖ್ಯೆಯ ಪ್ರೇಕ್ಷಕರಿಗೆ ಪ್ರವೇಶ ನೀಡುವಂತೆ ಫ್ರಾನ್ಸ್ ಸರಕಾರ ಸೂಚಿಸಿದೆ.
ದೇಶದ ಕ್ರೀಡಾಕೂಟಗಳಿಗಾಗಿ ಫ್ರಾನ್ಸ್ ಸರಕಾರ ನೂತನ ಕೋವಿಡ್-19 ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಇದರಲ್ಲಿ ಪ್ರಮುಖ ಟೂರ್ನಿಯಾದ ಫ್ರೆಂಚ್ ಓಪನ್ಗೂ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ.
ಅದರಂತೆ, “ರೊಲ್ಯಾಂಡ್ ಗ್ಯಾರೋಸ್’ನ ವಿವಿಧ ಟೆನಿಸ್ ಅಂಕಣಗಳಲ್ಲಿ ನಡೆಯಲಿರುವ ಫ್ರೆಂಚ್ ಓಪನ್ ಕೂಟದ ಪಂದ್ಯಗಳನ್ನು ನೋಡಲು ಒಂದು ದಿನಕ್ಕೆ 1,000 ಮಂದಿ ಪ್ರೇಕ್ಷಕರಿಗೆ ಮಾತ್ರ ಅವಕಾಶ ಸಿಗಲಿದೆ.
ಇದನ್ನೂ ಓದಿ: ರಾಹುಲ್ Vs ಸ್ಮಿತ್: ರಾಜಸ್ಥಾನಕ್ಕೆ ಬಟ್ಲರ್ ಬಲ; ಪಂಜಾಬ್ ನಿರಾಳ
ಈ ಕುರಿತಂತೆ ವಿವರಣೆ ನೀಡಿರುವ ಫ್ರಾನ್ಸ್ ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್, “ಕ್ರೀಡಾ ಚಟುವಟಿಕೆಗಳಿಗೆ ವಿಧಿಸಲಾಗಿರುವ ನಿರ್ಬಂಧಗಳು ಫ್ರೆಂಚ್ ಓಪನ್ಗೂ ಅನ್ವಯಿಸುತ್ತವೆ. ಮುನ್ನೆಚ್ಚರಿಕೆ ಕ್ರಮವಾಗಿ, ಫ್ರೆಂಚ್ ಓಪನ್ ಕೂಟದ ದಿನದ ಪ್ರೇಕ್ಷಕರ ಸಂಖ್ಯೆಯನ್ನು 5,000ದಿಂದ 1,000ಕ್ಕೆ ಇಳಿಸಲಾಗಿದೆ’ ಎಂದಿದ್ದಾರೆ.
ವರ್ಷಾಂತ್ಯದ ಕೂಟ
ಸಾಮಾನ್ಯವಾಗಿ ಫ್ರೆಂಚ್ ಓಪನ್ ವರ್ಷದ ದ್ವಿತೀಯ ಗ್ರ್ಯಾನ್ಸ್ಲಾಮ್ ಪಂದ್ಯಾವಳಿ ಎನಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ಕೋವಿಡ್19 ಸೋಂಕಿನಿಂದ ವರ್ಷಾಂತ್ಯದ ಗ್ರ್ಯಾನ್ಸ್ಲಾಮ್ ಕೂಟವಾಗಿದೆ. ವರ್ಷದ ಅಂತಿಮ ಕೂಟವಾಗಬೇಕಿದ್ದ ಯುಎಸ್ ಓಪನ್ ಈ ಬಾರಿಯ ದ್ವಿತೀಯ ಟೂರ್ನಿ ಎನಿಸಿತು. ಸಕಾಲದಲ್ಲಿ ನಡೆದ ಗ್ರ್ಯಾನ್ಸ್ಲಾಮ್ ಕೂಟವೆಂದರೆ ಆಸ್ಟ್ರೇಲಿಯನ್ ಓಪನ್ ಮಾತ್ರ. ಈ ವರ್ಷದ ವಿಂಬಲ್ಡನ್ ಕೂಟವನ್ನು ರದ್ದುಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.