ಜ್ವಾಲಾಮುಖಿ ಸ್ಫೋಟದಿಂದ ಉಂಟಾದ ಸುಂದರ ಪ್ರವಾಸಿ ತಾಣ, ಇಲ್ಲಿದೆ ಎಮರಾಲ್ಡ್ ಐಲ್ಯಾಂಡ್ ಪರಿಚಯ !
Team Udayavani, Sep 27, 2020, 12:17 PM IST
ಬೆಂಗಳೂರು: ಮೂರು ತಿಂಗಳ ವೀಸಾ ಪಡೆದು ಐರ್ಲೆಂಡ್ ನ ಡಬ್ಲಿನ್ ವಿಮಾನ ನಿಲ್ದಾಣದಲ್ಲಿ ಇಳಿದಾಗ ರಾತ್ರಿ ಏಳರ ಸಮಯ. ಸಣ್ಣಗೆ ಮಂಜಿನ ಮಳೆಯಿಂದಾಗಿ ಛಳಿಗಾಳಿ ಬೀಸುತ್ತಿತ್ತು. ಎಮರಾಲ್ಡ್ ಐಲ್ಯಾಂಡ್ ಎಂದು ಕರೆಯಲ್ಪಡುವ ಈ ದೇಶ ನಿಜಕ್ಕೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.
ಪ್ರತಿ ಶನಿವಾರ ಅಥವಾ ಭಾನುವಾರ ಇಲ್ಲಿ ಪ್ರವಾಸ ಆರಂಭವಾಗುತ್ತದೆ. ಉತ್ತರ ಐರ್ಲೆಂಡ್ ಬ್ರಿಟಿಷ್ ಆಳ್ವಿಕೆಯಲ್ಲಿದ್ದು, ಇಲ್ಲಿಯ ಕ್ಯಾರಿಕ್-ಒ-ರೀಡ್ (Carrik O reed) Gaints causeway, ಸುಂದರವಾದ ಪ್ರವಾಸ ತಾಣ. ಅರವತ್ತು ಸಾವಿರ ವರ್ಷಗಳ ಹಿಂದೆ ಜ್ವಾಲಾಮುಖಿಯ ಸ್ಫೋಟದಿಂದ ಉಂಟಾದ ಸುಮಾರು ನಲವತ್ತು ಸಾವಿರ ಬೆಸಾಲ್ಟ್ ಕಂಬಗಳು ಧೀಮಂತವಾಗಿ ನಿಂತಿರುವ ಕಡಲ ತೀರ. ಕೆಲವು ಕಂಬಗಳಿಗೆ 4, 5, 7 ಹಾಗು 8 ಬದಿಗಳಿವೆ. 6 ಬದಿಗಳ (hexagon) ಕಂಬಗಳೇ ಜಾಸ್ತಿಯಾಗಿ ಕಾಣಸಿಗುತ್ತದೆ.
ಘನೀಭೂತ ಲಾವಾದ ಈ ಕಲ್ಲುಗಂಬಗಳ ಗರಿಷ್ಟ ಎತ್ತರ 12 ಮೀಟರ್ ಅಂದರೆ 39 ಅಡಿಗಳು. ಕೆಲವು ಕಡೆ ಕ್ಲಿಫ್ ಗಳಲ್ಲಿ 28 ಮೀಟರ್ ಇದ್ದು ಮಜಬೂತಾಗಿ ಇವೆ. ಶತಮಾನಗಳ ಇತಿಹಾಸ ಹೊಂದಿರುವ ಈ ಕಲ್ಲು ಕಂಬಗಳು ಕಾಲನ ಹೊಡೆತ ಎದುರಿಸಿ ನಿಂತಿರುವ ಉದಾಹರಣೆಗಳು. ಇದೆಲ್ಲವನ್ನೂ ದಾಟಿ ಮುಂದೆ ಸಿಗುವುದೇ ಕ್ಯಾರಿಕ್-ಒ-ರೀಡ್. ಬ್ಯಾಲಿಂಟಾಯ್, ಅಂಟ್ರಿಮ್ ಕೌಂಟಿಯಲ್ಲಿ ಪವಡಿಸಿರುವ ಈ ಸುಂದರ ಸಮುದ್ರತೀರ ನಯನ ಮನೋಹರ.
ಇಲ್ಲಿ ಅನತಿ ದೂರದಲ್ಲಿ ಇರುವ ಒಂದು ದ್ವೀಪಕ್ಕೆ ಹೋಗಲು ವೈರಿನ ರೋಪ್ ಸೇತುವೆಯನ್ನು ನಿರ್ಮಿಸಿದ್ದಾರೆ. 20 ಮೀಟರ್ ಉದ್ದ ಇರುವ ಈ ಸೇತುವೆ ಭೋರ್ಗರೆಯುವ ಸಮುದ್ರದ ಮೇಲೆ 30 ಮೀಟರ್ ( 98 ಅಡಿಗಳು) ಎತ್ತರದಲ್ಲಿ ಇದೆ. ಬೆಟ್ಟದಿಂದ ದೂರದಲ್ಲಿ ಸ್ಕಾಟ್ಲೆಂಡ್ ಹಾಗು ಲಾತ್ಲಿನ್ ದ್ವೀಪವನ್ನು ನೋಡಬಹುದು. ಹದಿನಾರು ಸಾವಿರ ಪೌಂಡು ವೆಚ್ಚದಲ್ಲಿ ಕಟ್ಟಿರುವ ಈ ಹಗ್ಗದ ತೂಗು ಸೇತುವೆಯ ಮೇಲೆ ಒಂದು ಸಲಕ್ಕೆ ಎಂಟು ಮಂದಿ ನಡೆದು ಹೋಗಬಹುದು. ಇದೊಂದು ಅದ್ಭುತವಾದ ಅನುಭವ.
ಸಸ್ಯಾಹಾರ ಸಿಗದೆ ಇರುವುದರಿಂದ ನಾವು ಮನೆಯಿಂದ ಕೊಂಡು ಹೋದ ಆಹಾರವನ್ನು ಸೇವಿಸುತ್ತಾ ನಯನ ಮನೋಹರ ಪ್ರಕೃತಿಯ ಮಡಿಲಲ್ಲಿ ಒಂದಾದೆವು. ಈ ಪ್ರದೇಶ ನ್ಯಾಷನಲ್ ಟ್ರಸ್ಟ್ ಅಡಿ ಇದ್ದು ಯುನೆಸ್ಕೋ ನಿಂದ World Heritage ಎಂದು ಘೋಷಿಸಲ್ಪಟ್ಟಿದೆ.
-ನಾಗಮಣಿ ನಾರಾಯಣ
ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ
ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಬಸ್ ತಂಗುದಾಣಗಳೇ ಮಾಯ; ಜನರು ಅಯೋಮಯ!
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.