ಪಕ್ಷ ಸೂಚನೆ ನೀಡಿದ ತಕ್ಷಣ ಸಚಿವ ಸ್ಥಾನದಿಂದ ಕೆಳಕ್ಕಿಳಿಯುತ್ತೇನೆ: ಸಿ.ಟಿ.ರವಿ
Team Udayavani, Sep 27, 2020, 1:18 PM IST
ಬೆಂಗಳೂರು: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ನಾನು ನಿರೀಕ್ಷೆ ಮಾಡಿರಲಿಲ್ಲ ಯಾವುದೇ ಆಸೆ ಇಟ್ಟುಕೊಂಡು ಕೆಲಸ ಮಾಡಿದವನಲ್ಲ. ಪಕ್ಷ ನಿಷ್ಠೆ, ಪರಿಶ್ರಮದ ಸೂತ್ರ ನನ್ನದು. ಪಕ್ಷ ನಿಷ್ಠೆಯನ್ನು ಇಲ್ಲಿಯವರೆಗೂ ಬಿಟ್ಟಿಲ್ಲ ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸಿದ್ದೇನೆ ಎಂದು ಸಚಿವ ಸಿ ಟಿ ರವಿ ಹೇಳಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್ ಕುಮಾರ್ ಇಂತಹ ಹುದ್ದೆಯಲ್ಲಿದ್ದರು. ಅವರ ಎತ್ತರಕ್ಕೆ ನಾನು ಬೆಳೆಯೋಕೆ ಆಗಲ್ಲ. ಆದರೆ ಅವರ ಎತ್ತರಕ್ಕೆ ಬೆಳೆಯುವ ಪ್ರಯತ್ನ ಮಾಡುತ್ತೇನೆ. ನಮ್ಮ ಪಕ್ಷದಲ್ಲಿ ಮಾತ್ರ ಇಂತಹ ಅವಕಾಶ ಸಿಗುತ್ತದೆ. ನಾನು ಮಾತೃ ಸ್ಥಾನದಲ್ಲೇ ಇರುವವನು, ದೆಹಲಿ ಮಟ್ಟದಲ್ಲಿ ನಾನು ರಾಜಕಾರಣ ಮಾಡಲ್ಲ. ರಾಜ್ಯ ಮಟ್ಟದಲ್ಲಿಯೇ ನಾನು ಇರುತ್ತೇನೆ. ನನ್ನ ಮೊದಲ ಆಯ್ಕೆ ಪಕ್ಷ ಸಂಘಟನೆ ಎಂದರು.
ಇದನ್ನೂ ಓದಿ: ತೇಜಸ್ವಿಗೆ ಯುವ ಮೋರ್ಚಾ ಹೊಣೆ, ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಿ.ಟಿ. ರವಿ
ಸಚಿವ ಸ್ಥಾನದ ತ್ಯಜಿಸಲು ನಾನು ಸಿದ್ದನಿದ್ದೇನೆ. ಪಕ್ಷ ಯಾವಾಗ ಸೂಚನೆ ಕೊಡುತ್ತದೆಯೋ ಆಗ ನಾನು ಸಚಿವ ಸ್ಥಾನದಿಂದ ಇಳಿಯುತ್ತೇನೆ. ಯಾವ ಘಳಿಗೆಯಲ್ಲಿ ಪಕ್ಷ ಸೂಚನೆ ಕೊಡುತ್ತದೆಯೋ ಆಗ ಕೆಳಗಿಳಿಯುತ್ತೇನೆ ನನ್ನದೇನಿದ್ದರು ಪಕ್ಷ ಸಂಘಟನೆ ಮುಖ್ಯ ಉದ್ದೇಶ ಸಚಿವ ಸಿ.ಟಿ.ರವಿ ಸ್ಪಷ್ಟನೆ ಹೇಳಿದರು.
ರೈತ ಮುಖಂಡರ ಬಂದ್ ವಿಚಾರ
ಹತ್ತು ವ್ಯಾಪಾರಿಗಳು ಬಂದರೆ ರೈತರಿಗೆ ಒಳ್ಳೆಯದು. ರೈತರ ಮನೆ ಬಾಗಿಲಿಗೆ ವ್ಯಾಪಾರಿಗಳು ಬರುತ್ತಾರೆ. ರೈತರಿಗೆ ನ್ಯಾಯಯುತವಾದ ಬೆಲೆ ಸಿಗುತ್ತದೆ. ನಾವು ಬೆಳೆದ ಬೆಳೆಗೆ ನಾವು ಬೆಲೆ ಕಟ್ಟಬೇಕು. ಅಂತಹ ಕಾಲ ಇದೀಗ ಬರುತ್ತಿದೆ. ರಾಜಕೀಯ ಪ್ರಚೋದನೆಗೆ ಒಳಗಾಗಬೇಡಿ ಎಂದ ಅವರು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೇ ಇದನ್ನು ಹೇಳಿದ್ದರು ಈಗ ಎಪಿಎಂಸಿ ಕಾಯ್ದೆ ವಿರೋಧಿಸುವುದು ಏಕೆ? ಸಿ.ಟಿ.ರವಿ ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್ ಜಾರಕಿಹೊಳಿ
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.