ವಶಕ್ಕೆ ಪಡೆದ ಗಾಂಜಾವನ್ನು ಪೆಡ್ಲರ್ಗೆ ಮಾರಿದ ಪೊಲೀಸರು!
Team Udayavani, Sep 27, 2020, 11:38 AM IST
ಹೊಸದಿಲ್ಲಿ: ಡ್ರಗ್ ಪೆಡ್ಲರ್ಗಳಿಂದ ಬರೋಬ್ಬರಿ 160 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದರೂ, 1ಕೆ.ಜಿ. ಮಾತ್ರ ಎಂದು ಸುಳ್ಳು ಹೇಳಿದ ಪೊಲೀಸರು, ಉಳಿದ 159 ಕೆ.ಜಿ. ಗಾಂಜಾವನ್ನು ಆತನಿಗೇ ಮಾರಾಟ ಮಾಡಿ ಹಣ ಪಡೆದ ಅಚ್ಚರಿಯ ಘಟನೆ ಸಂಭವಿಸಿದೆ.
ಘಟನೆ ಸಂಬಂಧ ದಿಲ್ಲಿ ಪೊಲೀಸ್ ಇಲಾಖೆಯ ಇಬ್ಬರು ಸಬ್ಇನ್ಸ್ಪೆಕ್ಟರ್ಗಳು ಸೇರಿದಂತೆ ನಾಲ್ವರು ಸಿಬಂದಿಯನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಮಂಗಳೂರು ಡ್ರಗ್ಸ್ ಪ್ರಕರಣ: ಸಿಸಿಬಿ ಪೋಲಿಸರಿಂದ ಮತ್ತೊಬ್ಬ ಡ್ರಗ್ಸ್ ಪೆಡ್ಲರ್ ಬಂಧನ
ಒಡಿಶಾದಿಂದ ಗಾಂಜಾ ತಂದಿದ್ದ ಅನಿಲ್ ಎಂಬಾತನಿಂದ ಪೊಲೀಸರು 160 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದರು. ಆದರೆ ದಾಖಲೆಯಲ್ಲಿ 1 ಕೆ.ಜಿ. ಎಂದಷ್ಟೇ ಬರೆದುಕೊಂಡು, ಉಳಿದ ಗಾಂಜಾವನ್ನು ಆತನಿಗೇ ವಾಪಸ್ ನೀಡಿ, ಲಂಚದ ರೂಪದಲ್ಲಿ ಹಣ ಪಡೆದಿದ್ದರು. ಈ ಕುರಿತು ಅನುಮಾನ ಬಂದು ಮೇಲಧಿಕಾರಿಗಳು ತನಿಖೆಗೆ ಆದೇಶಿಸಿದಾಗ, ವಿಚಾರ ಬೆಳಕಿಗೆ ಬಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.