ಜಿಲ್ಲೆಯ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಜನಾಭಿಪ್ರಾಯ ಸಂಗ್ರಹ : ದಕ್ಷಿಣ ಕನ್ನಡ ಡಿಸಿ
Team Udayavani, Sep 27, 2020, 3:58 PM IST
ಸುರತ್ಕಲ್ : ಜಿಲ್ಲೆಯಲ್ಲಿರುವ ಪ್ರವಾಸಿ ಸ್ಥಳಗಳನ್ನು ಯಾವ ರೀತಿ ಅಭಿವೃದ್ಧಿ ಪಡಿಸಬಹುದು ಹಾಗೂ ಹೊಸ ಪ್ರವಾಸಿ ಸ್ಥಳಗಳನ್ನು ಉತ್ತೇಜಿಸುವ ಕುರಿತಾಗಿ ಒಂದು ತಿಂಗಳ ಕಾಲ ಜನಾಭಿಪ್ರಾಯ ಸಂಗ್ರಹ ಮಾಡಿ ಯೋಜನೆ ರೂಪಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಹೇಳಿದರು.
ಜಿಲ್ಲಾಡಳಿತ, ಪ್ರವಾಸೋಧ್ಯಮ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಆಶ್ರಯದಲ್ಲಿ ಮತ್ತು ಯೋಜಕ ಇಂಡಿಯಾ ಪ್ರೈ.ಲಿ ಇದರ ಸಹಕಾರದಲ್ಲಿ ತಣ್ಣೀರುಬಾವಿ ಸಮುದ್ರ ತೀರದಲ್ಲಿ ಆಯೋಜಿಸಲಾದ ವಿಶ್ವ ಪ್ರವಾಸೋಧ್ಯಮ ದಿನಾಚರಣೆ, ಸ್ವಚ್ಚತಾ ಪಕ್ವಾಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಸೋಂಕಿನ ಹಾವಳಿಯಿಂದ ಪ್ರವಾಸೋಧ್ಯಮಕ್ಕೆ ಪರೋಕ್ಷವಾಗಿ ಧಕ್ಕೆಯಾಗಿದೆ. ಇದೀಗ ರಾಜ್ಯದೊಳಗೆ ಅನ್ಯ ಜಿಲ್ಲೆಯ ಜನರನ್ನು ಆಕರ್ಷಿಸಿ ಪ್ರವಾಸೋಧ್ಯಮ ಮತ್ತು ಪೂರಕ ಚಟುವಟಿಕೆಗೆ ಉತ್ತೇಜನ ನೀಡಬೇಕಿದೆ. ಜನರಿಂದ ಅಭಿಪ್ರಾಯ ಸಂಗ್ರಹಿಸುವ ಮೂಲಕ ನಮ್ಮಲ್ಲಿರುವ ಪ್ರವಾಸಿ ಸ್ಥಳಗಳಲ್ಲಿ ಸೌಲಭ್ಯ ಒದಗಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು. ಇದಕ್ಕಾಗಿ ವಾಟ್ಸಪ್ ಮತ್ತು ಇಮೈಲ್ ವಿಳಾಸವನ್ನು ನೀಡಲಾಗುವುದು. ಜನತೆ ತಮ್ಮ ಅಭಿಪ್ರಾಯ ಮಂಡಿಸಬಹುದು ಎಂದರು.
ಇದನ್ನೂ ಓದಿ:ಕರ್ನಾಟಕ ಬಂದ್ ಇದ್ದರೂ ಬಸ್ ವ್ಯವಸ್ಥೆ ಎಂದಿನಂತೆ ಇರಲಿದೆ: ಡಿಸಿಎಂ ಸವದಿ
ಜಿಲ್ಲೆಯ ಬೀಚ್ ಜತೆಗೆ ದೇವಸ್ಥಾನ, ಪ್ರೇಕ್ಷಣೀಯ ಸ್ಥಳಗಳಲ್ಲಿ ಸೌಲಭ್ಯ ಒದಗಿಸುವುದರ ಜತೆಗೆ ಹೊಸ ಸ್ಥಳಗಳನ್ನು ಗುರುತಿಸಿ ಸರಕಾರದ ಮಟ್ಟದಲ್ಲಿ ಇಲ್ಲವೆ ಖಾಸಗೀ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಬೇಕಿದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ 17 ಕೋಟಿ ರೂ.ವೆಚ್ಚದಲ್ಲಿ ವಿವಿಧ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ ಎಂದರು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮಾತನಾಡಿ ಕೋವಿಡ್ ಸಮಯದಲ್ಲಿ ಲಾಕ್ ಡೌನ್ ನಿಂದಾಗಿ ಪರಿಸರ ಮತ್ತೆ ಸ್ವಚ್ಚವಾಗುವತ್ತಾ ಸಾಗಿದೆ. ಜನರ ಓಡಾಟ ಅಧಿಕವಾದೊಡನೆ ಮಾಲಿನ್ಯ ಕಂಡು ಬರುತ್ತದೆ. ಇಕೋ ಪ್ರವಾಸೋಧ್ಯಮ ಅಭಿವೃದ್ಧಿಗೆ ಇದು ಸುಸಂದರ್ಭ ಎಂದರು.
ಇದನ್ನೂ ಓದಿ:ಭಾರಿ ಮಳೆಗೆ ಕುಸಿದು ಬಿತ್ತು ಹೊಸೂರು ಸೇತುವೆ : ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ
ಕಾರ್ಯಕ್ರಮದಲ್ಲಿ ಯೋಜಕ ಇಂಡಿಯಾ ಇದರ ಆಡಳಿತ ನಿರ್ದೇಶಕ ಜಗದೀಶ ಬೋಳೂರು, ಹೋಟೆಲ್ ಎಸೋಸಿಯೇಷನ್ ನ ಚಂದ್ರಹಾಸ ಶೆಟ್ಟಿ, ಪಾಲಿಕೆ ಸದಸ್ಯೆ ಸುನೀತ, ಕೆನರಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಐಸಕ್ ವಾಝ್ ಮತ್ತಿತರರು ಉಪಸ್ಥಿತರಿದ್ದರು. ಸೋಮಶೇಖರ್ ಸ್ವಾಗತಿಸಿದರು. ಮಂಜುನಾಥ್ ನಿರೂಪಿಸಿದರು.
ವಿಶ್ವ ಪ್ರವಾಸೋಧ್ಯಮದ ಅಂಗವಾಗಿ ಬೀಚ್ ವಾಲಿಬಾಲ್, ಸ್ವ ರಕ್ಷಣೆಯ ತರಬೇತಿ,ಫಿಟ್ನೆಸ್ ತರಬೇತಿ, ಸ್ವಚ್ಚತಾ ಪಕ್ವಾಡ, ಸಸಿ ಸಂರಕ್ಷಣೆ ಸಹಿತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ಸಂದರ್ಭ ಬೀಚ್ನಲ್ಲಿ ಎಚ್ಚರಿಕೆ ಫಲಕವನ್ನು ಜಿಲ್ಲಾಧಿಕಾರಿ
ಅನಾವರಣಗೊಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.